ಅಬಾಕಸ್‌ ಕಲಿತರೆ ಮಕ್ಕಳು ಕ್ರಿಯಾಶೀಲ: ವೆಂಕಟನಾಗಪ್ಪಶೆಟ್ಟಿ

ಚಾಮರಾಜನಗರ: ಅಬಾಕಸ್‌ ಪದ್ಧತಿಯ ಮೂಲಕ ಮಕ್ಕಳು ಕಲಿತರೆ ಮೆದುಳಿಗೆ ಶಕ್ತಿ ವೃದ್ಧಿಯಾಗಿ ವಿದ್ಯಾರ್ಥಿಗಳು ಹೆಚ್ಚು ಕ್ರಿಯಾಶೀಲರಾಗುತ್ತಾರೆ ಎಂದು ಸಮಾಜ ಸೇವಕ ವೆಂಕಟನಾಗಪ್ಪಶೆಟ್ಟಿ ಹೇಳಿದರು.
ನಗರದ ವಾಸವಿ ಮಹಲ್ ನಲ್ಲಿ ನಡೆದ ದಿವ್ಯ ಕನಕರಾಜ್ ಸ್ಮಾರ್ಟ್ ಜಿನಿಯಸ್ ಅಕಾಡೆಮಿ 3 ನೇ ವರ್ಷದ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಈ ಪದ್ಧತಿಯಲ್ಲಿ ಮಕ್ಕಳು ಹಾರ್ಡ್‌ವರ್ಕ್‌ ಮಾಡುವುದರಿಂದ ಅವರ ಬುದ್ದಿ ಹೆಚ್ಚಾಗುತ್ತದೆ. ಅಲ್ಲದೇ ಇನ್ನಷ್ಟು ಕಲಿಯುವ ಹಂಬಲ ಬೆಳೆಸಿಕೊಳ್ಳುವುದು ಮಾತ್ರವಲ್ಲದೇ ಪೋಷಕರಿಗೆ ಗೌರವ ನೀಡುತ್ತಾರೆ ಎಂದರು.
ಜೆಎಸ್ಎಸ್ ಕಾಲೇಜು  ಗಣಿತ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಅರುಣಶ್ರೀ ಮಾತನಾಡಿ, ಬೇಬಿ ಗಣಿತ ನಮ್ಮ ದೇಶದ್ದು, ಅದು ಮಕ್ಕಳಿಗೆ ಪರಿಚಯ ಆಗಲೇಬೇಕು. ಅದು ತುಂಬಾ ಚಿಕ್ಕಮಕ್ಕಳಿಗೆ ಸಹಾಯವಾಗುದಿಲ್ಲ. ಪ್ರೌಢಶಾಲಾ ಮಕ್ಕಳಿಗೆ ಅನುಕೂಲವಾಗುತ್ತದೆ. ಆಗಾಗಿ ಬೇಬಿ ಗಣಿತ ಮಕ್ಕಳಿಗೆ ಕಲಿಸಲು ಹೆಚ್ಚು ನೀಡಬೇಕು. ನಮ್ಮ ದೇಶದ ಸಂಸ್ಕೃತಿ ಕಲಿಸಬೇಕು ಪೋಷಕರು ಮಕ್ಕಳಿಗೆ ಜೀವನದ ಲೆಕ್ಕಾಚಾರ ಹೇಳಿಕೊಡಬೇಕು. ಏಕೆಂದರೆ ಮೊದಲ ಪಾಠಶಾಲೆ ಮನೆಯಾಗಿರುತ್ತದೆ ಜೀವನಕ್ಕೆ ಬೇಕಾದದನ್ನು ಹೇಳಿಕೊಡಬೇಕು ಎಂದರು.
ಅಕಾಡೆಮಿಯ ದಿವ್ಯಕನಕರಾಜ್ಮಾ ತನಾಡಿ, ಮಕ್ಕಳ ಪ್ರತಿಭೆ ಮತ್ತು ಮಾನಸಿಕ ಬೆಳವಣಿಗೆಗೆ ಪೂರಕವಾಗಿ ಇತ್ತೀಚಿನ ದಿನಗಳಲ್ಲಿ ಅಬಾಕಸ್‌ ಪದ್ಧತಿಯ ಮೂಲಕ ಕಲಿಕೆ ಸಾಮರ್ಥ್ಯ‌ ಹೆಚ್ಚಿಸಲಾಗುತ್ತಿದೆ. ಅಬ್ಯಾಕಸ್‌ನಿಂದ ಮಕ್ಕಳಿಗೆ ಕಲಿಕೆಯ ಸಾಮರ್ಥ್ಯ‌ ಹೆಚ್ಚಳ, ಏಕಾಗ್ರತೆ, ಜ್ಞಾಪಕ ಶಕ್ತಿ ಹೆಚ್ಚಳ, ತಾರ್ಕಿಕ ಶಕ್ತಿ ಮತ್ತು ಕಲಾತ್ಮಕ ಗುಣಗಳು, ಭಯ, ಆತಂಕ ನಿವಾರಣೆಯಾಗಲಿದೆ
ಈ ದಿಸೆಯಲ್ಲಿ ಅಬಾಕಸ್‌ ಕಲಿಕೆಗೆ ಹೆಚ್ಚು ಒತ್ತು ನೀಡುತ್ತಿದೆ ಎಂದರು.
ಹಿಂದುಸ್ತಾನಿ ಬುಕ್ಸ್ ಆಫ್ ರೆಕಾರ್ಡ್ಸ್  ಇಂಟರ್ ನ್ಯಾಷನಲ್ ಅಬಾಕಸ್ ಅವಾರ್ಡ್ ಸ್ಪರ್ಧೆಯಲ್ಲಿ ವಿಜೇತ ರಾದ 16 ಮಕ್ಕಳಿಗೆ  ಬಹುಮಾನ ವಿತರಿಸಲಾಯಿತು. ಕೆಇಬಿ ಲೆಕ್ಕಾಧಿಕಾರಿ ಎಂ.ಮಹೇಶ್ ಅವರ ಪುತ್ರಿಯರಾದ ದೀಕ್ಷಿತ ಎಂ ಮತ್ತು ಲೇಖನ ಎಂ ವಿಜೇತರಾಗಿದ್ದಾರೆ.
ಕಾರ್ಯಕ್ರಮದಲ್ಲಿ ಜಾನಪದ ಗಾಯಕ ಸಿ.ಎಂ.ನರಸಿಂಹಮೂರ್ತಿ,ಕನಕರಾಜ್,  ಬಾಲಾಜಿ,  ಪರಿಸರ ಪ್ರೇಮಿವೆಂಕಟೇಶ್,ಡಾ. ತೃಪ್ತಿ,  ಕಿರಣ್ ಗಿರ್ಗಿ ,ವಿದ್ಯಾರ್ಥಿಗಳು, ಪೋಷಕರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *