ಕಾಂಗ್ರೆಸ್ ಪಕ್ಷದಿಂದ ಮಹಿಳಾ ಮತದಾರರಿಗೆ ಅಮಿಷ: ಬಿಜೆಪಿ ದೂರು

ಚಾಮರಾಜನಗರ: ಚುನಾವಣೆಯಲ್ಲಿ ಈಡೇರಿಸಲಾಗದ ಗ್ಯಾರಂಟಿ ಕಾರ್ಡುಗಳನ್ನು ಕಾಂಗ್ರೆಸ್ ಪಕ್ಷವು ಮಹಿಳಾ ಮತದಾರರರಿಗೆ ಹಂಚಿಕೆ ಮಾಡುವ ಮೂಲಕ ಸ್ಪಷ್ಟವಾಗಿ ಚುನಾವಣಾ ನೀತಿ ಸಂಹಿತೆಯನ್ನು ಸ್ಪಷ್ಟವಾಗಿ ಉಲ್ಲಂಘನೆ ಮಾಡಿದೆ ಎಂದು ಬಿಜೆಪಿ ಚುನಾವಣಾಧಿಕಾರಿಗಳಿಗೆ ಆಧಾರ ಸಮೇತ ದೂರು ನೀಡಿದೆ.

ನಗರದ ಜಿಲ್ಲಾಧಿಕಾರಿಗಳ ಕಚೇರಿಗೆ ಲೋಕಸಭಾ ಕ್ಷೇತ್ರದ ಚುನಾವಣೆ ಏಜೆಂಟ್ ಆಗಿರುವ ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಜಿ. ನಾರಾಯಣ ಪ್ರಸಾದ್, ಜಿಲ್ಲಾ ವಕ್ತಾರ ಕಾಡಹಳ್ಳಿ ಶಿವರುದ್ರಸ್ವಾಮಿ, ವಕೀಲ ಮಹೇಶ್, ಸಹ ವಕ್ತಾರ ಎನ್. ಮಂಜುನಾಥ್, ಸಹ ಪ್ರಮುಖ್ ಅಶ್ವಿನ್ ಅವರು ಜಿಲ್ಲಾ ಚುನಾವಣಾಧಿಕಾರಿಗಳಿಗೆ ದೂರು ನೀಡಿದ, ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಮಹಿಳೆಯರಿಗೆ ಗ್ಯಾರಂಟಿ ಕಾರ್ಡುಗಳನ್ನು ನೀಡಿ, ಅವರ ಆಧಾರ್ ಕಾರ್ಡುಗಳನ್ನು ಪಡೆದು, ಮೊಬೈಲ್ ನಂಬರ್ ನಮೂದಿಸಿ ಕೌಂಟರ್ ಪೈಲ್ ಅನ್ನು ತಾವು ಇಟ್ಟು ಕೊಳ್ಲುತ್ತಿದ್ದಾರೆ.

ಜೊತೆಗೆ ಕಾಂಗ್ರೆಸ್‍ಗೆ ಓಟು ಹಾಕಿ ಎಂದು ಅಮಿಷ ನೀಡಲಾಗುತಿದೆ. ಒಂದು ಲಕ್ಷದ ಜೊತೆಗೆ ಇಲ್ಲಿ ಇರುವ ಎಲ್ಲಾ ಗ್ಯಾರಂಟಿಗಳು ನಿಮ್ಮ ಮನೆಗೆ ಬರುತ್ತದೆ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ವಿಡಿಯೋ ಪೋಟೋ ಸಮೇತ ದೂರು ನೀಡಿದ್ಧಾರೆ.

ಈಗಾಗಲೇ ಅನೇಕ ಗ್ರಾಮಾಂತರ ಪ್ರದೇಶಗಳಲ್ಲಿ ಮಹಿಳೆಯರಿಗೆ ಈ ರೀತಿ ಆಸೆ, ಅಮಿಷ್ ತೋರಿಸಿ, ಕಾನೂನು ಬಾಹಿರವಾಗಿ ಗ್ಯಾರಂಟಿ ಕಾರ್ಡುಗಳನ್ನು ವಿತರಣೆ ಮಾಡುತ್ತಿದ್ದು, ಪ್ರತಿ ಬಡ ಕುಟುಂಬ ಮಹಿಳೆಗೆ ಒಂದು ಲಕ್ಷ ರೂ. ಹಾಗು ಬಡ ನಿರುದ್ಯೋಗಿಗಳಿಗೆ 1 ಲಕ್ಷ ರೂ. ಗ್ಯಾರಂಟಿ ಯನ್ನು ನಮ್ಮ ಪಕ್ಷÀ ನೀಡುತ್ತಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರಾದ ಸೋಪಿಯಾ ಮತ್ತು ಸೈಯದ್ ತೌಸಿಪ್ ಇತರರು ಗ್ಯಾರಂಟಿ ಕಾರ್ಡುಗಳನ್ನು ಹಂಚಿಕೆ ಮಾಡುತ್ತಿದ್ದಾರೆ.

ಇದರಿಂದ ಆಧುನಿಕ ತಂತ್ರಜ್ಞಾನ ಬಳಿಸಿ ಗ್ಯಾರಂಟಿ ಕಾರ್ಡು ನೀಡಿ, ಮತದಾರರಿಗೆ ಅಮಿಷ ಒಡ್ಡಲಾಗುತ್ತಿದೆ. ಇದರಿಂದ ನಿಷ್ಪಕ್ಷಪಾತ ಚುನಾವಣೆ ನಡೆÀಯುದು ಸಾಧ್ಯವಿಲ್ಲ. ಈ ಗ್ಯಾರಂಟಿ ಕಾರ್ಡುಗಳನ್ನು ಹಂಚಿಕೆ ಮಾಡುವ ಮೂಲಕ ಮತದಾರರನ್ನು ದಾರಿ ತಪ್ಪಿಸುವ ಹುನ್ನಾರ ವಾಗಿದೆ. ತಾವು ಇದನ್ನು ಪರಿಗಣಿಸಿ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸುನೀಲ್ ಬೋಸ್ ವಿರುದ್ದ ಸೂಕ್ತ ಕ್ರಮ ಜರುಗಿಸಬೇಕು. ಗ್ಯಾರಂಟಿ ಕಾರ್ಡುಗಳ ವಿತರಣೆಯನ್ನು ತಡೆದು ನಿಷ್ಪಕ್ಷಪಾತ ಚುನಾವಣೆ ನಡೆಯಲು ಅನುವು ಮಾಡಿಕೊಡಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *