
ಚಾಮರಾಜನಗರ: ಜಿಲ್ಲಾದ್ಯಂತ ಕ್ರಿಸ್ಮಸ್ ಸಂಭ್ರಮ ಮನೆಮಾಡಿದೆ. ಕ್ರಿಸ್ಮಸ್ ಹಬ್ಬದ ಅಂಗವಾಗಿ ರಾತ್ರಿ ಚರ್ಚ್ ಗಳಲ್ಲಿ ಗೋಧಳಿ ನಿರ್ಮಿಸಿ ಬಾಲ ಏಸು ಪ್ರತಿಮೆಯನ್ನಿಟ್ಟು ಪೂಜಾ ವಿಧಿವಿಧಾನಗಳನ್ನು ನೆರವೇರಿಸಿ ಸಾಮೂಹಿಕ ವಿಶೇಷ ಪ್ರಾರ್ಥನೆ ಸಲ್ಲಿಸಿ ಕ್ರೈಸ್ತ ಧರ್ಮದವರು ಕ್ರಿಸ್‌ಮಸ್ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.
ವಿದ್ಯುತ್ ಬೆಳಕಿನಿಂದ ಕಂಗೊಳಿಸುತ್ತಿರುವ ಚರ್ಚ್‌ಗಳು : ಕ್ರಿಸ್ಮಸ್ ಹಬ್ಬದ ಅಂಗವಾಗಿ ಚರ್ಚ್ ಗಳನ್ನು ಸ್ವಚ್ಛಗೊಳಿಸಿ ವಿದ್ಯುತ್ ದೀಪಾವಳಿ ಶೃಂಗರಿಲಾಯಿತು. ಸಿ.ಅಂತೋಣಪ್ಪ ಅವರಿಂದ ಕ್ರಿಸ್ಮಸ್ ಸಂದೇಶ: ಚಾಮರಾಜನಗರ ಬಿ.ರಾಚಯ್ಯ ಜೋಡಿರಸ್ತೆಯಲ್ಲಿರುವ ಸಂತಪೌಲರ ದೇವಾಲಯದ ಧರ್ಮಗುರುಗಳಾದ ಸಿ.ಅಂತೋಣಪ್ಪ ಮಾತನಾಡಿ, ಕ್ರಿಸ್ಮಸ್ ಹಬ್ಬದ ಅಂಗವಾಗಿ ಸಂತಪೌಲರ ದೇವಾಲಯವನ್ನು ವಿದ್ಯುತ್ ದೀಪಾವಳಿಗಳಿಂದ ಅಲಂಕರಿಸಿ ರಾತ್ರಿ ಗೋಧಳಿ ನಿರ್ಮಿಸಿ ಬಾಲ ಏಸು ಪ್ರತಿಮೆಯನ್ನಿಟ್ಟು ಪೂಜಾ ಬೆಳಿಗ್ಗೆ ರಾತ್ರಿ ವಿಶೇಷ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ರಾತ್ರಿ ಗೋಧಳಿ ನಿರ್ಮಿಸಿ ಬಾಲ ಏಸು ಪ್ರತಿಮೆ ಸ್ಥಾಪಿಸಿ ಪೂಜೆ ವಿಧಿವಿಧಾನಗಳನ್ನು ನೆರವೇರಿಸಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು ಎಂದರು.
ಕ್ರಿಸ್‌ಮಸ್ ಹಬ್ಬವನ್ನು ಒಳಿತಿನ ಗೆಲುವಿನ ಸಂಕೇತವಾಗಿ ಆಚರಿಸಲಾಗುತ್ತದೆ. ಕ್ರೈಸ್ತ ಸಮುದಾಯಕ್ಕೆ ಇದು ಹೊಸ ಆರಂಭದ ದಿನವೆಂದು ಕೂಡಾ ಪರಿಗಣಿಸಲಾಗಿದೆ. ಪ್ರೀತಿ, ಶಾಂತಿ, ತ್ಯಾಗ ಮತ್ತು ಮಾನವೀಯತೆಯ ಸಂದೇಶವನ್ನು ಸಾರುತ್ತದೆ. ಇನ್ನು ಕ್ರಿಸ್‌ಮಸ್‌ಗೆ ಮುನ್ನದ ದಿನವಾದ ಡಿ. 24ರ ಮಧ್ಯರಾತ್ರಿ ಕ್ರೈಸ್ತರು ಚರ್ಚ್‌ಗೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಕ್ರಿಸ್ಮಸ್ ಹಬ್ಬದ ಶುಭಾಶಯ ಕೋರಿದರು.