ಚಾಮರಾಜನಗರದಲ್ಲಿ ಮುದುಕು ಮಾರಮ್ಮ ಹಬ್ಬದ ಸಂಭ್ರಮ

  • ಮುದುಕು ಮಾರಮ್ಮ ದೇವಿಗೆ ಸರತಿ ಸಾಲಿನಲ್ಲಿ ನಿಂತು ತಂಬಿಟ್ಟಿನ ಆರತಿ ಬೆಳಗಿದ ಭಕ್ತರು

ಚಾಮರಾಜನಗರ: ನಗರದಲ್ಲಿ ಮುದುಕು ಮಾರಮ್ಮ ಗ್ರಾಮದೇವತೆ ಹಬ್ಬ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.
ನಗರದ ಹಳೆ ಖಾಸಗಿ ಬಸ್ ನಿಲ್ದಾಣದಲ್ಲಿರುವ ಗ್ರಾಮ ದೇವತೆ ಮುದುಕು ಮಾರಮ್ಮ ದೇವಿಗೆ ತಂಬಿಟ್ಟು ಆರತಿ ಬೆಳಗಿ ಪೂಜೆ ಸಲ್ಲಿಸಿ ದೇವರಕೃಪೆಗೆ  ಭಕ್ತ ರು ಪಾತ್ರರಾದರು.

ಸೋಮವಾರ ಸಂಜೆ ಮಾರಮ್ಮನಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ  ಹಬ್ಬಕ್ಕೆ ಚಾಲನೆ ದೊರೆಯಿತು. ದೇವಿಗೆ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿತು. 

ರಾತ್ರಿ ನಗರ ವ್ಯಾಪ್ತಿಯ ಸಹಸ್ರಾರು ಭಕ್ತರು ತಂಬಿಟ್ಟಿನ ಆರತಿ ಮತ್ತು ಎಳನೀರು ಸೇವೆಯನ್ನು ದೇವಿಗೆ ಸಲ್ಲಿಸಿದರು.   
ಸಂಜೆಯಿಂದಲ್ಲೇ ಭಾರಿ ಸಂಖ್ಯೆಯಲ್ಲಿ ಸೇರಿದ್ದ ಭಕ್ತರು ಸರತಿ ಸಾಲಿನಲ್ಲಿ ನಿಂತು ಮಾರಮ್ಮ ದೇವಿಯ ದರ್ಶನ ಪಡೆದ ಪುನೀತರಾದರು..
ವಿಶೇಷ ಅಲಂಕಾರ: ಹಬ್ಬದ ಅಂಗವಾಗಿ ದೇವಾಲಯ ಹಾಗೂ ಹಳೆ ಬಸ್‌ ನಿಲ್ದಾಣದ ಆವರಣದಲ್ಲಿ ವಿಶೇಷವಾಗಿ ವಿದ್ಯುತ್‌ ದೀಪಗಳ ಅಲಂಕಾರ ಮಾಡಲಾಗಿತ್ತು.ಮಾರಮ್ಮ ದೇವಿಗೂ ಆಭರಣ, ಹೂವಿನ ಅಲಂಕಾರದಿಂದ ಕಂಗೊಳಿಸಿತು.

ಯುವ ಮುಖಂಡ ವಿರಾಟ್ ಶಿವು ಮಾತನಾಡಿ, ಪ್ರತಿವರ್ಷದಂತೆ ಈ ಬಾರಿಯೂ ಮುದುಕು ಮಾರಮ್ಮ ಗ್ರಾಮದೇವತೆ ಹಬ್ಬ ಅದ್ದೂರಿಯಾಗಿ ನಡೆಯುತ್ತಿದ್ದು,  ಮಾರಮ್ಮದೇವಿ ಚಾಮರಾಜನಗರ ಪ್ರಮುಖ ದೇವರಾಗಿದೆ. ಶಕ್ತಿಯುತ ದೇವರಾಗಿದ್ದು, ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಮೂಲಕ  ಭಕ್ತರ ಶಕ್ತಿಯುತ ದೇವತೆಯಾಗಿದ್ದಾಳೆ. ಮುದುಕುಮಾರಮ್ಮ ಸರ್ವರಿಗೂ ಒಳಿತು ಮಾಡಲಿ ಎಂದು ಆಶಿಸಿದರು.

Leave a Reply

Your email address will not be published. Required fields are marked *