ಮುಖ್ಯಮಂತ್ರಿಗಳ ಚಿನ್ನದ ಪದಕ ಪುರಸ್ಕೃತ ಸಿ.ಶಿವನಂಜಶೆಟ್ಟಿ ಅವರಿಗೆ ಜಿಲ್ಲಾ ಉಪ್ಪಾರ ಯುವಕರ ಸಂಘದಿಂದ ಸನ್ಮಾನ

ಚಾಮರಾಜನಗರ:  ಮುಖ್ಯಮಂತ್ರಿ ಚಿನ್ನದ ಪದಕ ಪುರಸ್ಕೃತರಾದ   ತಾಲೂಕಿನ ಕೋಡಿಮೋಳೆ ಗ್ರಾಮದ ನಿವಾಸಿ,  ಪ್ರಸ್ತುತ ಮೈಸೂರು ಜಿಲ್ಲೆಯ ದಕ್ಷಿಣ ಗ್ರಾಮಾಂತರ ಪೊಲೀಸ್ ಠಾಣೆಯ ಸರ್ಕಲ್ ಇನ್ಸಪೆಕ್ಟರ್ ರಾಗಿ ಕರ್ತವ್ಯ ನಿರ್ವಸುತ್ತಿರುವ ಸಿ.ಶಿವನಂಜಶೆಟ್ಟಿ ಅವರನ್ನು ಜಿಲ್ಲಾ ಉಪ್ಪಾರ ಯುವಕರ ಸಂಘದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.
ನಗರದ ಚೆಸ್ಕಾಂ ಕಚೇರಿಯ ಮುಂಭಾಗದಲ್ಲಿ  ಶಿವನಂಜಶೆಟ್ಟಿ ಅವರಿಗೆ ದೊಡ್ಡಗಾತ್ರದ ಹೂವಿನ ಹಾರಹಾಕಿ ಶಾಲು ಹೊದಿಸಿ, ಸಂವಿಧಾನ ಪೀಠಿಕೆ ನೀಡಿ ಸನ್ಮಾನಿಸಲಾಯಿತು.
ಚೆಸ್ಕಾಂ ಲೆಕ್ಕಾಧಿಕಾರಿ ಎನ್.ಮಹೇಶ್ ಮಾತನಾಡಿ,  ತಾಲೂಕಿನ ಕುಗ್ರಾಮವಾದ ಕೋಡಿಮೋಳೆಯಲ್ಲಿ ಹುಟ್ಟಿದ ಶಿವನಂಜಶೆಟ್ಟಿ ಅವರು ಪ್ರಾಥಮಿಕ ಶಿಕ್ಷಣವನ್ನು ಸ್ವಗ್ರಾಮದಲ್ಲೇ ಮುಗಿಸಿ, ಚಂದಕವಾಡಿಯಲ್ಲಿ ಪ್ರೌಢ ಶಿಕ್ಷಣ ಮುಗಿಸಿ ನಂತರ ಚಾಮರಾಜನಗರ ಜೆಎಸ್ಎಸ್ ಕಾಲೇಜಿನಲ್ಲಿ ಬಿಎ ಮುಗಿಸಿ ಪೋಲಿಸರಾಗಿ ನೇಮಕವಾಗಿ ಮೈಸೂರು ಜಿಲ್ಲೆಯ ದಕ್ಷಿಣ ಗ್ರಾಮಾಂತರ ಪೊಲೀಸ್ ಠಾಣೆಯ ಸರ್ಕಲ್ ಇನ್ಸಪೆಕ್ಟರ್ ರಾಗಿ ಕರ್ತವ್ಯ ನಿರ್ವಸುತ್ತಿರುವ ಅವರ ದಕ್ಷ, ಪ್ರಾಮಾಣಿಕ ಸೇವೆಯನ್ನು ರಾಜ್ಯ ಸರ್ಕಾರ ಗುರುತಿಸಿ 2025 ನೇ ಸಾಲಿನ ಮುಖ್ಯಮಂತ್ರಿ ಚಿನ್ನಪದಕ ನೀಡಿ ಸನ್ಮಾನಿಸಿರುವುದು ಜಿಲ್ಲೆಗೆ ಕೀರ್ತಿ ತಂದಿದೆ..ಅವರನ್ನು ಜಿಲ್ಲಾ ಉಪ್ಪಾರ ಯುವ ಸಂಘ ದ ಸನ್ಮಾನಿರುವುದು ಒಳ್ಳೆಯ ಬೆಳವಣಿಗೆ ಆಗಿದೆ. ಮುಂದಿನ ದಿನಗಳಲ್ಲೂ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಿ ಮತ್ತಷ್ಟು ರಾಜ್ಯ, ದೇಶ ಮಟ್ಟದ ಪ್ರಶಸ್ತಿ ಗಳು ಲಭಿಸಲಿ ಎಂದು ಶುಭ ಕೋರಿದರು.

Leave a Reply

Your email address will not be published. Required fields are marked *