- ಸರಗೂರಿನಲ್ಲಿ ಶೌಚಾಲಯ ನಿರ್ಮಾಣಕ್ಕೆ ಗುದ್ದಲಿಪೂಜೆ
ಚಾಮರಾಜನಗರ: ಕ್ರೈಸ್ತ ಸಮುದಾಯದ ಅಭಿವೃದ್ಧಿ ಗೆ ಆದ್ಯತೆ ನೀಡಲಾಗಿದೆ ಎಂದು ಎಂಎಸ್ಐಎಲ್ ಅಧ್ಯಕ್ಷರು, ಶಾಸಕ ಸಿ.ಪುಟ್ಟರಂಗಶೆಟ್ಟಿ ಹೇಳಿದರು.
ತಾಲೂಕಿನ ಸರಗೂರಿನ ಸಂತ ಜೋಸೆಫರ ದೇವಾಲಯದ ಪಕ್ಕದಲ್ಲಿ ಶೌಚಾಲಯ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ಶೌಚಾಲಯ ನಿರ್ಮಾಣಕ್ಕೆ ಶೌಚಾಲಯ ನಿರ್ಮಾಣಕ್ಕೆ ಶಾಸಕರ ಅನುದಾನದಲ್ಲಿ 5 ಲಕ್ಷ ರೂ.ಮಂಜೂರು ಮಾಡಲಾಗಿದೆ. ತಾಲೂಕಿನ ಚರ್ಚ್ ಗಳ ಅಭಿವೃದ್ಧಿ ಗೆ ಅನುದಾನ ನೀಡಲಾಗಿದೆ. ಮಾಡಿ ಮುಂದಿನ ದಿನಗಳಲ್ಲಿ ಕ್ರೈಸ್ತ ಅಭಿವೃದ್ಧಿ ಗೆ ಒತ್ತು ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಫಾಧರ್ ಅಂತೋಣಿ ಸ್ವಾಮಿ, ಗ್ರಾ.ಪಂ.ಸದಸ್ಯರಾದ ಜಕಾವುಲ್ಲಾ ಷರೀಫ್, ಯಾಷನ್, ಸುರೇಶ್, ಮುಸ್ಲಿಂ ಮುಖಂಡ ನಸ್ರುವುಲ್ಲಾ ಷರೀಫ್, ಲಿಂಗರಾಜು, ಜೋಸೆಫ್, ಆರ್.ನಾಗರಾಜು, ಆರ್ಶೀವಾದ್, ಎಸ್.ಆರ್.ನಾಗರಾಜು, ಎಸ್.ವಿ.ಬಾಲಸುಬ್ರಹ್ಮಣ್ಯಂ ಗಾನ ಗಂಧರ್ವ ಕಲಾ ವೇದಿಕೆ ಪ್ರಧಾನ ಕಾರ್ಯದರ್ಶಿ ಎನ್. ಜೋಸೆಫ್, ಎಸ್.ಪಿ.ನಟರಾಜು ಹಾಜರಿದ್ದರು.