ದೇಶದ ಆರ್ಥಿಕ ವ್ಯವಸ್ಥೆಯ ವಿದ್ಯುತ್ ಮೇಲೆ ಅವಲಂಬಿತ : ಚೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರದೀಪ್

  • ಲೈನ್‌ ಮ್ಯಾನ್‌ಗಳು ಸುರಕ್ಷತೆಯಿಂದ ಕೆಲಸ ನಿರ್ವಹಿಸಬೇಕು.
  • ಕೆಇಬಿ ಕಚೇರಿಯಲ್ಲಿ ಲೈನ್‌ಮ್ಯಾನ್ ದಿವಸ ಆಚರಣೆ

ಚಾಮರಾಜನಗರ.: ದೇಶದ ಆರ್ಥಿಕ ವ್ಯವಸ್ಥೆಯೂ ವಿದ್ಯುತ್ ಮೇಲೆ ಅವಲಂಬಿತವಾಗಿದೆ ಎಂದು ಚೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರದೀಪ್ ಹೇಳಿದರು.
ನಗರದ ಕೆಬಿಇ ಕಚೇರಿಯ ಆವರಣದಲ್ಲಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ನಿಮಯತ ಚಾಮರಾಜನಗರ ವಿಭಾಗದ ವತಿಯಿಂದ ನಡೆದ ಲೈನ್‌ ಮ್ಯಾನ್ ದಿವಸ ಕಾರ್ಯಕ್ರಮದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಾ.4 ಲೈನ್‌ಮ್ಯಾನ್‌ಗಳಿಗೆ ಮುಡುಪಾಗಿರುವ ದಿನವಾಗಿದೆ. ನಮ್ಮವರು ಇವತ್ತು ಕೊಡ ಶ್ರಮವಹಿಸಿ ಕೆಲಸ ಮಾಡುತ್ತಾರೆ ರಜೆ ಇಲ್ಲ. ನಮ್ಮ ಮಾರ್ಗದಾಳುಗಳು ಶ್ರಮಜೀವಿಗಳು. ಅವರು ಇಲ್ಲದಿದ್ದರೆ ನಮ್ಮ ಇಲಾಖೆ ಸ್ಥಬ್ಬ. ಆಗುತ್ತದೆ. 24*7 ವಿದ್ಯುತ್ ಸರಬರಾಜು ಮಾಡುತ್ತಿರಾ. ಗೃಹ ಬಳಕೆಯಿಂದ ಹಿಡಿದು ಎಲ್ಲದಕ್ಕೂ ವಿದ್ಯುತ್ ಮೇಲೆ ಅವಲಂಬಿತರಾಗಿದ್ದಾರೆ. ನೀವು ಎಲ್ಲಿಯ ತನಕ ಶ್ರಮವಹಿಸಿ ಕೆಲಸ ಮಾಡುತ್ತೀರಾ ಅಲ್ಲಿಯ ತನಕ ದೇಶದ ಆರ್ಥಿಕ ವ್ಯವಸ್ಥೆಯೂ ವಿದ್ಯುತ್ ಮೇಲೆ ಅವಲಂಬಿತವಾಗಿದೆ ಎಂದರು.
ನಮ್ಮ ಇಲಾಖೆಯಲ್ಲಿ ಮಾರ್ಗದಾಳುಗಳನ್ನು ಗುರುತು ಮಾಡಿ ಲೈನ್‌ಮ್ಯಾನ್ ದಿನ ಆಚರಣೆ ಮಾಡುತಿರುವುದು ನಮಗೆಲ್ಲ ಸಂತಸದ ವಿಚಾರವಾಗಿದೆ. ಎಲ್ಲರೂ ಕೂಡ ಸುರಕ್ಷತೆ ನಿಮ್ಮ ಕೆಲಸ ಮಾಡಬೇಕು. ನೀವು ಹೇಗೆ ಇನ್ನೊಂದು ಮನೆಗೆ ಬೆಳಕು. ನೀಡುತ್ತಿರೋ. ನಿಮ್ಮ ಮನೆಗೆ ನೀವೇ ದಾರಿದೀಪ, ನೀವೇ ಬೆಳಕು, ನೀವೇ ಆಧಾರಸ್ತಂಭ ಅನ್ನುವುದನ್ನು ಮರೆಯಬೇಡಿ. ಆಗಾಗಿ ಸುರಕ್ಷತೆಯಿಂದ ಕೆಲಸ ಮಾಡಬೇಕು ನಿಗಮಕ್ಕೆ ನೀವೇ ಆಧಾರಸ್ತಂಭ, ಯಾವುದೇ ಅಧಿಕಾರಿ, ಉನ್ನತ ಅಧಿಕಾರಿಗಳು ಇರಬಹುದು. ನಮ್ಮ ನಿಗಮ ನಿಂತಿರುವುದು ನಿಮ್ಮ ಮೇಲೆ,… ನಿಮ್ಮಗಳ ಶ್ರಮದ ಮೇಲೆ. ಲೈನ್‌ಮ್ಯಾನ್ ದಿನಾಚರಣೆ ನಿಮಗೆ ಶುಭವಾಗಲಿ ಎಂದು ಆಶಿಸಿದರು.
ಆರೋಗ್ಯ ಮತ್ತು ಇಲಾಖೆಯ ಕರ್ತವ್ಯ ನಿರ್ವಹಣೆ ಸುರಕ್ಷತೆ ಕುರಿತು ಕಾರ್ಯಾಗಾರ ನಡೆಯಿತು. ಕಾರ್ಯಕ್ರಮದಲ್ಲಿ ಸಹಾಯಕ  ಕಾರ್ಯಪಾಲಕ ಇಂ
ಜಿನಿಯರ್‌ಗಳಾದ ಪ್ರಶಾಂತ್, ಧ್ರುಪದ್, ಮಹೇಶ್, ಸಂಧ್ಯಾ,ನೌಕರರ ಸಂಘದ  ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್,  ನೌಕರರ ಸಂಘದ ಅಧ್ಯಕ್ಷ ಮುರುಳೀಕೃಷ್ಣಸ್ವಾಮಿ,  ಕಾರ್ಯದರ್ಶಿ ಸಿದ್ದರಾಜಪ್ಪ,
ಎಸ್ ಸಿ ಎಸ್ ಟಿ ಕಲ್ಯಾಣ ಸಂಸ್ಥೆ  ಕೇಂದ್ರ ಸಮಿತಿ  ಸದಸ್ಯ ಮಂಜುನಾಥ್, ಅಧ್ಯಕ್ಷ ಪ್ರಶಾಂತ್, ಕಾರ್ಯದರ್ಶಿ ಸೋಮೇಶ್ವರ,  ಎಲ್ಲ ಸಂಘ- ಸಂಸ್ಥೆಗಳ ಪದಾಧಿಕಾರಿಗಳು, ಶಾಖಾಧಿಕಾರಿಗಳು,ನೌಕರ ಬಾಂಧವರು ಭಾಗವಹಿಸಿದ್ದರು.
–+-+—
ಚಾಮರಾಜನಗರದ ಕೆಬಿಇ ಕಚೇರಿಯ ಆವರಣದಲ್ಲಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ನಿಮಯತ ಚಾಮರಾಜನಗರ ವಿಭಾಗದ ವತಿಯಿಂದ ನಡೆದ ಲೈನ್‌ ಮ್ಯಾನ್ ದಿವಸ ಕಾರ್ಯಕ್ರಮದಲ್ಲಿ ಚೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರದೀಪ್ ಮಾತನಾಡಿದರು.

Leave a Reply

Your email address will not be published. Required fields are marked *