ಚಾಮರಾಜನಗರ: ಜಿಲ್ಲಾ ಪೊಲೀಸ್ ಇಲಾಖೆಯಿಂದ ಬೈಕ್ ರ್ಯಾಲಿ ಯಶಸ್ವಿ

  • ಪ್ರತಿಯೊಬ್ಬರೂ ರಸ್ತೆ ಸಂಚಾರ ನಿಯಮ ಪಾಲಿಸಿರಿ: ಎಸ್ ಪಿ ಮುತ್ತುರಾಜು
  • ಅಪಘಾತ ಮುಕ್ತ ಸಮಾಜಕ್ಕಾಗಿ ಪೊಲೀಸರೊಂದಿಗೆ ಸಹಕರಿಸಬೇಕು

ಚಾಮರಾಜನಗರ: ಜಿಲ್ಲಾ ಪೊಲೀಸ್ ,ಸಂಚಾರ ಪೊಲೀಸ್ ಠಾಣೆ ವತಿಯಿಂದ  ರಸ್ತೆ ಸುರಕ್ಷತ  ಸಪ್ತಾಹ  2026 ಕಾರ್ಯಕ್ರಮದ ಪ್ರಯುಕ್ತ ನಗರದ ಪ್ರಮುಖ ರಸ್ತೆಗಳಲ್ಲಿ ಬೈಕ್ ರ್ಯಾಲಿ ನಡೆಯಿತು.
ನಗರದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಿಂದ ಆರಂಭವಾದ ಬೈಕ್ ರ್ಯಾಲಿ ನಗರದ ವಿವಿಧ ರಸ್ತೆಗಳ ಮೂಲಕ ಸಂಚರಿಸಿ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗವೇ ಮುಕ್ತಾಯವಾಯಿತು.
ಚಾಲನೆ ನೀಡಿದಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಮುತ್ತುರಾಜು ಮಾತನಾಡಿ, ಹೆಲೈಟ್ ಧರಿಸಿ ಜೀವಪಾಯದಿಂದ ರಕ್ಷಣೆ ಪಡೆಯಿರಿ. ವಾಹನ ಚಾಲನೆಯಲ್ಲಿ ಮೊಬೈಲ್ ಬಳಕೆ ಬೇಡ.ಕಾರು ಚಾಲನೆ ಮಾಡುವಾಗ ತಪ್ಪದೆ ಸೀಟ್‌ಬೆಲ್ಟ್ ಧರಿಸಿ. ಅಪ್ರಾಪ್ತ ವಯಸ್ಕರು ವಾಹನ ಚಲಾಯಿಸುವುದು ಶಿಕ್ಷಾರ್ಹ ಅಪರಾಧ ಮಧ್ಯಪಾನ ಮಾಡಿ ವಾಹನ ಚಲಾಯಿಸಿದರೆ ಪ್ರಾಣಕ್ಕೆ ಕುತ್ತು.ತ್ರಿಬಲ್ ರೈಡಿಂಗ್ ಮಾಡುವುದು ಕಾನೂನು ಬಾಹಿರವಾಗಿದೆ  ಆಗಾಗಿ ಪ್ರತಿಯೊಬ್ಬರೂ  ರಸ್ತೆ ಸಂಚಾರ ನಿಯಮ ಪಾಲಿಸುವ ಮೂಲಕ ಅಪಘಾತ ಮುಕ್ತ ಸಮಾಜಕ್ಕಾಗಿ ಪೊಲೀಸರೊಂದಿಗೆ ಸಹಕರಿಸಬೇಕು ಎಂದು‌ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಎಎಸ್ ಪಿ ಶಶಿಧರ್, ಡಿವೈಎಸ್ ಪಿ ಸ್ನೇಹರಾಜು, ಇನ್ಸ್ ಪೆಕ್ಟರ್ ಗಳಾದ ಶೇಷಾದ್ರಿ, ಜಗದೀಶ್, ನವೀನ್ ಪೋಲಿಸರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *