ರಾಷ್ಟ್ರೀಯ ಹೆದ್ದಾರಿ ಅಗಲೀಕರಣದಿಂದ ಪರಿಹಾರವಾಗಿ ನಿವೇಶನ ಪಡೆದವರು ಮರುಹಂಚಿಕೆಗೆ ದಾಖಲಾತಿ ಸಲ್ಲಿಸಲು ನಗರಸಭೆ ಸೂಚನೆ

ಚಾಮರಾಜನಗರ: ಚಾಮರಾಜನಗರ ನಗರಸಭಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 209ರ ರಸ್ತೆ ಅಗಲೀಕರಣ ಸಂದರ್ಭದಲ್ಲಿ ನಿವೇಶನ ಮತ್ತು ಮನೆಗಳನ್ನು ಕಳೆದುಕೊಂಡ ಮಾಲೀಕರಿಗೆ ಪರಿಹಾರವಾಗಿ ಉತ್ತುವಳ್ಳಿ ಗ್ರಾಮದ ಸರ್ವೆ ನಂ 117ರ ಆಶ್ರಯ ಬಡಾವಣೆಯಲ್ಲಿ ವಾಜಪೇಯಿ ನಿವೇಶನ ಯೋಜನೆಯಡಿ ನಿವೇಶನಗಳನ್ನು ನೀಡಿ ಹಕ್ಕು ಪತ್ರ ಸಹ ನೀಡಿದ್ದು, ತಾಂತ್ರಿಕ ಕಾರಣದಿಂದ ನಿವೇಶನಗಳ ಮರುಹಂಚಿಕೆ ಮಾಡಬೇಕಾಗಿರುವುದರಿಂದ ಹಕ್ಕು ಪತ್ರ ಪಡೆದಿರುವವರು ತಮ್ಮ ಹಕ್ಕು ಪತ್ರ ಹಾಗೂ ಇನ್ನಿತರ ಮೂಲ ದಾಖಲಾತಿಗಳನ್ನು ನಗರಸಭೆಗೆ ಸಲ್ಲಿಸುವಂತೆ ಪೌರಾಯುಕ್ತರು ತಿಳಿಸಿದ್ದಾರೆ.

ಚಾಮರಾಜನಗರ ನಗರಸಭಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 209ರ ರಸ್ತೆ ಅಗಲೀಕರಣ ಸಂದರ್ಭದಲ್ಲಿ ಎಡ ಮತ್ತು ಬಲ ಭಾಗದಲ್ಲಿ ನಿವೇಶನ ಮತ್ತು ಮನೆಗಳನ್ನು ಕಳೆದುಕೊಂಡ ಮಾಲೀಕರಿಗೆ ಪರಿಹಾರವಾಗಿ ಉತ್ತುವಳ್ಳಿ ಗ್ರಾಮದ ಸರ್ವೆ ನಂ 117ರ ಆಶ್ರಯ ಬಡಾವಣೆಯಲ್ಲಿ 2016-17ನೇ ಸಾಲಿನ ವಾಜಪೇಯಿ ನಿವೇಶನ ಯೋಜನೆಯಡಿ ನಿವೇಶನಗಳನ್ನು ನೀಡಿ ಹಕ್ಕು ಪತ್ರಗಳನ್ನು ನೀಡಲಾಗಿತ್ತು.

ಆದರೆ ತಾಂತ್ರಿಕ ಕಾರಣದಿಂದ ಹಿಂದೆ ನೀಡಿದ ನಿವೇಶನಗಳ ಸಂಖ್ಯೆ ಮತ್ತು ಚೆಕ್ಕುಬಂಧಿ ವ್ಯತ್ಯಾಸವಿದ್ದು, ಪುನರ್ ಪರಿಶೀಲನೆ ಮಾಡಿ, ನಿವೇಶನಗಳನ್ನು ಮರುಹಂಚಿಕೆ ಮಾಡಬೇಕಾಗಿರುವುದರಿಂದ ಈಗಾಗಲೇ ನಗರಸಭೆ ಕಚೇರಿಯಿಂದ ನೀಡಿರುವ ಹಕ್ಕು ಪತ್ರದೊಂದಿಗೆ ನಿಮ್ಮ ವೈಯಕ್ತಿಕ ಮೂಲ ದಾಖಲಾತಿಗಳಾದ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಚುನಾವಣೆ ಗುರುತಿನ ಚೀಟಿ ಹಾಗೂ ಪಡೆದಿರುವ ನಿವೇಶನವನ್ನು ಈಗಾಗಲೇ ನೋಂದಣಿ ಮಾಡಿಕೊಂಡಿದ್ದಲ್ಲಿ ನೋಂದಣಿ ಪತ್ರದ ನಕಲು ಪ್ರತಿಯನ್ನು ಮಾರ್ಚ್ 18ರ ಸಂಜೆ 5 ಗಂಟೆಯೊಳಗಾಗಿ ನಗರಸಭೆ ಕಚೇರಿಗೆÉ ಸಲ್ಲಿಸಬೇಕು.

ಇಲ್ಲವಾದಲ್ಲಿ ಆಯ್ಕೆಯನ್ನು ರದ್ದುಗೊಳಿಸಿ ಸರಿಯಾದ ದಾಖಲಾತಿಗಳನ್ನು ಸಲ್ಲಿಸಿದವರಿಗೆ ಮಾತ್ರ ನಿವೇಶನ ಹಕ್ಕು ಪತ್ರವನ್ನು ಹಂಚಲಾಗುವುದು. ತಡವಾಗಿ ಬಂದ ಅರ್ಜಿಗಳನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಆಯ್ಕೆಯಾಗಿರುವ ಫಲಾನುಭವಿಗಳ ಪಟ್ಟಿಯನ್ನು ಕಚೇರಿಯ ನೋಟಿಸ್ ಬೋರ್ಡ್‍ನಲ್ಲಿ ಪ್ರಕಟಿಸಲಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ನಗರಸಭೆಯ ಕಲ್ಯಾಣ ಶಾಖೆಯನ್ನು ಸಂಪರ್ಕಿಸುವಂತೆ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *