ಮುಖ್ಯಮಂತ್ರಿಗಳ ಚಿನ್ನದ ಪದಕ ದೊರೆತಿರುವುದು ತುಂಬಾ ಸಂತಸ
ಚಾಮರಾಜನಗರ: ಮುಖ್ಯಮಂತ್ರಿಗಳ ಚಿನ್ನಪದಕ ಪುರಸ್ಕೃತರಾದ ತಾಲೂಕಿನ ಕೋಡಿಮೋಳೆ ಗ್ರಾಮದ ನಿವಾಸಿ, ಪ್ರಸ್ತುತ ಮೈಸೂರು ಜಿಲ್ಲೆಯ ದಕ್ಷಿಣ ಗ್ರಾಮಾಂತರ ಪೊಲೀಸ್ ಠಾಣೆಯ ಸರ್ಕಲ್ ಇನ್ಸಪೆಕ್ಟರ್ ರಾಗಿ ಕರ್ತವ್ಯ ನಿರ್ವಸುತ್ತಿರುವ ಸಿ.ಶಿವನಂಜಶೆಟ್ಟಿ ಅವರನ್ನು ಸ್ವಗ್ರಾಮದಲ್ಲಿ ಸನ್ಮಾನಿಸಲಾಯಿತು.
ಇಂದು ಗ್ರಾಮಕ್ಕೆ ಆಗಮಿಸಿದ ಶಿವನಂಜಶೆಟ್ಟಿ ಅವರನ್ನು ಗ್ರಾಮಸ್ಥರು ಪಟಾಕಿ ಸಿಡಿಸಿ, ಸ್ವಾಗತಿಸಿ ಬರಮಾಡಿಕೊಂಡರು. ಗ್ರಾಮದ ಬಸ್ ನಿಲ್ದಾಣದಲ್ಲಿ ಹಾಕಿದ ವೇದಿಕೆಯಲ್ಲಿ ದೊಡ್ಡಗಾತ್ರದ ಹೂವಿನ ಹಾಕಿ, ಶಾಲು ಹೊದಿಸಿ, ಮೈಸೂರುಪೇಟ ತೊಡಿಸಿ, ಫಲತಾಂಬೂಲ ನೀಡಿ ತುಂಬು ಹೃದಯದಿಂದ ಸನ್ಮಾನಿಸಿ ಗುಣಗಾನ ಮಾಡಿದರು.
ಮುಖ್ಯಮಂತ್ರಿಗಳ ಚಿನ್ನದ ಪದಕ ದೊರೆತಿರುವುದು ತುಂಬಾ ಸಂತಸ: ಸನ್ಮಾನ ಸ್ವೀಕರಿಸಿದ ಸಿ. ಶಿವನಂಜಶೆಟ್ಟಿ ಮಾತನಾಡಿ,
ಗ್ರಾಮದ ಎಲ್ಲಾ ಕೋಮಿನ ಜನರು ಸೇರಿಕೊಂಡು ನನ್ನನ್ನು ಸನ್ಮಾನಿರುವುದು ತುಂಬಾ ಖುಷಿ ತಂದಿದೆ. ಇಡೀ ರಾಜ್ಯದಲ್ಲಿ ನಾನು ಸೇರಿದಂತೆ ಇಬ್ಬರು ಅಧಿಕಾರಿಗಳಿಗೆ ಮುಖ್ಯಮಂತ್ರಿಗಳ ಚಿನ್ನಪದಕ ದೊರೆತಿದೆ. ಹಲವು ಕೊಲೆಪ್ರಕರಣಗಳು, ಕಳ್ಳತನ ಪ್ರಕರಣಗಳು, ಮೋಕೋ ಪ್ರಕರಣಗಳು, ವಾಜಮಂಗಲದಲ್ಲಿ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಯುಳ್ಳ ಪೈಕ್ ಬಸಿ ಬಳಿದ ಪ್ರಕರಣದಲ್ಲಿ ಭೇದಿಸಿದ ಹಿನ್ನಲೆಯಲ್ಲಿ ಮುಖ್ಯಮಂತ್ರಿಗಳ ಚಿನ್ನದಪದಕಕ್ಕೆ ಭಾಜನರಾಗಿದ್ದೇವು. ಕೊಡಿಮೋಳೆ ಕುಗ್ರಾಮದಲ್ಲಿ ಹುಟ್ಟಿದ ನನಗೆ ಮುಖ್ಯಮಂತ್ರಿ ಚಿನ್ನದಪದಕ ಸಿಕ್ಕಿರುವುದು ತುಂಬಾ ಸಂತಸದಾಯಕವಾಗಿದೆ ಅಲ್ಲದೆ ನನ್ನನ್ನು ಸ್ವಗ್ರಾಮದಲ್ಲಿ ಗುರುತಿಸಿ ಸನ್ಮಾನಿಸಿರುವುದು ಮತ್ತಷ್ಟು ಸಂತಸ ತಂದಿದೆ. ಇದು ನನ್ನ ಜವಾಬ್ದಾರಿಯನ್ನು ಹೆಚ್ಚು ಮಾಡಿದ್ದು ಇನ್ನು ಮುಂದೆ ಇಲಾಖೆಯಲ್ಲಿ ಉತ್ತಮ ಕೆಲಸ ಮಾಡುತ್ತೇವೆ. ನನ್ನನ್ನು ಸನ್ಮಾನಿಸಿದ ಗ್ರಾಮದ ಎಲ್ಲ ಕೋಮಿನ ಮುಖಂಡರಿಗೆ ಈ ಮೂಲಕ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಶಿವನಂಜಶೆಟ್ಟಿ ಗ್ರಾಮಕ್ಕೆ ಕೀರ್ತಿ ತಂದಿದ್ದಾರೆ :
ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಕೋಡಿಮೋಳೆ ರಾಜಶೇಖರ ಮಾತನಾಡಿ, ಸುಮಾರು 20 ವರ್ಷಗಳ ಹಿಂದೆ ನಮ್ಮ ಗ್ರಾಮದಲ್ಲಿ ಪೊಲೀಸ್ ಸಿ.ಶಿವನಂಜಶೆಟ್ಟಿ ಬಿಟ್ಟರೆ ಯಾರು ಸರ್ಕಾರಿ ನೌಕರರು, ಹೆಚ್ಚಿನ
ಮಟ್ಟದಲ್ಲಿ ಓದಿರುವ ವಿದ್ಯಾವಂತರು ಇಲ್ಲ ಎಂದು ಹೇಳಿದೆ. ಪೊಲೀಸ್ ಸಿ.ಶಿವನಂಜಶೆಟ್ಟಿ ವೃತನಿರೀಕ್ಷಕರಾಗಿ ದಕ್ಷ, ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವ ಮೂಲಕ ಮುಖ್ಯಮಂತ್ರಿ ಚಿನ್ನದಪದಕ ಸ್ವೀಕರಿಸಿ ಗ್ರಾಮಕ್ಕೆ ಕೀರ್ತಿ ತಂದಿದ್ದಾರೆ ಎಂದರು.
ಜಿಲ್ಲಾ ರೈತ ಹಿತರಕ್ಷಣಾ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಆಲೂರುಮಲ್ಲು ಮಾತನಾಡಿ,ಸಿ.ಶಿವನಂಜಶೆಟ್ಟಿ ಅವರು ಎಲ್ಲ ಕಡೆಗಳಲ್ಲೂ ಉತ್ತಮ ಸೇವೆ ಸಲ್ಲಿಸಿಕೊಂಡು ಬಂದಿದ್ದಾರೆ. ಅವರ ದಕ್ಷ, ಪ್ರಾಮಾಣಿಕ ಸೇವೆಗೆ ಮುಖ್ಯಮಂತ್ರಿ ಚಿನ್ನದ ಪದಕ ದೊರೆತಿದೆ. ಮುಂದಿನ ದಿನಗಳಲ್ಲಿ ದೊಡ್ಡಮಟ್ಟದ ಪ್ರಶಸ್ತಿಗಳು ದೊರೆಯಲಿ ಎಂದು ಆಶಿಸಿದರು.
ಪ್ರಧಾನ ಕಾರ್ಯದರ್ಶಿ ಬಸವನಪುರ ರಾಜಶೇಖರ್ ಮಾತನಾಡಿ, ಶಿಕ್ಷಣ ವಂಚಿತ ಸಮುದಾಯದಲ್ಲಿ ಹುಟ್ಟಿದ ಸಿ.ಶಿವನಂಜಶೆಟ್ಟಿ, ಅವರು ಮುಖ್ಯಮಂತ್ರಿಗಳ ಚಿನ್ನದಪದಕ ಪಡೆಯುವ ಮಟ್ಟಕ್ಕೆ ಬೆಳೆದಿರುವುದು ತುಂಭಾ ಖುಷಿಪಡುವ ವಿಚಾರವಾಗಿದೆ ಎಂದರು
ಕಾರ್ಯಕ್ರಮದಲ್ಲಿ ಜಿಲ್ಲಾ ರೈತ ಹಿತರಕ್ಷಣಾ ಹೋರಾಟ ಸಮಿತಿಯ ಟೌನ್ ಅಧ್ಯಕ್ಷ ಜಿ.ಎಂ.ಶಂಕರ್, ಜನಸೇನಾ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಎಂ. ಎನ್. ಹರೀಶ್‌ಕುಮಾರ್, ಮುಖಂಡ ಕಾಗಲವಾಡಿ ಬಸವರಾಜು, ತೊರಹಳ್ಳಿಕುಮಾರ್, ಅಂಗಡಿ ಸೋಮಣ್ಣ, ಯಜಮಾನರಾದ ಗೋವಿಂದಶೆಟ್ಟಿ, ಮಹೇಶ್, ನಟರಾಜು, ಜಯಶಂಕರ್, ವಿಷಕಂಠ, ನಂಜುಂಡಸ್ವಾಮಿ, ರಂಗಸ್ವಾಮಿ, ರಾಜು, ನಾಗನಾಯಕ, ಗೌಡಿಕೆ ಮಹೇಶ್, ಪರಶಿವಪ್ಪ, ನಾಗಪ್ಪ, ಪ್ರಕಾಶ್, ಆಲೂರುಮಲ್ಲು, ಬಸವನಪುರ ರಾಜಶೇಖರ, ಹರೀಶ್, ಮಂಗಲರಾಜು, ಉಡಿಗಾಲ ಲೋಕೇಶ್ ಗ್ರಾಮಸ್ಥರು ಭಾಗವಹಿಸಿದ್ದರು.