ಸಂವಿಧಾನ ಜಾಗೃತಿ ಸ್ತಬ್ದ ಚಿತ್ರ : ಮುಖ್ಯಮಂತ್ರಿಯವರಿಂದ ಬಹುಮಾನ ಸ್ವೀಕರಿಸಿದ ಜಿಲ್ಲಾಧಿಕಾರಿಗಳು

ಚಾಮರಾಜನಗರ: ಅತ್ತ್ಯುತ್ತಮ ಸಂವಿಧಾನ ಜಾಗೃತಿ ಸ್ತಬ್ದ ಚಿತ್ರಕ್ಕಾಗಿ ಜಿಲ್ಲಾಧಿಕಾರಿ ಶಿಲ್ಪ ನಾಗ್ ಅವರು ಮುಖ್ಯಮಂತ್ರಿಯವರಾದ ಸಿದ್ದರಾಮಯ್ಯ ಹಾಗೂ ಸಮಾಜ ಕಲ್ಯಾಣ ಸಚಿವರಾದ ಡಾ. ಎಚ್.ಸಿ. ಮಹದೇವಪ್ಪ ಅವರಿಂದ ಬಹುಮಾನ ಸ್ವೀಕರಿಸಿದರು.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಂದು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಸಂವಿಧಾನ ಮತ್ತು ರಾಷ್ಟ್ರೀಯ ಐಕ್ಯತಾ ಸಮಾವೇಶ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಯವರಾದ ಸಿದ್ದರಾಮಯ್ಯ ಹಾಗೂ ಸಮಾಜ ಕಲ್ಯಾಣ ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ ಅವರು ಬಹುಮಾನವಾಗಿ ಜಿಲ್ಲಾಧಿಕಾರಿಗಳಿಗೆ ಒಂದು ಲಕ್ಷ ರೂ. ಚೆಕ್ ಮತ್ತು ಸ್ಮರಣಿಕೆ ವಿತರಿಸಿದರು.
ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆನಂದ್ ಪ್ರಕಾಶ್ ಮೀನಾ ಅವರೊಂದಿಗೆ ಬಹುಮಾನ ಸ್ವೀಕರಿಸಿದರು.

ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಮಲ್ಲಿಕಾರ್ಜುನ್ ಅವರು ಸಹ ಈ ಸಂದರ್ಭದಲ್ಲಿ ಇದ್ದರು.
ಸಮಾವೇಶದ ವೇದಿಕೆಯಲ್ಲಿ ಗಣ್ಯರ ಮುಂದೆ ಚಾಮರಾಜನಗರದ ಕೇಂದ್ರೀಯ ವಿದ್ಯಾಲಯದ ಎರಡನೇ ತರಗತಿ ವಿದ್ಯಾರ್ಥಿ ತೇಜಸ್ ಚಕ್ರವರ್ತಿ ಸಂವಿಧಾನದ ಅಧ್ಯಾಯಗಳನ್ನು ನಿರರ್ಗಳವಾಗಿ ಹೇಳಿ ಮೆಚ್ಚುಗೆ ಪಡೆದರು. ತೇಜಸ್ ಚಕ್ರವರ್ತಿಗೆ ಸಭೆಯಲ್ಲಿದ್ದ ಗಣ್ಯರು, ಸಭಿಕರು ಎದ್ದು ನಿಂತು ಸುಧೀರ್ಘವಾಗಿ ಕರತಾಡನದ ಮೂಲಕ ಪ್ರಶಂಸಿದರು.

ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಕುಳಿತಿರುವ ಪ್ರತಿಮೆ, ಸಂವಿಧಾನ ಪೀಠಿಕೆಯನ್ನು ಪುಸ್ತಕದ ಮಾದರಿಯಲ್ಲಿ ಪ್ರದರ್ಶನ ಸೇರಿದಂತೆ ಮಹತ್ತರ ಸಂದೇಶ, ಕೊಡುಗೆಗಳು, ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುμÁ್ಠನ ಇನ್ನಿತರ ವೈಶಿಷ್ಟ್ಯಗಳನ್ನು ಒಳಗೊಂಡಂತೆ ಚಾಮರಾಜನಗರ ಜಿಲ್ಲೆಯು ಸಂವಿಧಾನ ಜಾಗೃತಿ ಸ್ತಬ್ಧ ಚಿತ್ರವನ್ನು ಆಕರ್ಷಕವಾಗಿ ವಿನ್ಯಾಸಗೊಳಿಸಿ ರೂಪಿಸಿತ್ತು.

Leave a Reply

Your email address will not be published. Required fields are marked *