ಬಾಲ್ಯ ವಿವಾಹ : 8 ಮಂದಿ ವಿರುದ್ದ ಪ್ರಕರಣ ದಾಖಲು

ಚಾಮರಾಜನಗರ: ಚಾಮರಾಜನಗರ ಜಿಲ್ಲೆ ಮತ್ತು ತಾಲ್ಲೂಕಿನ ಗ್ರಾಮವೊಂದರಲ್ಲಿ ಅಪ್ರಾಪ್ತ 15 ವರ್ಷದ ಬಾಲಕಿಗೆ ಸುಮಾರು 27 ವರ್ಷದ ಯುವಕನೊಂದಿಗೆ ಬಾಲ್ಯವಿವಾಹ ನೆರವೇರಿಸಿದ ಸಂಬಂಧ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮಕ್ಕಳ ಸಹಾಯವಾಣಿ 1098ಗೆ ದೂರು ದಾಖಲಾಗಿದ್ದು, ಈ ಸಂಬಂಧ ಬಾಲಕಿಯ ಮನೆ ಭೇಟಿ ಮಾಡಲಾಗಿ ವಿವಾಹವು ನೆರವೇರಿರುವುದು ದೃಢಪಟ್ಟ ಹಿನ್ನಲೆಯಲ್ಲಿ ಚಾಮರಾಜನಗರ ಮಹಿಳಾ ಪೆÇಲೀಸ್ ಠಾಣೆಯಲ್ಲಿ 8 ಮಂದಿಯ ವಿರುದ್ದ ಪ್ರಕರಣ ದಾಖಲಾಗಿದೆ. 

ಬಾಲ್ಯವಿವಾಹವನ್ನು ನೆರವೇರಿಸಿದವರ ವಿರುದ್ಧ ಬಾಲ್ಯ ವಿವಾಹ ನಿμÉೀಧ ಕಾಯ್ದೆ-2006 ಕಲಂ 9 1, 11 ರಂತೆ ಯುವಕ (ಎ-1) ಯುವಕನ ತಂದೆ (ಎ-2) ಯುವಕನ ತಾಯಿ (ಎ-3) ಅಪ್ರಾಪ್ತ ಬಾಲಕಿಯ ತಂದೆ (ಎ-4), ಅಪ್ರಾಪ್ತ ಬಾಲಕಿಯ ತಾಯಿ (ಎ-5) ಅಪ್ರಾಪ್ತ ಬಾಲಕಿಯ ಸಂಬಂಧಿಕರು (ಎ-6, ಮತ್ತು ಎ-7) ಬಾಲ್ಯವಿವಾಹ ನೆರವೇರಿಸಿಕೊಟ್ಟ ಪೂಜಾರಿ (ಎ-8) ಇವರುಗಳ ವಿರುದ್ಧ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮಕ್ಕಳ ಸಹಾಯವಾಣಿ-1098 ಸಂಯೋಜಕರು ಪ್ರಕರಣ ದಾಖಲಿಸಿದ್ದಾರೆ. 

ಬಾಲ್ಯವಿವಾಹವು ರಾಷ್ಟ್ರದ ಅಭಿವೃದ್ಧಿ ಮಾರಕವಾಗಿರುವ ಸಮಸ್ಯೆಯಾಗಿದ್ದು, ಬಾಲ್ಯವಿವಾಹವನ್ನು ತಡೆಗಟ್ಟುವುದು ಪ್ರತಿಯೊಬ್ಬ ನಾಗರಿಕ ಪ್ರಜೆಯ ಕರ್ತವ್ಯವಾಗಿರುತ್ತದೆ. ಬಾಲ್ಯವಿವಾಹವು ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದ್ದು ಬಾಲ್ಯವಿವಾಹವು ನಡೆದಲ್ಲಿ ತಂದೆ-ತಾಯಿ, ಸಂಬಂಧಿಕರು, ಪೂಜಾರಿಗಳು, ಕುಮ್ಮಕ್ಕು ನೀಡಿದವರು ಹಾಗೂ ಭಾಗೀದಾರರು ತಪ್ಪಿತಸ್ಥರಾಗಲಿದ್ದು, ತಪ್ಪಿತಸ್ಥರ ಮೇಲೆ ಪ್ರಕರಣ ದಾಖಲಿಸಲು ಅವಕಾಶವಿರುತ್ತದೆ. ಕಾನೂನು ಪ್ರಕಾರ 2 ವರ್ಷ ಜೈಲು ಹಾಗೂ 1 ಲಕ್ಷ ರೂಪಾಯಿಗಳ ದಂಡವನ್ನು ವಿಧಿಸಲು ಅವಕಾಶವಿರುತ್ತದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *