ರಾಷ್ಟ್ರೀಯ ಮಟ್ಟದ ಖೋಖೋ ಪಂದ್ಯಾವಳಿ ಗೆದ್ದು ಬಂದ ಕ್ರೀಡಾಪಟು ಚಂದನ್ ಗೆ ಅದ್ದೂರಿ ಸ್ವಾಗತ

ಚಾಮರಾಜನಗರ: ರಾಷ್ಟ್ರೀಯ ಮಟ್ಟದ ಖೋಖೋ ಪಂದ್ಯಾವಳಿಯಲ್ಲಿ ತಮಿಳುನಾಡು ತಂಡ ವಿರುದ್ಧ ಜಯಭೇರಿ ಭಾರಿಸಿ ನಗರಕ್ಕೆ ಆಗಮಿಸಿದ ತಾಲೂಕಿನ ಸಿದ್ದಯ್ಯನಪುರದ ವಿದ್ಯಾರ್ಥಿ, ಕ್ರೀಡಾಪಟು ಚಂದನ್ ಅವರಿಗೆ ಜಿಲ್ಲಾಡಳಿತ, ನಾನಾ ಸಂಘ,ಸಂಸ್ಥೆಯ ಮುಖಂಡರು, ಸಿದ್ದಯ್ಯನಪುರ ಗ್ರಾಮಸ್ಥರು ಅದ್ದೂರಿ ಸ್ವಾಗತ ಕೋರಿ ಬರಮಾಡಿಕೊಂಡರು.
ನಗರದ ಎಲ್ ಐಸಿ ಕಚೇರಿಯ ಸಮೀಪದಲ್ಲಿ ಮೈಸೂರಿನಿಂದ ಆಗಮಿಸುತ್ತಿದ್ದಂತೆ ಪಟಾಕಿ ಸಿಡಿಸಿ, ಶಾಲು ಹೊದಿಸಿ, ಹಾರ ಹಾಕಿ, ಮೈಸೂರು ಪೇಟ ತೊಡಿಸಿ, ಪುಷ್ಷವೃಷ್ಠಿಗೈದು, ಸಿಹಿ ತಿನ್ನಿಸಿ ನಗುವಿನ ಜೈಕಾರ ಕೂಗಿ ಬರಮಾಡಿಕೊಂಡು ಸಂಭ್ರಮಿಸಿದರು. ನಂತರ ನಂಜನಗೂಡು ರಸ್ತೆ, ಸಂತೇಮರಹಳ್ಳಿ ವೃತ್ತ, ದೊಡ್ಡಂಗಡಿ ಬೀದಿ, ಚಿಕ್ಕಂಗಡಿ ಬೀದಿ, ಸುಲ್ತಾನ್ ಷರೀಫ್ ವೃತ್ತ ಮೂಲಕ ಡಿವಿಯೇಷನ್ ರಸ್ತೆ, ಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿರಸ್ತೆಯ ಮೂಲಕ ಜಿಲ್ಲಾಡಳಿತ ಭವನಕ್ಕೆ ತೆರಳಿ ಡಾಬಿ.ಆರ್.ಅಂಬೇಡ್ಕರ್ ಪುತ್ಥಳಿ
ಗೆ ಮಾಲಾರ್ಪಣೆ ಮಾಡಿದರು.

ಚಂದನ್ ಗೆಲವು ಜಿಲ್ಲೆಗೆ ಹೆಮ್ಮೆ ತಂದಿದೆ : ಜಿಲ್ಲಾಧಿಕಾರಿ ಶ್ರೀರೂಪ ಸನ್ಮಾನಿಸಿ ಮಾತನಾಡಿ, ತಾಲೂಕಿನ
ಸಿದ್ದಯ್ಯನಪುರದ ಸರ್ಕಾರಿ ಶಾಲೆಯ ವಿದ್ಯಾರ್ಥಿ ಚಂದನ್ ಗುಜರಾತ್‌ನಲ್ಲಿ ನಡೆದ ರಾಷ್ಟ್ರೀಯ ಖೋಖೋ ಪಂದ್ಯಾವಳಿಯಲ್ಲಿ ವಿಜೇತರಾಗಿ ಅಂತರಾಷ್ಟ್ರೀಯ ಪಂದ್ಯಾವಳಿಗೆ ಆಯ್ಕೆಯಾಗಿರುವುದು ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ, ಮಕ್ಕಳ ಕ್ರೀಡೆ ಪ್ರೋತ್ಸಾಹ ಕೊಡಬೇಕು. ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳು ಮೊಬೈಲ್‌ಗೆ ಅಡಿಟ್ಟುರಾಗಿರುತ್ತಾರೆ ಅಂತಹ ಸಂದರ್ಭದಲ್ಲಿ ಚಂದನ್ ಪೋಷಕರು ಪ್ರೋತ್ಸಾಹ ನೀಡಿದ್ದಾರೆ. ಅವರಿಗೆ ಈ ಮೂಲಕ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಸರ್ಕಾರಿ ಶಾಲೆಗಳಲ್ಲಿ ಕ್ರೀಡೆಗೆ ಒತ್ತು ಕೊಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ವಾಲ್ಮೀಕಿ ಅಚ್ಚರಿ ಶಾಲೆಯ ಮಾದರಿಯಲ್ಲಿ ಜಿಲ್ಲೆಯಲ್ಲಿ ಕ್ರೀಡಾಶಾಲೆಗೆ ನಿರ್ಮಾಣಕ್ಕೆ ಚಿಂತಿಸಲಾಗುವುದು ಎಂದರು.
ತುಂಬಾ ಖುಷಿ ಆಗುತ್ತದೆ : ಗುಜರಾತ್‌ನಲ್ಲಿ ನಡೆದ
ರಾಷ್ಟ್ರೀಯ ಖೋಖೋ ಪಂದ್ಯಾವಳಿಯಲ್ಲಿ ಕರ್ನಾಟಕ ರಾಜ್ಯದ ಪ್ರತಿನಿಧಿಯಾಗಿ ಭಾಗವಹಿಸಿ ಗೆದ್ದಿರುವುದ ತುಂಭಾ ಖುಷಿ ತಂದಿದೆ. ಈ ನನ್ನ ಗೆಲವು ನಮ್ಮ ತಂದೆ, ತಾಯಿ, ದೊಡ್ಡಪ್ಪ….ಪಿಟ ಮಾಸ್ಕರ್, ಗ್ರಾಮಕ್ಕೆ ಸಲ್ಲುತ್ತದೆ ಎಂದು ರಾಷ್ಟ್ರೀಯ ಖೋಖೋ ಪಂದ್ಯಾವಳಿ ವಿಜೇತ ಚಂದನ್ ತಿಳಿಸಿದರು.
ಸನ್ಮಾನ: ಭಾರತೀಯ ವಿದ್ಯಾರ್ಥಿ ಸಂಘ, ಅಖಿಲ ಭಾರತೀಯ ವೀರಶೈವ ಮಹಾಸಭಾ, ಕರ್ನಾಟಕ ಸೇನಾಪಡೆ, ಡಾ.ಬಿ.ಆರ್.ಅಂಬೇಡ್ಕರ್ ಮಹಾಸಭಾ, ಸಿದ್ದಯ್ಯನಪುರ ಡಾ.ಬಿ.ಆರ್,ಅಂಬೇಡ್ಕರ್ ಯುವಕರ ಸಂಘ, ಸಿದ್ದಯ್ಯನಪುರ ಗ್ರಾಮಸ್ಥರಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಜಿ.ಪಂ.ಸಿಇಓ ಮೋನಾರೋತ್, ಡಿಡಿಪಿಐ ಚಂದ್ರಪಾಟೀಲ್, ನಿವೃತ್ತ ಡಿಡಿಪಿಐ ಮಂಜುನಾಥ್ ಪ್ರಸನ್ನ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಸಿ.ಎನ್ ರೇಣಕಾದೇವಿ,
ಭರತ್ ಭೂಷಣ,
ಮಹಾದೇವಸ್ವಾಮಿ, ಶಿವಕುಮಾರಯ್ಯ, ಭಾರತೀಯ ವಿದ್ಯಾರ್ಥಿ ಸಂಘದ ಜಿಲ್ಲಾ ಸಂಯೋಜಕ ಪರ್ವತ್ ರಾಜ್, ಅಖಿಲ ಭಾರತೀಯ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಮೂಡ್ಲುಪುರ ನಂದೀಶ್ ,ಡಾ.ಬಿ.ಆರ್.ಅಂಬೇಡ್ಕರ್ ಮಹಾಸಭಾದ ಅಧ್ಯಕ್ಷ ಉಮೇಶ್ ಕುದರ್, ಕರ್ನಾಟಕ ಸೇನಾಪಡೆಯ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ, ಪಣ್ಯದಹುಂಡಿ ರಾಜು, ಲೋಕೇಶ್,ಅಂಬೇಡ್ಕರ್ ಯುವಕ ಸಂಘ ಅಧ್ಯಕ್ಷ ಮಹೇಶ್, ಬಿಎಸ್ ಪಿ ಮಹೇಶ್, ವಾಸು, ಬಾಬು, ಸಿದ್ದಯ್ಯನಪುರ ಗ್ರಾಮದ ಯಜಮಾನರು, ಮುಖಂಡರು, ಡಾ.ಬಿ.ಆರ್.ಅಂಬೇಡ್ಕರ್ ಯುವಕರ ಸಂಘದ ಪದಾಧಿಕಾರಿಗಳು ಹಾಜರಿದ್ದರು.