- ನೂತನ ಶ್ರೀಭಗೀರಥ ಸಹಕಾರ ಸಂಘ ಉದ್ಘಾಟನೆ
ಚಾಮರಾಜನಗರ : ಆರ್ಥಿಕ ಶಿಸ್ತುಬದ್ಧತೆ ಇದ್ದರೆ ಮಾತ್ರ ಸಹಕಾರ ಸಂಘಗಳು ಬೆಳೆಯುತ್ತವೆ ಎಂದು ಜಿಎಸ್‌ಟಿ ಅಪೀಲು ನ್ಯಾಯಾಧೀಕರಣದ ತಾಂತ್ರಿಕ ಸದಸ್ಯ ಡಿ.ಜಗನ್ನಾಥ್ ಸಾಗರ್ ಹೇಳಿದರು.

ನಗರದ ಉಪ್ಪಾರ ಬಡಾವಣೆಯ ಶ್ರೀಮಂಟೇಸ್ವಾಮಿ ದೇವಸ್ಥಾನದ ಮುಂಭಾಗದ ಶ್ರೀ ಉಪ್ಪಾರ ಸಂಘದ ಸಹಯೋಗದಲ್ಲಿ ರಚಿಸಿರುವ ಶ್ರೀಭಗೀರಥ ಸಹಕಾರ ಸಂಘದ ಉದ್ಘಾಟನಾ ಸಮಾರಂಭವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಹಣಹೂಡಿಕೆಯ ಜೊತೆಗೆ ಆರ್ಥಿಕವಾಗಿ ಶಿಸ್ತು ಬದ್ಧತೆ ಇದ್ದರೆ ಮಾತ್ರ ಸಹಕಾರ ಸಂಘಗಳು ನಡೆಯುತ್ತವೆ. ಸಂಘಗಳು ಹುಟ್ಟುಕೊಂಡು ತಕ್ಷಣವೇ ನಶಿಸಿ ಹೋಗುತ್ತವೆ ಅಂದರೆ ಯಾವುದೇ ಸಹಕಾರ ಮಾಡಿ ನಮ್ಮದೆಆದಂತಹ ಒಂದು ಬೈಲಾಗಳನ್ನು ಮಾಡಿಕೊಂಡಿರುತ್ತಿವೆ. ಅದರ ಪ್ರಕಾರ ಕೆಲಸ ಮಾಡಬೇಕು. ಎಲ್ಲರ ಸದಸ್ಯರ ಆರ್ಥಿಕ ಮಟ್ಟ ಸುಧಾರಿಸಬೇಕು. ಸಹಕಾರ ಮನೋಭಾವನೆಯಿಂದ ಕೆಲಸ ಮಾಡುವುದು ಇವೆಲ್ಲವೂ ಅತ್ಯಂತ ಉತ್ತಮವಾಗಿವೆ ಎಂದರು.
ಷೇರುಗಳನ್ನು. ಮಾರಾಟ ಮಾಡಬೇಕು. ಷೇರುಗಳನ್ನು ವಿತರಣೆ ಮಾಡಬೇಕು. ಜನರಿಂದ ಠೇವಣಿಗಳನ್ನು ಶೇಖರಣೆ ಮಾಡಬೇಕು. ಅಪೇಕ್ಸ್… ಬ್ಯಾಂಕ್‌ನಿಂದ ಸಾಲದ ನೆರವು ಪಡೆಯಬಹುದು.ಜಿಲ್ಲಾ ಕೇಂದ್ರ ಬ್ಯಾಂಕ್‌ಗಳಿಂದ ಸಾಲ ಪಡೆಯಬಹುದು. ಎಷ್ಟೋ ಸಣ್ಣ ಸಣ್ಣ ಸಂಸ್ಥೆಗಳು. ಷೇರು, ಠೇವಣೆ ಅಲ್ಲದೆ ರಾಜ್ಯ ಅಪೇಕ್ಸ್ ಬ್ಯಾಂಕ್‌ಗಳಿಂದ ಹಣ ಪಡೆದು ಅವುಗಳು ಬೃಹತ್ ಮಟ್ಟದಲ್ಲಿ ಬೆಳೆಯುತ್ತಿವೆ. ಸಹಕಾರ ಸಂಘ ಎಂದರೆ ಒಂದು ಆರ್ಥಿಕ ಚಟುವಟಿಕೆಯನ್ನು ಹೊಂದಿರುವ ಕ್ಷೇತ್ರವಾಗಿದೆ. ಸಾಮಾನ್ಯ ಸಂಘಕ್ಕೂ ಸಹಕಾರ ಸಂಘಕ್ಕೂ ಬಹಳ ವ್ಯತ್ಯಾಸವಿದೆ. ಸಾಮಾನ್ಯ ಸಂಘವನ್ನು ಏಳು, ಎಂಟು ಜನ ಸೇರಿಕೊಂಡು ಸ್ಥಾಪನೆ ಮಾಡಿಕೊಂಡು ಬೇಕಾದ ಚಟುವಟಿಕೆ ಮಾಡಬಹುದು ಆದರೆ ಸಹಕಾರ ಸಂಘ ಎಂದರೆ ಬಹಳ ದೊಡ್ಡ ಜವಾಬ್ದಾರಿ ಇರುತ್ತದೆ. ಹಣಕಾಸು ನಿರ್ವಹಣೆ ಇರುತ್ತದೆ. ಇದಕ್ಕೆ ಹಣಕಾಸು ಮುಖ್ಯವಾಗಿದೆ. ಸದಸ್ಯರ ಆರ್ಥಿಕ ಹಿತಶಕ್ತಿ ಕಾಪಾಡುವ ಚಟುವಟಿಕೆ ನಡೆಯಬೇಕು. ಆರ್ಥಿಕವಾದ ಶಿಸ್ತು ಬದ್ಧತೆ ಇದ್ದರೆ ಮಾತ್ರ ಸಂಘ ಬೆಳೆಯಲು ಸಾಧ್ಯ ಎಂದರು. ಶ್ರೀಭಗೀರಥ ಸಹಕಾರ ಸಂಘವು ಹೆಚ್ಚು ಸದಸ್ಯತ್ವ ಹೊಂದಿ ದೊಡ್ಡಮಟ್ಟದಲ್ಲಿ ಬೆಳೆಯಲಿ ಎಂದು ಆಶಿಸಿದರು.
ಸಹಕಾರ ಸಂಘದಿಂದಲ್ಲೇ ದೊಡ್ಡದೊಡ್ಡ ರಾಜಕಾರಣಿ: ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕರ್ನಾಟಕ ರಾಜ್ಯ ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಭರಮಣ್ಣ ಉಪ್ಪಾರ್ ಮಾತನಾಡಿ, ಎಲ್ಲರೂ ಸಹಕಾರ ಸಂಘದಿಂದ ರಾಜಕಾರಣ ಆರಂಭಿಸುತ್ತಾರೆ. ಈ ಭಾಗದಲ್ಲಿ ಸಹಕಾರ ಮಹತ್ವ ಗೊತ್ತಿಲ್ಲ. ನಮ್ಮ ಭಾಗದಲ್ಲಿ ಒಂದು ತಾಲೂಕಿನಲ್ಲೇ ಸಾವಿರ ಸಹಕಾರ ಸಂಘಗಳಿವೆ. ಯಾವುದೋ ದೊಡ್ಡ ರಾಜಕಾರಣ ಕುಟುಂಬ ಇದೆ ಅಂದರೆ ಅದು ಸಹಕಾರ ಸಂಘದಿಂದಲ್ಲೇ ಸತೀಶ್ ಜಾರಕಿಹೊಳಿ, ಕತ್ತಿ… ಸೇರಿದಂತೆ ದೊಡ್ಡ ದೊಡ್ಡ ರಾಜಕಾರಣಿಗಳು ಸಹಕಾರ ಸಂಘ ಮಾಡಿ ಅದರಿಂದಲ್ಲೇ… ದೊಡ್ಡ ಮಟ್ಟದಲ್ಲಿ ರಾಜಕಾರಣಿಯಾಗಿ ಬೆಳೆದಿದ್ದಾರೆ ಎಂದರು.
ಶ್ರೀಭಗೀರಥ ಸಹಕಾರ ಸಂಘವನ್ನು ಸ್ಥಾಪನೆ ಮಾಡಿ ಬಿಡುವುದು ಅಲ್ಲ ಇದು ಹೆಮ್ಮರವಾಗಿ ಬೆಳೆಯಬೇಕು. ಈ ಸಹಕಾರ ಸಂಘದಿಂದ ನೀವು ದೊಡ್ಡದೊಡ್ಡ ರಾಜಕಾರಣಿಯಾಗಬೇಕು. ಎಂದರು.
ಕರ್ನಾಟಕ ರಾಜ್ಯ ಉಪ್ಪಾರ ಅಭಿವೃದ್ಧಿ ನಿಗಮದಲ್ಲಿ ಸಮುದಾದ ಮಕ್ಕಳ ಶೈಕ್ಷಣಿಕ ಸಾಲಸೌಲಭ್ಯಗಳಿವೆ. ಉನ್ನತ ಶಿಕ್ಷಣ ವ್ಯಾಸಂಗಕ್ಕೆ ಸಾಲಸೌಭ್ಯ ಸಿಗುತ್ತದೆ. ವಿದೇಶ ಶಿಕ್ಷಣಕ್ಕೂ ಬಡ್ಡಿ ರಹಿತ ಸಾಲಸೌಲಭ್ಯ ದೊರೆಯುತ್ತದೆ. ಫಾರಿನ್‌ನಲ್ಲಿ ವಿದ್ಯಾಭ್ಯಾಸಕ್ಕೆ 5 ಕೋಟಿ ಅನುದಾನ ಇದೆ. ಒಂದು బందిల్ల. ನಾನು ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಸಮುದಾಯದವರಲ್ಲಿ ಹೇಳಿದ ಮೇಲೆ 12 ಅರ್ಜಿ ಬಂದಿದೆ. ಅದರಲ್ಲಿ 11 ವಿದ್ಯಾರ್ಥಿಗಳಿಗೆ ಸಾಲ ಕೊಡಲು ತೀರ್ಮಾನ ಮಾಡಿದ್ದೇವೆ ಎಂದರು.
ಸಂಘದ ಅಧ್ಯಕ್ಷ ರಾಚಶೆಟ್ಟಿ, ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಕೆಡಿಸಿ ಸದಸ್ಯ ಶ್ರೀನಿವಾಸ್, ನಿವೃತ್ತ ಪ್ರಾಂಶುಪಾಲ ಸೋಮಣ್ಣ, ಲೆಕ್ಕಪತ್ರ ಇಲಾಖೆ ಉಪನಿರ್ದೇಶಕ ಮಹೇಂದ್ರ, ಅರಣ್ಯ ಅಧಿಕಾರಿ ಮಹಾಲಕ್ಷ್ಮಿ, ಚೆಸ್ಕಾಂ ಲೆಕ್ಕಾಧಿಕಾರಿ ಎಂ.ಮಹೇಶ್, ಸಹಕಾರ ಇಲಾಖೆ ಪ್ರಥಮ ದರ್ಜೆ ಸಹಾಯಕ ಜನಾರ್ಧನ್, ಜಿಲ್ಲಾ ಉಪ್ಪಾರ ಯುವಕರ ಸಂಘದ ಅಧ್ಯಕ್ಷ ಜಯಕುಮಾರ್, ಆದಿಶಕ್ತಿ ಸೌಂಡ್ಸ್, ಶಾಮಿಯಾನ ಮಾಲೀಕ ಪ್ರದೀಪ್ ಕುಮಾರ್, ಸಂಘದ ಉಪಾಧ್ಯಕ್ಷ ಜಿ.ಗಿರೀಶ್, ಮಾದಶೆಟ್ಟಿ, ಮಾದಯ್ಯ, ಪಿ.ಶಿವಕುಮಾರ್, ಸಿ.ಕೆ.ರಂಗರಾಮ್, ಸಿ.ಜಿ.ರಮೇಶ್, ಎಂ.ರಾಮ್ ಕುಮಾರ್, ಎನ್.ಸೋಮಶೇಖರ ಇತರರು ಹಾಜರಿದ್ದರು.