ದಾನವೆಂದರ ಯಾವುದೇ ನಿರೀಕ್ಷೆ-ಪ್ರತಿಫಲಾಪೇಕ್ಷೆ ಇಲ್ಲದೆ ತನು, ಮನದಿಂದಕೈದೋರಿನೀಡುವುದು.ಈನೆಲದಬಯಲಲ್ಲಿಒಳ್ಳೆಯಕಾರ್ಯಗಳುನಡೆಯುತ್ತಲೇಇವೆ. ದಾನಕ್ಕೆ ಧಣಿಯಾಗುವುದು ಅತ್ಯಂತ ಅಸಾಧ್ಯವಾದ ಕೆಲಸ. ನಮ್ಮಲ್ಲಿ ಅದೆಷ್ಟೋಪುಣ್ಯದ ಕಾರ್ಯಗಳು ಸದಾಕಾಲ ನಡೆಯುತ್ತಲೇ ಇರುತ್ತವೆ. ಅದರಲ್ಲಿ ಮುಖ್ಯವಾಗಿ ಅನ್ನದಾನ, ಗೋದಾನ, ವಿದ್ಯಾದಾನ, ರಕ್ತದಾನ, ನೇತ್ರದಾನ, ಅಂಗಾಂಗ ದಾನ ಮುಂದುವರೆದು ದೇಹದಾನ ದಾನದ ವ್ಯಾಪ್ತಿ ತನ್ನ ವಿಸ್ತಾರದ ನೆಲೆಯಲ್ಲಿ ಹರಡಿರುವುದು ಅದರ ಮಹೋನ್ನತಿಯನ್ನು ವ್ಯಕ್ತಪಡಿಸುತ್ತದೆ. ದಾನದಲ್ಲಿ ಪರಮೋಚ್ಚ ಸಂತೃಪ್ತಿಯನ್ನು ಕಾಣಲು ಸಾಧ್ಯವಿಲ್ಲದೆ ಇರಬಹುದು, ಆದರೆನಮ್ಮ ಕೈಲಾದಷ್ಟು ದಾನವನ್ನು ಮಾಡಿದ್ದರೆ ನಮ್ಮ ಜೀವನ ಸಾರ್ಥಕವಾಗುತ್ತದೆ. ಹೇಳಿ ದಾನ ಮಾಡಿ ಡಂಗೂರ ಸಾರುವುದಲ್ಲಅಂತೆಯೇದಾನನೀಡದೆಇರುವವನನ್ನುಲೋಭಿ, ಜಿಪುಣಎಂದುಕರೆಯುತ್ತಾರೆ. ಆಗಾಗಿಸಂಪಾದನೆಯಒಂದುಭಾಗವನ್ನುದಾನಮಾಡಲೇಬೇಕು.
ಸಿರಿ ಬಂದ ಕಾಲಕ್ಕೆ ಕರೆದು ದಾನವ ಮಾಡು,
ಪರಿಣಾಮವಕ್ಕು ಪದವಕ್ಕು, ಕೈಲಾಸ
ನೆರಮನೆಯು ಅಕ್ಕು ಸರ್ವಜ್ಞ.
ದಾನದ ಶ್ರೇಷ್ಠತೆಯನ್ನು ಸಾರುವ ಈ ಮೂರು ಸಾಲಿನ ತ್ರಿಪದಿಯಲ್ಲಿ ಸಿರಿ ಬಂದಾಗ ಅದರ ಅಗತ್ಯವಿರುವವರಿಗೆ ತಾವಾಗಿಯೇ ಸ್ವ-ಇಚ್ಛೆಯಲ್ಲಿ ಮನಪೂರ್ವಕವಾಗಿ ಯಾವುದೇ ಫಲಾಪೇಕ್ಷೆಯಿಲ್ಲದೆ ಕರೆದು ದಾನವನ್ನು ಮಾಡುವುದು ಅತ್ಯಂತ ಮಹತ್ವದ ಹಾಗೂ ಪುಣ್ಯದ ಕಾರ್ಯ. ಈ ಪದ್ಯದವಿಚಾರದಲ್ಲಿ ಗಮನಿಸಬೇಕಾದ ಮಾತೆಂದರೆದಾನಿಗಳು ಅಗತ್ಯ ಇರುವವರು ಬಂದು ಬೇಡುವ ತನಕ ಕಾಯದೆ ತಾವಾಗಿಯೇ ಕರೆದು ದಾನ ಮಾಡಬೇಕು, ಆಗ ಒಳ್ಳೆಯ ಪರಿಣಾಮ ಉಂಟಾಗುತ್ತದೆ.ಅಷ್ಟೇ ಅಲ್ಲದೆ ಕೈಲಾಸವೇ ಪಕ್ಕದಲ್ಲಿದೆಯೇನೋ ಎಂಬಂತಹಅನುಭವವಾಗುತ್ತದೆ. ಈ ಜಗದ ಮಾಯೆಯಲ್ಲಿ ಯಾವುದು ತಾನೇ ಶಾಶ್ವತ? ಇರುವಷ್ಟು ಕಾಲ ನೆಮ್ಮದಿಗಾಗಿ ಬದುಕಿ, ನೆಮ್ಮದಿಯಿಂದ ಮರೆಯಾಗುವ ಬದುಕಿನಲ್ಲಿ ಇಂತಹ ಪುಣ್ಯದ ಕಾರ್ಯಗಳು ಆತ್ಮತೃಪ್ತಿಯನ್ನು ದಯಪಾಲಿಸುತ್ತವೆ.
ದಾನದಅಸ್ಥಿತ್ವಇಂದುನೆನ್ನೆಯದಲ್ಲಪ್ರಾಚೀನಕಾಲದಿಂದಲೂಪುಣ್ಯಹಾಗೂದಾನದಕಾರ್ಯಗಳುಸಾಗಿ,ವ್ಯಕ್ತಿಯಘನವ್ಯಕ್ತಿತ್ವವನ್ನುಸಾರುತ್ತಲೇಬರುತ್ತಿವೆ.ಸತ್ಯಯುಗದಲ್ಲಿ ಸುದ್ದಿ ತಿಳಿದರೆ ದಾನ ಮಾಡುತ್ತಿದ್ದರು. ದ್ವಾಪರದಲ್ಲಿ ಒಂದು ಪತ್ರ ಕಳುಹಿದರೆ ಆ ಪತ್ರ ನೋಡಿ ದಾನ ಮಾಡುತ್ತಿದ್ದರು. ತ್ರೇತಾಯುಗದಲ್ಲು ಕೂಡ ದಾನಕೊಡುವವರ ಹೆಸರಿನಲ್ಲಿ ಒಂದು ಪತ್ರವನ್ನು ತೆಗೆದುಕೊಂಡು ಹೋಗಿ ನೀಡಿದರೆ ಸಾಕು ದಾನ ನೀಡುತ್ತಿದ್ದರು. ಆದರೆ ಕಲಿಯುಗದಲ್ಲಿ ಬಹಳ ವಿಚಿತ್ರ. ಬಾಯಿ ಬಿಟ್ಟು ಕೇಳಿದರು, ತಿಳಿಸಿ ಹೇಳಿದರೂ ಒತ್ತಾಯ ಮಾಡಿದರೂ ಇವರು ಮಾಡುವ ದಾನವೆಂದರೆವಾಗ್ದಾನಮಾತ್ರ. ಸರಳ, ಸಹಜವಾಗಿ ಕೊಡುವುದು ಹಾಲಿಗೆ ಸಮಾನ.ಬೇಡಿದಾಗ ನೀಡುವುದು ನೀರಿಗೆ ಸಮಾನ ಬಹಳಷ್ಟು ಒತ್ತಾಯ ಮಾಡಿದಾಗ ನೀಡುವುದು ರಕ್ತಕ್ಕೆ ಸಮಾನವಾದುದು. ನಮ್ಮ ದಾನ ಹಾಲಿನಂತಾಗಬೇಕು ಇಲ್ಲವೇ ನೀರಾದರೂ ಪರವಾಗಿಲ್ಲ ಅದರೆ ರಕ್ತವಾಗಬಾರದು ಎಂಬುದು ಬಲ್ಲವರಹಾಗೂದಾರ್ಶನಿಕರಮಾತು. ದಾನಕ್ಕೆ ಸಂಬಂಧಿಸಿದಂತೆ ವಿವಿಧ ಮಹಾನುಭಾವರ ಜೀವನದಲ್ಲಿ ನಡೆದ ಸಂಗತಿಗಳು ದಾನದ ಮಹತ್ವ, ಶ್ರೇಷ್ಠತೆಯನ್ನು,ಸಾರುತ್ತವೆ. ಅಂತಹ ಕೆಲವು ಪ್ರಸಂಗಗಳನ್ನು ಈ ಮುಂದಿನಂತೆ ದಾಖಲಿಸುವ ಪ್ರಯತ್ನ ಮಾಡಿದ್ದೇನೆ.
ದಾನದ ಪ್ರಸಂಗ ಒಂದು: ರಾಮ್ದಾಸ್ ಅವರು ಮನೆಯೊಂದಕ್ಕೆ ಭಿಕ್ಷೆಗೆ ಹೋಗಿದ್ದರು. ಹೀಗೆ ಜೋಳಿಗೆ ಹಿಡಿದು ಪ್ರತಿ ಮನೆಯಿಂದಲೂ ಭಿಕ್ಷೆ ಬೇಡಿ ಬರುತ್ತಿರಬೇಕಾದರೆ ಅಲ್ಲೊಂದು ಮಗು ಅವರ ಜೋಳಿಗೆಗೆ ಒಂದು ಹಿಡಿ ಮಣ್ಣನ್ನು ಹಾಕಿಬಿಡುತ್ತದೆ. ರಾಮ್ ದಾಸ್ ಅವರು ಸಂತೋಷದಿಂದಲೇ ಮುಂದೆಹೋಗುತಿರಲು ಅದನ್ನು ನೋಡಿದ ಆ ಕೇರಿಯ ಜನ ಆ ಹುಡುಗನಿಗೆ ಶಪಿಸುತ್ತಾರೆ. ಹೊಡೆಯಲು ಮುಂದಾಗುತ್ತಾರೆ. ಆಗ ರಾಮ್ ದಾಸ್ ಅವರು ಹೇಳುವ ಮಾತು ನಮ್ಮ ಕಣ್ಣನ್ನು ತೆರೆಸುತ್ತದೆ. ಅವರು ಹೇಳುವ ಮಾತು ನೋಡಿ- ಆ ಹುಡುಗನನ್ನು ಹೊಡೆಯಬೇಡಿ ಬೈಯಬೇಡಿ, ಬೈಯುವ ಹೊಡೆಯುವ ಕೆಲಸವನ್ನೇನು ಮಾಡಿದ್ದಾನೆ ಆ ಹುಡುಗ; ಒಂದು ಬೊಗಸೆಯ ಮಣ್ಣಿಗೆ ನಿಂದನೆ ಮಾಡೋರು ಅದೇ ಜಾಗದಲ್ಲಿ ಹತ್ತು ಎಕರೆ, ಇಪ್ಪತ್ತು ಎಕರೆ ಜಮೀನು ನೀಡಿದ್ದರೆ ನಾವು ಆನಂದರಿಂದ ಪಡೆಯುತ್ತಿರಲಿಲ್ಲವೇ? ಬೇಡಲು ಬಂದವನಲ್ಲ ನಾನು, ಕೈದೋರಿ ನೀಡುವುದನ್ನು ಕಲಿಸಲು ಬಂದವನು.ಆ ಹುಡುಗನಿಗೆ ಏನೋ ನೀಡಬೇಕು ಅಂತ ಅನ್ನಿಸಿದೆಯಲ್ಲ ಅದು ಆ ಹುಡುಗನ ವಿಶಾಲ ಮನೋಭಾವವನ್ನು ತೋರಿಸುತ್ತದೆ. ನೀಡುವುದು ನಮ್ಮ ಸಂಸ್ಕೃತಿ ನಮ್ಮ ಆಚಾರ-ನಮ್ಮ ನಡೆ-ನುಡಿಯ ಭಾವ.
ದಾನದ ಪ್ರಸಂಗ ಎರಡು:ಒಮ್ಮೆಮಹರ್ಷಿಗಳಾದ ದುರ್ವಾಸನ ಮುನಿಗಳು ನದಿಗೆ ಜಳಕ ಮಾಡಲು ತೆರಳಿರುತ್ತಾರೆ. ಸ್ನಾನಮಾಡುತ್ತಿದ್ದಾಗ ರಭಸವಾಗಿಹರಿಯುತ್ತಿದ್ದ ನೀರಿಗೆ ತಾವು ತೊಟ್ಟಿದ್ದ ಕೌಪಿನ(ಲಂಗೋಟಿ) ನೀರಿನಸೆಳೆತಕ್ಕೆಸಡಿಲವಾಗಿ ನೀರಿನೊಂದಿಗೆ ಹೊರಟು ಹೋಗುತ್ತದೆ.ಮಹರ್ಷಿಗಳು ದಿಗಂಬರರಾಗುತ್ತಾರೆ. ಅದೇ ಸಂದರ್ಭದಲ್ಲಿ ದ್ರೌಪದಿಯುಮೈಲಿಗೆ ಬಟ್ಟೆಯನ್ನು ಶುಚಿ ಮಾಡಲು ಬಂದಾಗ ದುರ್ವಾಸನ ಮುನಿಗಳು ಸ್ನಾನ ಮಾಡುತ್ತಿರುವುದನ್ನು ಕಂಡು ನಾನು ಈಗಮೈಲಿಗೆ ಬಟ್ಟೆ ಶುಚಿ ಮಾಡುವುದು ಸಭ್ಯತೆಅಲ್ಲವೆಂದು ಬಗೆದು ದುರ್ವಾಸನ ಮುನಿಗಳು ಸ್ನಾನ ಮಾಡಿ ಹೊರಗೆಹೋಗುವವರೆಗೂಕಾಯೋಣವೆಂದುದಡದಲ್ಲಿಕಾಯುತ್ತಲೇಕೂರುತ್ತಾಳೆ.ಒಂದುಕಡೆ;ದ್ರೌಪದಿಮರೆಯಾದಾಗಮೇಲೆಬರೋಣವೆಂದು ಮುನಿಗಳು, ಮತ್ತೊಂದು ಕಡೆ ಮುನಿಗಳು ಸ್ನಾನ ಮಾಡಿ ಹೊರಗೆ ಬಂದ ಮೇಲೆ ಬಟ್ಟೆ ಶುಚಿ ಮಾಡೋಣವೆಂದುದ್ರೌಪದಿ. ಈನಡುವೆಸಮಯಸರಿಯುತ್ತಲೇಇರಲುಒಂದುಗಂಟೆ, ಎರಡುಗಂಟೆ, ಮೂರುಗಂಟೆಗಳುಕಳೆಯುತ್ತವೆ. ಕಾದುಕಾದುಮಂಕಾದದ್ರೌಪದಿ ತಾನೇ ಮೌನ ಮುರಿದು ಮಾತನಾಡುತ್ತಾ ?ಮುನಿಗಳೇ ತಮ್ಮ ಸ್ನಾನದ ಕ್ರೈಂಕರ್ಯ ಪೂರ್ಣವಾಗಿದ್ದರೆ ಬಟ್ಟೆ ಶುಚಿಮಾಡಲುನಮಗೆಅನುವುಮಾಡಿಕೊಡಬೇಕು? ಎಂದುವಿನೀತಭಾವದಲ್ಲಿಬಿನ್ನಹಮಾಡಿಕೊಂಡಾಗದುರ್ವಾಸನಮುನಿಗಳುತಾವುಇರುವನಿಜಪರಿಸ್ಥಿತಿಯನ್ನುತಿಳಿಸಿಹೇಳಿದಾಗಸ್ವಲ್ಪವೂತಡಮಾಡದೆತಾನುಮನೆಯಿಂದಧರಿಸಿಬಂದಿದ್ದಮಡಿಸೀರೆಯಸೆರಗನ್ನೇಹರಿದುಉಂಡೆಮಾಡಿಎಸೆಯುತ್ತಾಳೆ. ಆಸೆರಗನ್ನುಸುತ್ತಿಕೊಂಡುಹೊರಬಂದ ಮಹರ್ಷಿಗಳು ದ್ರೌಪದಿಯತಲೆ ಮೇಲೆಕೈಇಟ್ಟುನನ್ನಮಾನವನ್ನುಕಾಪಾಡಿದ್ದಕ್ಕಾಗಿಭವಿಷ್ಯದಲ್ಲಿಈಬಟ್ಟೆಯುನಿನ್ನಮಾನವನ್ನುಕಾಪಾಡಲಿಎಂದುಮುಕ್ತವಾಗಿಹಾರೈಸುತ್ತಾರೆ.ಮುಂದೆದ್ರೌಪದಿಯವಸ್ತ್ರಾಪಹರಣದಪ್ರಸಂಗದಲ್ಲಿಆಸೀರೆಅಕ್ಷಯಾಂಬರವಾಗುತ್ತದೆ.ಈಪ್ರಸಂಗದಿಂದಅರಿಯಬೇಕಾದಜೀವನಮೌಲ್ಯಕೊಡುವಮನೋಭಾವದಸ್ಥಿತಿಯಿಂದಎಂತಹದೊಡ್ಡಉಪಕಾರವಾಗುತ್ತದೆಎಂಬುದನ್ನುಸೂಚಿಸುತ್ತದೆ. ಕೊಟ್ಟಿದ್ದು ಸೆರಗು ಮಾತ್ರ ಹುಟ್ಟಿದ್ದು ಅಕ್ಷಯಾಂಬರ.ಮಾರುದ್ದ ನೀಡಿದ್ದಾದರೆ ಊರುದ್ದ ಪಡೆಯುತ್ತೇವೆ ಎಂಬ ಗಾದೆ ಮಾತು ಅಕ್ಷರಶಃಇಲ್ಲಿ ದಾನದ ಸಿದ್ಧಾಂತವಾಗಿದೆ. ದಾನ ನೀಡಿದವನು ಯಾವುದೇ ನಿರೀಕ್ಷೆ ಇಲ್ಲದೆ ನೀಡಬೇಕು, ಪಡೆದುಕೊಳ್ಳುವವನು ಅರಸಿ ಆಶೀರ್ವದಿಸಿ ಪಡೆದುಕೊಳ್ಳುವುದರಿಂದ ಇಬ್ಬರಿಗೂ ಆತ್ಮಾನಂದ-ಸಂತೃಪ್ತಿಯ ಭಾವ.
ದಾನದ ಪ್ರಸಂಗ ಮೂರು: ಮಹಾಭಾರತದ ಅತ್ಯಂತ ಮೆಚ್ಚುಗೆ ಪಾತ್ರ ಕರ್ಣನದು,ಅಷ್ಟೇಅಲ್ಲದೆ ಆತನು ದಾನಶೂರತ್ವಕ್ಕೆ ಹೆಸರುವಾಸಿವಾಗಿದ್ದವನು. ದಾನದ ವಿಚಾರದಲ್ಲಿ ಆತನನ್ನು ಮೀರಿಸಿದವರೇ ಇಲ್ಲ. ಸತ್ಯಕ್ಕೆ ಹರಿಶ್ಚಂದ್ರ ಹೇಗೆ ರೂಪಕವಾಗಿ ಎತ್ತರದಲ್ಲಿ ನಿಲ್ಲುತ್ತಾನೋ ಹಾಗೆಯೇ ದಾನಕ್ಕೆ ದಾರಶೂರಕರ್ಣ ಎಂಬ ಹಿರಿದಾದ ಗುಣ ವಿಶೇಷವನ್ನು ಹೊತ್ತು ಧರೆ ಬದುಕಿರುವವರೆಗೂ ಕರ್ಣನು ಮಾದರಿಯಾಗಿರುತ್ತಾನೆ. ಅಂತಹ ಕರ್ಣನು ಒಮ್ಮೆ ಕ್ಷೌರ ಮಾಡಿಸಲು ಬೆಳ್ಳಿಯ ಚೊಂಬಿನಲ್ಲಿನೀರನ್ನು ತುಂಬಿ ಎಡಗೈಯಿಂದ ಹಿಡಿದುಕೊಂಡು ಕುಳಿತಿದ್ದಾಗ ಭಿಕ್ಷಾಂದೇಹಿ ಎಂದು ಕೇಳಿದ ಕೂಡಲೇ ಎಡಗೈಯಿಂದಲೇ “ತಗೋ” ಎಂದು ನೀಡಿಯೇ ಬಿಟ್ಟ, ಆಗ ಭಿಕ್ಷೆ ತೆಗೆದುಕೊಂಡ ವ್ಯಕ್ತಿ “ಇದೇನು ಹೀಗೆ ಬೆಳಗ್ಗೇನೆ ಅದು ನನ್ನಂತಹ ಬ್ರಾಹ್ಮಣನಿಗೆ ಎಡಗೈಯಲ್ಲಿ ನೀಡುವುದೇ?ಎಂದು ಕೇಳಿದಾಗ ಹೌದು ನೀವು ಹೇಳುತ್ತಿರುವುದು ಸತ್ಯ, ದಾನವನ್ನು ಬಲಗೈಯಲ್ಲಿಯೇ ನೀಡಬೇಕು ಆದರೆಎಡಗೈಯಲ್ಲಿಹಿಡಿದಿರುವಾಗಕೊಡುಎನ್ನುವ ಮನೋಭಾವ ಬಲಗೈಗೆ ಬರುವಷ್ಟರಲ್ಲಿಬದಲಾಗಬಹುದುಅದಕ್ಕಾಗಿಯೇ ಎಡಗೈಯಲ್ಲಿದ್ದಾಗಲೇ ನೀಡಿದೆ ಎಂದು ದಾನದ ಹಿರಿತನವನ್ನು ಎತ್ತಿಹಿಡಿದದ್ದುಕಂಡುಕೊಳ್ಳಬೇಕಾದಸತ್ಯ. ನಮ್ಮ ಹಳ್ಳಿಯ ಕಡೆ ಹೇಳುವುದು ?ಎಡಗೈಲಿ ಕೊಟ್ಟಿದ್ದು ಬಲಗೈಗೆ ಗೊತ್ತಾಗಬಾರದು ಬಲಗೈಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರದುಎಂಬಮಾತುದಾನವುಗೌಪ್ಯವಾಗಿರಬೇಕು ಎಂಬುದನ್ನು ತಿಳಿಸುತ್ತದೆ.
ದಾನದಪ್ರಸಂಗನಾಲ್ಕು:ತರುಣನೊಬ್ಬನ ತಾಯಿ ಬೇರೆಯವರ ಮನೆಗಳಲ್ಲಿ ದುಡಿದು ಹಣಗಳಿಸಿ, ಅದರಲ್ಲೇ ಸಾಕಷ್ಟನ್ನು ದಾನ ಮಾಡಿ ಉಳಿದದ್ದರಲ್ಲಿ ಜೀವನ ಸಾಗಿಸುತ್ತಿದ್ದಳು. ಮಗನಿಗೆ ಇದು ಇಷ್ಟವಿಲ್ಲದೆ, ‘ಯಾಕೆ ಹೀಗೆ ದಾನ ಮಾಡುತ್ತೀಯಾ. ಕೆಲವೊಮ್ಮೆ ಉಪವಾಸ ಇದ್ದು ದಾನ ಮಾಡುತ್ತೀಯಾ. ಈ ದಾನದ ಮಹತ್ವ ಏನು? ಎಂದಾಗ ತಾಯಿ ‘ಮಗೂ, ದಾನದಿಂದ ಪುಣ್ಯ ಬರಬೇಡನೊಬ್‍ಎಂದಾಗಮಗ’ಪುಣ್ಯ ಎಂದರೇನು?’ಎಂದುಕೇಳಿದ. ತಾಯಿ, ‘ನನಗೇನು ಗೊತ್ತಪ್ಪ, ಅದು ಶಿವನಿಗೇ ಗೊತ್ತು. ಅವನನ್ನೇ ಹೋಗಿ ಕೇಳು’ ಎಂದಳು. ಮಗ ಶಿವನನ್ನು ಕಾಣಲು ಹೊರಟ. ದಾರಿಯಲ್ಲಿ ದಟ್ಟವಾದ ಅರಣ್ಯ. ಕತ್ತಲೆಯೂ ಆಯಿತು. ತರುಣನಿಗೆ ಗಾಬರಿ.ಅವನಿಗೆ ಸಿಕ್ಕ ಬೇಡನೊಬ್ಬಆತರುಣನನ್ನುತನ್ನಗುಡಿಸಲಿಗೆ ಕರೆದುಕೊಂಡುಹೋಗಿ ಹೆಂಡತಿಗೆ ಹಣ್ಣು, ಹಂಪಲುಗಳನ್ನು ನೀಡಲು ಕೇಳಿದ. ಆಕೆ ಸಿಡುಕಿನಿಂದ, ‘ನನ್ನದ್ದನ್ನು ಕೊಡಲಾರೆ. ಬೇಕಾದರೆ ನಿನ್ನ ಪಾಲಿನಲ್ಲೇ ಕೊಡು’ ಎಂದಳು. ಬೇಡನುತನ್ನ ಪಾಲಿನ ಆಹಾರವನ್ನು ಈತನಿಗಿತ್ತು, ಹಾಸಿಗೆ ಹಾಸಿ ಗುಡಿಸಲಿನಲ್ಲಿ ಮಲಗಿಸಿದ. ತಾನು ಗುಡಿಸಿಲಿನ ಅರ್ಧ ಒಳಗೆ, ಅರ್ಧ ಹೊರಗೆ ಮಲಗಿದ. ರಾತ್ರಿ ಹುಲಿ ಬಂದು ಬೇಡನನ್ನೂ ಅವನ ಹೆಂಡತಿಯನ್ನೂ ತಿಂದು ಹಾಕಿತು. ಹುಡುಗ ದುಖದಿಂದ ಮುಂದೆ ನಡೆದ. ಮುಂದೆ ದಾರಿಯಲ್ಲಿ ರಾಜನೊಬ್ಬ ಸಿಕ್ಕ. ಈತ ಶಿವನ ಕಡೆಗೆ ಹೊರಟಿದ್ದನ್ನು ತಿಳಿದು, ‘ಹುಡುಗಾ, ನನ್ನದೊಂದು ಸಮಸ್ಯೆಯಿದೆ. ನಾನು ಕೋಟಿ ಹೊನ್ನು ಖರ್ಚುಮಾಡಿ ಕೆರೆ ಕಟ್ಟಿಸಿದ್ದೇನೆ. ಆದರೆ, ಒಂದೇಒಂದು ಹನಿ ನೀರೂ ಬೀಳಲಿಲ್ಲ’,ಇದಕ್ಕೆಶಿವನಲ್ಲಿ ಪರಿಹಾರ ಕೇಳುವೆಯಾ’ ಎಂದ. ಹುಡುಗ ಒಪ್ಪಿ ಮುಂದೆ ನಡೆದಾಗ ಒಬ್ಬ ಕುಂಟ ಮನುಷ್ಯ ಸಿಕ್ಕ. ಆತನೂ ಕೇಳಿದ, ‘ನನ್ನ ಕುಂಟತನಕ್ಕೆ ಕಾರಣವನ್ನುಶಿವನಲ್ಲಿಕೇಳಿ ಬಾ.ಅಲ್ಲಿಂದ ಮುಂದೆ ದೊಡ್ಡ ಸರ್ಪ ಕಂಡಿತು. ಅದು ಹುತ್ತದೊಳಗೆ ಹೋಗಲಾರದೆ, ಹೊರಗೆ ಬರಲಾರದೆ ಒದ್ದಾಡುತ್ತಿತ್ತು. ‘ನಾನು ‘ಇದರಿಂದ ಪಾರಾಗುವುದು ಹೇಗೆ ಎಂದು ಕೇಳಿಕೊಂಡು ಬಾ’ ಎಂದಿತು.ತರುಣ ಬಂದು ಶಿವನನ್ನು ಕಂಡ ‘ಪ್ರಭು, ದಾನದ ಪುಣ್ಯ ಎಂದರೇನು, ದಯವಿಟ್ಟು ಹೇಳು’ ಎಂದ. ಅದಕ್ಕೆ ಶಿವ, ‘ನೋಡು, ನೇಪಾಳ ದೇಶದ ರಾಜನ ಹೆಂಡತಿ ಗರ್ಭವತಿಯಾಗಿದ್ದಾಳೆ. ನಾನು ಕೊಡುವ ಪ್ರಸಾದವನ್ನು ಆಕೆಗೆ ಕೊಡು. ಆಕೆ ಗಂಡು ಮಗುವನ್ನು ಹಡೆಯುತ್ತಾಳೆ. ಆ ಮಗು ನಿನಗೆ ದಾನದ ಪುಣ್ಯವೇನೆಂದು ಹೇಳುತ್ತದೆ’ ಎಂದ.ನಂತರತರುಣನು ರಾಜನ ಕೆರೆಯ ನೀರಿನ ಬಗ್ಗೆ ಕೇಳಿದಾಗ, ‘ರಾಜ ತನ್ನ ಮಗಳಿಗೆ ಒಳ್ಳೆಯ ವರನನ್ನು ನೋಡಿ ಮದುವೆ ಮಾಡಿದರೆ ನೀರು ಬೀಳುತ್ತದೆ’ ಎಂದ.ಅಂತೆಯೇ ಕುಂಟನ ಕಾಲಿನ ಪರಿಹಾರವನ್ನು ಕೇಳಿದಾಗ, ‘ಆತ ವಿದ್ಯಾದಾನ ಮಾಡಿಲ್ಲ. ತನ್ನ ವಿದ್ಯೆಯನ್ನು ಯಾರಿಗಾದರೂ ದಾನ ಮಾಡಿದರೆ ಕುಂಟತನ ಹೋಗುತ್ತದೆ’ ಎಂದು ನುಡಿದ. ಹಾಗಾದರೆ ಹಾವಿನ ತೊಂದರೆಗೆ ಪರಿಹಾರವೇನು? ಎಂಬ ಪ್ರಶ್ನೆಗೆ, ‘ಅದರ ನೆತ್ತಿಯಲ್ಲಿ ಒಂದು ರತ್ನವಿದೆ. ಅದನ್ನು ಯಾರಿಗಾದರೂ ಕೊಟ್ಟರೆ ಅದರ ಸಮಸ್ಯೆ ಬಗೆಹರಿಯುತ್ತದೆ’ ಎಂದು ಉತ್ತರಿಸಿದ. ಬರುವಾಗ ದಾರಿಯಲ್ಲಿತರುಣನಿಗೆ ಹಾವು ಸಿಕ್ಕಿತು. ಶಿವನ ಮಾತನ್ನು ತಿಳಿಸಿದಾಗ ನೆತ್ತಿಯ ರತ್ನವನ್ನು ಆ ತರುಣನಿಗೇನೆ ಕೊಟ್ಟಿತು. ಕುಂಟ ಈತನಿಗೆ ಎಲ್ಲಾ ವಿದ್ಯೆಗಳನ್ನು ದಾನ ಮಾಡಿದ. ವಿದ್ಯೆ ಮತ್ತು ರತ್ನವನ್ನು ಪಡೆದ ಇವನಿಗೆ ರಾಜನು ತನ್ನ ಮಗಳನ್ನು ಕೊಟ್ಟು ಮದುವೆ ಮಾಡಿದ. ಅಷ್ಟೇ ಅಲ್ಲದೆ ರಾಜ್ಯವನ್ನು ಸಹನೀಡಲು; ಕೆರೆ ತುಂಬಿತು. ನಂತರ ತರುಣ ನೇಪಾಳಕ್ಕೆ ಹೋದ.ನೇಪಾಳದರಾಣಿ ಪ್ರಸವ ವೇದನೆಯಿಂದ ಒದ್ದಾಡುತ್ತಿದ್ದಳು. ಈತ ಕೊಟ್ಟ ಪ್ರಸಾದ ತಿಂದೊಡನೆ ಸುಖಪ್ರಸವವಾಗಿ ಗಂಡುಮಗು ಹುಟ್ಟಿತು. ಅದನ್ನು ಬಂಗಾರದ ತಟ್ಟೆಯಲ್ಲಿ ತಂದು ಇವನ ಮುಂದಿಟ್ಟರು. ಈತ ಕೇಳಿದ, ‘ದಾನದ ಪುಣ್ಯ ಯಾವುದು’ ಮಗು ಪಕಪಕನೇ ನಕ್ಕು ಹೇಳಿತು. ‘ಹುಚ್ಚಾ, ಶಿವನನ್ನು ಕಂಡು ಬಂದರೂ ಜ್ಞಾನ ಬರಲಿಲ್ಲವೇ? ಯಾವ ಬೇಡ ನಿನಗೆ ಕಾಡಿನಲ್ಲಿ ಆಶ್ರಯ ಕೊಟ್ಟನೋ ಅವನೇ ನಾನು. ಅನ್ನ ದಾನ ಮಾಡಿದ್ದಕ್ಕೆ ಈಗ ರಾಜಕುಮಾರನಾಗಿ ಹುಟ್ಟಿದ್ದೇನೆ. ದಾನ ಮಾಡದ ನನ್ನ ಹೆಂಡತಿ ಇದೇ ಊರಿನಲ್ಲಿ ಹಂದಿಯಾಗಿ ಹುಟ್ಟಿದ್ದಾಳೆ’ಎಂದುಆಮಗುಹೇಳಿತು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರರ ಈ ಜನಪದ ಕಥೆ ದಾನದ ಮಹತ್ವವನ್ನು ಎಷ್ಟು ಹೃದಯಹಾಗೂಮನಮುಟ್ಟುವಂತೆ ಹೇಳುತ್ತದೆ ಅಲ್ಲವೆ! ಇದನ್ನು ನಾವೂ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ನಮ್ಮ ಜೀವನ ಸಾರ್ಥಕವಾಗುತ್ತದೆ ಅಂತೆಯೇ ನಾವು ನಿಜತ್ವದಿ ಮನುಷ್ಯರಾಗುತ್ತೇವೆ.
ದಾನವನ್ನು ಕುರಿತಾಗಸರ್ವಜ್ಞಕವಿತನ್ನಹಲವಾರುತ್ರಿಪದಿಗಳಲ್ಲಿದಾನದಅಗ್ಗಳಿಕೆಯನ್ನುಕುರಿತುತಿಳಿಸಿದ್ದಾನೆ
ಈವಂಗೆ ದೇವಂಗೆ ಆವುದಂತರವಯ್ಯ
ದೇವನು ಜಗಕೆ ಕೊಡುವನು ಕೈಯ್ಯಾರೆ
ಈವನೇ ದೇವ ಸರ್ವಜ್ಞ ||
ಈ ಲೋಕನು ಸೃಷ್ಟಿಸಿರುವ ದೇವರು ಎಲ್ಲವನ್ನೂ ಕರುಣಿಸಿದ್ದಾನೆ. ಇಲ್ಲಿ ನಮ್ಮದು ಎನ್ನುವುದುಏನಾದರುಇದ್ದರೆ ಅದು ದೇವರದೇ ಆಗಿರುತ್ತದೆ ಎಂಬ ಅರಿವು ಬಹಳ ಮುಖ್ಯ. ಇದನ್ನರಿತು ಯಾರುವಿಶಾಲಭಾವದಿಂದಮನಸ್ಸನ್ನು ತೆರೆದು ಹೃದಯ ಪೂರ್ವಕವಾಗಿ ದಾನ ಮಾಡುವರೋ ಅವರು ದೇವರ ಸಮಾನ ಎನ್ನುತ್ತಾರೆ ಸರ್ವಜ್ಞ ಅಂತಯೇ
ದಾನದ ಫಲದಿಂದ ಭೂನಾಥನಾಗುವನು,
ಭಾನು ಮಂಡಲವನೊಡೆದಮಳ ಸ್ವರ್ಗಕ್ಕೆ,
ತಾನೊಡೆಯನಹನು ಸರ್ವಜ್ಞ
ಈತ್ರಿಪದಿಯಲ್ಲಿದಾನ ಮಾಡುವುದರಿಂದ ಏನೆಲ್ಲ ಫಲ ದೊರೆಯಬಹುದು ಎಂದು ಹೇಳುತ್ತಾ ಯಾರು ದಾನ ಮಾಡುವರೋ ಅವರು ಭೂಮಿಯಒಡೆಯರಾಗಿರುತ್ತಾರೆ, ಸೌರವ್ಯೂಹವನ್ನು ದಾಟಿ ಅತಿಶಯದ ಸ್ವರ್ಗಕ್ಕೆ ಅವರು ಸಾರ್ವಭೌಮರಾಗಿರುತ್ತಾರೆ ಎಂಬ ಸರ್ವಜ್ಞನಈನುಡಿಗಳುದಾನದಮಹತ್ವವನ್ನುಜಗತ್ತಿಗೆಸಾರುತ್ತವೆ.
ಸಾಮಾನ್ಯವಾಗಿ ದಾನವೆಂದರೆ ಈ ಮೊದಲೇ ಹೇಳಿದಂತೆ ತಮ್ಮಲ್ಲಿರುವುದನ್ನು ವಿನೀತ ಭಾವದಿಂದ ಪ್ರೀತಿ ಪೂರ್ವಕವಾಗಿ ಇಲ್ಲದವರಿಗೆನೀಡುವುದು.ಈನೀಡುವಿಕೆಅಷ್ಟುಸುಲಭದಮಾತಲ್ಲ. ಎಲ್ಲವೂತನಗೆಇರಲಿಎಂಬಹಪಹಪಿತನದಭಾವದಪ್ರಪಂಚದಲ್ಲಿ ಬದುಕುತ್ತಿರುವ ಮಾನವ, ಇದ್ದರೆ ಇರಲಿ, ನನಗೂ ನನ್ನ ಮಡದಿ ಮಕ್ಕಳಿಗೂ ಎಂಬ ಸ್ವಾರ್ಥದ ಬದುಕೇ ಎಲ್ಲರದ್ದಾಗಿರುವಾಗ ನಿಜವಾದ ಬದುಕಿನ ಮರ್ಮವು ಇನ್ನೂ ಅರ್ಥವಾಗಿಲ್ಲ ಎಂದೇ ಭಾವಿಸಬೇಕಾಗುತ್ತದೆ. ಹಾಗೆ ನೋಡಿದರೆ ಈ ಬದುಕು ನಮಗೆ ಸಿಕ್ಕಿರುವ ಒಂದು ಕ್ಷಣದ ಅವಕಾಶ ಅಷ್ಟೇ. ಈ ಅವಕಾಶವು ಅತಿ ಅಮೂಲ್ಯವಾದಅಮೃತಘಳಿಗೆಯಾಗಿದ್ದು, ಅದು ಸಾರ್ಥಕತೆಯಲ್ಲಿ ಸಿದ್ಧಿಯನ್ನು ಪಡೆಯಬೇಕು.
ಇವತ್ತಿನ ಯುಗಮಾನವು ಜಂಜಡ, ಓಟದ ಧಾವಂತಕ್ಕೆಜೋತುಬಿದ್ದು ನಾನು-ನನಗಾಗಿ ನನ್ನವರಿಗಾಗಿ ಬದುಕಿದರೆ ಸಾಕು ಎನ್ನುವಸ್ವಾರ್ಥದ ಕಗ್ಗತ್ತಲಿನಬದುಕೇವಿಶ್ವರೂಪದಿವಿಸ್ತರಿಸಿ ಮೆರೆಯುತ್ತಿದ್ದಾಗ ನಿಸ್ವಾರ್ಥದ ಬೆಳಕು ಧರೆಯಲ್ಲಿಜೀವಿಸುವುದು ಅಪರೂಪವೇ ಸರಿ.ದಾನ ಧರ್ಮವ ಮಾಡಿ ಸುಖಿಯಾಗಿರುಮನವೇ ಎಂಬದಾಸರ ಮಾತಿನಂತೆ ದಾನವುಉದಾರತೆಯನೆರಳಿನಲ್ಲಿಪ್ರೀತಿಯಿಂದನೀಡುವುದಾಗಿದೆಅಂತಹಉದಾರತೆಯನ್ನುಮೆರೆದುದಾನ -ಧರ್ಮಕ್ಕಾಗಿಇಡೀಬದುಕನ್ನೇಧಾರೆಎರೆದಸಂಗತಿಸಾಕಷ್ಟುಚರಿತ್ರೆಯಹಂದರದಲ್ಲಿಸ್ಥಾನಪಡೆದುಕೊಂಡಿದೆ. ಇಂದಿನಯುಗಮಾನದಲ್ಲಿಅಂತಹದಾನತ್ವದಎಳೆಗಳುಕುರುಹುಗಳುಸಾಕಷ್ಟುಬೆಳಕಿಗೆಬರುತ್ತಿವೆ. ಇವುಗಳಲ್ಲಿಕೆಲವುಪ್ರತಿಷ್ಠೆಗಾಗಿಮತ್ತೆಕೆಲವುಸ್ಫೂರ್ತಿಗಾಗಿ, ಇನ್ನೂಕೆಲವುನಿಸ್ವಾರ್ಥದಬಗೆಯಲ್ಲಿಯಾವುದೋಕಾರಣದಿಂದಅಪಘಾತಕ್ಕೆಒಳಗಾಗಿಮೆದುಳುನಿಷ್ಕ್ರಿಯೆಗೊಂಡಾಗಅಥವಾಮಾರಣಾಂತಿಕಕಾಯಿಲೆಗೆತುತ್ತಾದಾಗತಮ್ಮದೇಹದಅಂಗಾಂಗಗಳನ್ನುದಾನವಾಗಿನೀಡುವ, ಕಣ್ಣಿಲ್ಲದವರಿಗೆಕಣ್ಣಾಗುವ, ರಕ್ತದಕೊರತೆಎದುರಿಸುತ್ತಿರುವವರಿಗೆರಕ್ತವನ್ನುನೀಡುವದಾನತ್ವದಕಾರ್ಯಗಳುನಡೆಯುತ್ತಲೇಇರುವುದರಿಂದನೈತಿಕತೆ, ಮನುಷ್ಯತ್ವಮಾನವೀಯಮೌಲ್ಯಗಳುಜೀವಂತವಾಗಿವೆಎಂದುಪರಿಭಾವಿಸಬಹುದು.ಬರುವಾಗಲುಏನುತಂದಿಲ್ಲಹೋಗುವಾಗಲುಏನುಒಯ್ಯುವುದಿಲ್ಲ,ಇರುವಷ್ಟುಕಾಲಇದ್ದುನಾಲ್ಕುಜನರಹೆಗಲಮೇಲೆಇಹಲೋಕದಯಾತ್ರೆಯನ್ನುಮುಗಿಸುವಾಗ,ಜನರನಾಲಿಗೆಯಲ್ಲಿ?ಇಂತಹಮಹಾತ್ಮನೊಬ್ಬಇದ್ದಮಹಾನ್ದಾನಿ, ಪುಣ್ಯವಂತ, ಒಳ್ಳೆಯವನು?ಎನ್ನುವಮೆಚ್ಚುಗೆಯಮಾತುಗಳಾನ್ನಾಡಿಕಳುಹಿಸಿಕೊಟ್ಟರೆಹುಟ್ಟಿದಬದುಕನ್ನುಸಾರ್ಥಕಗೊಳಿಸುತ್ತದೆ.

-ಪರಮೇಶಕೆ.ಉತ್ತನಹಳ್ಳಿ
ಕನ್ನಡಉಪನ್ಯಾಸಕ, ಹಾಗೂಹವ್ಯಾಸಿಬರಹಗಾರ,
ಮೈಸೂರು.