ಸಂಸದ ಅನಂತ್‍ಕುಮಾರ್‍ಹೆಗಡೆ ಗಡಿಪಾರು ಮಾಡಲು ಕಾಂಗ್ರೆಸ್ ಮುಖಂಡ ಮಾದಾಪುರ ರವಿಕುಮಾರ್ ಒತ್ತಾಯ

ಚಾಮರಾಜನಗರ: ಸಂವಿಧಾನ ವಿರೋಧಿ ಹೇಳಿಕೆ ನೀಡುತ್ತಿರುವ ಹಾಗೂ ಸಂವಿಧಾನವನ್ನು ಪದೇ ಪದೇ ಬದಲಾಯಿಸುತ್ತೇವೆ ಎಂದು ಹೇಳುವ ಮೂಲಕ ದೇಶದ ಜನರನ್ನು ಆತಂಕ್ಕೀಡು ಮಾಡುತ್ತಿರುವ ಸಂಸದ ಅನಂತಕುಮಾರ್ ಹೆಗಡೆ ಅವರನ್ನು ಕೂಡಲೇ ರಾಷ್ಟ್ರಪತಿಗಳು ಹಾಗೂ ಕೇಂದ್ರ ಸರ್ಕಾರ ದೇಶದಲ್ಲಿಯೇ ಗಡಿಪಾರು ಮಾಡಬೇಕೆಂದು ಕಾಂಗ್ರೆಸ್ ಮುಖಂಡ ಮಾದಾಪುರ ರವಿಕುಮಾರ್ ಒತ್ತಾಯಿಸಿದ್ದಾರೆ.

ದೇಶದ ಸಂಸತ್ ಸದಸ್ಯನಾಗಲು ಯೋಗ್ಯತೆ ಇಲ್ಲದ ಅನಂತ್‍ಕುಮಾರ್ ಹೆಗಡೆ ನಮ್ಮ ದೇಶದ ಸರ್ವಭೌಮತೆ, ಏಕತೆಯನ್ನು ಸಾರುವ ಹಾಗೂ ಅಭಿವೃದ್ದಿಗೆ ಭದ್ರ ಬುನಾದಿಯನ್ನು ಹಾಕಿಕೊಂಡಿರುವ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ರಚನೆ ಮಾಡಿರುವ ಉತ್ಕøಷ್ಟ ಸಂವಿಧಾನವನ್ನು ಬದಲಾಯಿಸುತ್ತೇವೆ ಎಂದು ಹೇಳುತ್ತಿದ್ದಾರೆ. ಈ ಬಗ್ಗೆ ಸ್ವಪಕ್ಷದ ಪ್ರಧಾನಿಗಳಾಗಲಿ, ರಾಷ್ಟ್ರೀಯ ಅಧ್ಯಕ್ಷರಾಗಲಿ, ವಿವಿಧ ರಾಜ್ಯಗಳ ಬಿಜೆಪಿ ವರಿಷ್ಠರು ಯಾವುದೇ ಪ್ರತಿಕ್ರಿಯೆ ನೀಡದೆ ಮೌನವಹಿಸಿರುವುದು ಸಹ ಅನಂತ್‍ಕುಮಾರ್ ಹೆಗಡೆ ಹೇಳಿಕೆಯನ್ನು ಬೆಂಬಲಿಸಿದಂತಾಗುತ್ತಿದೆ. ಹೀಗಾಗಿ ಈ ಕೂಡಲೇ ವಿಶ್ವದಲ್ಲಿಯೇ ಶೇಷ್ಟವಾದ ಸಂವಿಧಾನ ವಿರುದ್ದ ಮಾತನಾಡುವುದು ಅಕ್ಷಮ್ಯ ಅಪರಾಧವಾಗಿದೆ ಎಂದು ತಿಳಿಸಿದ್ದಾರೆ.

ಹುಚ್ಚನಂತೆ ವರ್ತಿಸುತ್ತಿರುವ ಹೆಗಡೆಯನ್ನು ಕೂಡಲೇ ಚಿಕಿತ್ಸೆಗಾಗಿ ಅಸ್ಪತ್ರೆಗೆ ದಾಖಲು ಮಾಡಬೇಕು. ಇಂಥ ನೀಚ ಹಾಗೂ ಮತೀಹೀನರನ್ನು ಸಾರ್ವಜನಿಕರ ಸಭೆ, ಸಮಾರಂಭಗಳಿಂದ ದೂರುವಿಡುವುದು ಒಳಿತು. ಈ ಕೂಡಲೇ ಅನಂತ್‍ಕುಮಾರ್ ಹೆಗಡೆ ದೇಶದ ಜನರ ಬಹಿರಂಗ ಕ್ಷಮೆ ಕೇಳಬೇಕು. ಅಲ್ಲದೇ ಕೋಮು ಗಲಭೆಯನ್ನು ಸೃಷ್ಟಿಸುವಂತಹ ಹೇಳಿಕೆ ನೀಡುವುದು. ಸಂವಿಧಾನ ಬದ್ದವಾಗಿರುವ ಮುಖ್ಯಮಂತ್ರಿಗಳಿಗೆ ಗೌರವ ನೀಡದೆ. ಏಕವಚನದಲ್ಲಿ ಮಾತನಾಡುವ ಮೂಲಕ ಅಸಂಸ್ಕøತಿಯನ್ನು ತೋರ್ಪಡಿಸಿದ್ದಾರೆ. ಇದೇ ರೀತಿ ವರ್ತನೆ ಮುಂದುವರಿದರೆ ದೇಶಾದ್ಯಂತ ಅನಂತ್‍ಕುಮಾರ್ ಹೆಗಡೆ ವಿರುದ್ದ ಉಗ್ರ ಹೋರಾಟ ರೂಪಿಸಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಈ ಚುನಾವಣೆಯಲ್ಲಿ ಬಿಜೆಪಿಗೆ 400 ಪ್ಲಸ್ ಸೀಟು ಕೊಟ್ಟರೆ ಸಂವಿಧಾನ ಬದಲಾಯಿಸಲು ಅನುಕೂಲವಾಗುತ್ತದೆ ಎಂಬ ಹೇಳಿಕೆಯನ್ನು ಅನಂತ್‍ಕುಮಾರ್ ಹೆಗಡೆ ನೀಡಿರುವುದು ದೇಶದ ಜನರು ಹಾಗೂ ಸಂವಿಧಾನ ಪ್ರೇಮಿಗಳನ್ನು ಆತಂಕಕ್ಕೆ ದೂಡಿದೆ. ಇಂಥ ಅವಿವೇಕಿತನದ ಹೇಳಿಕೆಯನ್ನು ಪದೇ ಪದೇ ನೀಡುವ ಮೂಲಕ ದೇಶದ ಜನರ ಮನಸ್ಸು ಘಾಸಿ ಮಾಡುತ್ತಿರುವ ಸಂಸದನನ್ನು ಗಡಿಪಾರು ಮಾಡಬೇಕು. ಇಲ್ಲದಿದ್ದರೆ ದೇಶದ ಜನರೇ ಬಿಜೆಪಿಯನ್ನು ಗಡಿಪಾರು ಮಾಡಲಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಮಾದಾಪುರ ರವಿಕುಮಾರ್ ಪತ್ರಿಕಾ ಹೇಳಿಕೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.

Leave a Reply

Your email address will not be published. Required fields are marked *