10ನೇ ತರಗತಿ ಸಿಬಿಎಸ್‌ಸಿ ಎಂ.ಇಂಪನಾಗೆ ಶೇ.97 ಅಂಕ

ಚಾಮರಾಜನಗರ: ಸಿಬಿಎಸ್‌ಸಿ 10ನೇ ತರಗತಿಯಲ್ಲಿ ಎಂ.ಇಂಪನಾ ಶೇ.97 (500ಕ್ಕೆ 485) ಅಂಕ ಪಡೆ ಯುವ ಮೂಲಕ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ.
ಈಕೆ ಚಾಮರಾಜನಗರದ ಹೊರ ವಲಯದ ಮಾದಾಪುರ -ಕಿರಗಸೂರು ಗ್ರಾಮದ ಬಳಿ ಇರುವ ಕೇಂದ್ರೀಯ ವಿದ್ಯಾಲಯದ ವಿದ್ಯಾ ರ್ಥಿನಿಯಾಗಿದ್ದು, ಇವಳ ಸಾಧನೆಗೆ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.
ಈಕೆ ಪೊಲೀಸ್ ಇಲಾಖೆಯ ಉದ್ಯೋಗಿ ಎಂ. ಮಹೇಶ್ ಹಾಗೂ ಪಿ.ಪವಿತ್ರ ದಂಪತಿ ಪುತ್ರಿಯಾಗಿದ್ದಾಳೆ.

Leave a Reply

Your email address will not be published. Required fields are marked *