ಚಿರತೆ ಬಂತು ಚಿರತೆ ಚಲನಚಿತ್ರ ಬಿಡುಗಡೆ: ಕಲಾವಿದ ಉಮ್ಮತ್ತೂರು ಬಸವರಾಜು ಸಿಹಿ ಹಂಚಿ ಸಂಭ್ರಮಾಚರಣೆ

ಚಾಮರಾಜನಗರ: ಗ್ರಾಮೀಣ ಸೊಗಡಿನ ಚಾಮರಾಜನಗರ ಜಿಲ್ಲೆಯ ವ್ಯಾಪ್ತಿಯಲ್ಲಿ ಚಿತ್ರೀಕರಿಸಿರುವ ಸ್ಥಳೀಯ ಕಲಾವಿದರು ನಟಿಸಿರುವ ಚಿರತೆ ಬಂತು ಚಿರತೆ ಚಲನಚಿತ್ರ ಇಂದು ನಗರದ ಭ್ರಮರಾಂಬ ಚಿತ್ರ ಮಂದಿರದಲ್ಲಿ ಬಿಡುಗಡೆಯಾಗಿದ್ದು, ಚಿತ್ರದಲ್ಲಿ ವನ ಪಾಲಕ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸ್ಥಳೀಯ ಕಲಾವಿದ ಉಮ್ಮತ್ತೂರು ಬಸವರಾಜು ಪ್ರಥಮ ಪ್ರದರ್ಶನ ನೋಡಲು ಬಂದ ಪೇಕ್ಷರಿಗೆ ಸಿಹಿ ಹಂಚಿ ಸಂಭ್ರಮಿಸಿದರು.

ಬೆಳಗ್ಗೆ 10 ಗಂಟೆಗೆ ಆರಂಭವಾದ ಪ್ರಥಮ ಪ್ರದರ್ಶನವನ್ನು ವೀಕ್ಷಣೆ ಮಾಡಲು ಬಂದ ಪೇಕ್ಷರಿಗೆ ಕಲಾವಿದ ಉಮ್ಮತ್ತೂರು ಬಸವರಾಜು ಅವರು ಸಿಹಿ ಹಂಚಿದರು. ಈ ಸಂದರ್ಭದಲ್ಲಿ ಮಾತನಾಡಿದ ಬಸವರಾಜು ಅವರು ಅಪ್ಪಟ ಗ್ರಾಮೀಣ ಶೈಲಿಯಲ್ಲಿರುವ ಸ್ಥಳೀಯ ಕಲಾವಿದರು ನಟಿಸಿರುವ ಚಿರತೆ ಬಂತು ಚಿರತೆ ಚಿತ್ರ ಅದ್ಬುತವಾಗಿ ಮೂಡಿ ಬಂದಿದೆ. ಚಾನಗರದ ಸಿ.ಆರ್.ಕೃಷ್ಣಮೂರ್ತಿ ಅವರು ರಚನೆ ಮಾಡಿ ನಿರ್ದೇಶನ ಮಾಡಿರುವ ಚಿರತೆ ಬಂತು ಚಿರತೆ ಚಿತ್ರವು ಪ್ರಾಣಿ ಗಳು ಮತ್ತು ಮಾನವರ ನಡುವಿನ ಸಂಘರ್ಷವನ್ನು ಎಳೆಎಳೆಯಾಗಿ ಚಿತ್ರಸಲಾಗಿದೆ. 13ಕ್ಕು ಹೆಚ್ಚು ಪ್ರ±ಸ್ತಿಗಳನ್ನು ಪಡೆದುಕೊಂಡಿದೆ.

ಈ ಚಿತ್ರವು ರಾಜ್ಯಾಧ್ಯಂತ ಇಂದಿನಿಂದ ಪ್ರದರ್ಶನ ಗೊಂಡಿದ್ದು, ಪೇಕ್ಷಕರು ಚಿತ್ರಮಂದಿರಗಳಿಗೆ ಹೋಗಿ ಚಿತ್ರವನ್ನು ವೀಕ್ಷಿಸುವ ಮೂಲಕ ಕನ್ನಡ ಸಿನಿಮಾವನ್ನು ಪ್ರೋತ್ಸಾಹಿಸಬೇಕು. ಸ್ಥಳೀಯ ಕಲಾವಿದರೇ ಹೆಚ್ಚಾಗಿ ನಟಿಸಿರುವ ಈ ಚಿತ್ರವನ್ನು ನೋಡುವ ಮೂಲಕ ಕಲಾವಿದರನ್ನು ಬೆಂಬಲಿಸಬೇಕು ಎಂದು ಉಮ್ಮತ್ತೂರು ಬಸವರಾಜು ಮನವಿ ಮನವಿ ಮಾಡಿದರು.

Leave a Reply

Your email address will not be published. Required fields are marked *