ಮೈಸೂರು: ನಗರದ ಸೈಕಲ್ ಪ್ಯೂರ್ ಅಗರಬತ್ತಿ ಸಂಸ್ಥೆಯು ರಾಷ್ಟ್ರೀಯ ಚಾಲಕರ ದಿನದ ಪ್ರಯುಕ್ತ ಚಾಲಕರಿಗೆ “ವೈಬ್ ಪವರ್ ಬ್ಯಾಗ್” ಏರ್ ಫ್ರೆಶ್ ನರ್ ಗಳನ್ನು ವಿತರಿಸಿ ಚಾಲಕ ಸಮೂಹವನ್ನು ಗೌರವಿಸಿತು.
ವಿಅರ್ಎಲ್, ಓಲಾ ಕ್ಯಾಬ್ಸ್, ಇಂಡಿಯನ್ ಫೆಡರೇಶನ್ ಆಫ್ ಆ್ಯಪ್ -ಬೇಸ್ಟ್ ಟ್ರಾನ್ಸ್ ಪರ‍್ಟ್ ರ‍್ಕಸ್೯ , ರ‍್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮತ್ತು ದೆಹಲಿ ಸಾರಿಗೆ ಸಂಸ್ಥೆಗಳ ಸಹಬಾಗಿತ್ವದಲ್ಲಿ ಈ ಯೋಜನೆ ಹಮ್ಮಿಕೊಳ್ಳಲಾಗಿತ್ತು. ಈ ಮೂಲಕ ಎಂಥಾ ಕಠಿಣ ಪರಿಸ್ಥಿತಿಗಳಲ್ಲಿಯೂ ಜನರನ್ನು ಸುರಕ್ಷಿತವಾಗಿ ಗುರಿ ಮುಟ್ಟಿಸಲು ಶ್ರಮಿಸುವ ಚಾಲಕರಿಗೆ ಕೃತಜ್ಞತೆ ಸಲ್ಲಿಸಿತು.
ರಾಷ್ಟ್ರೀಯ ಚಾಲಕರ ದಿನದ ಅಂಗವಾಗಿ ಸೈಕಲ್ ಪ್ಯೂರ್ ಅಗರಬತ್ತಿ ಸಂಸ್ಥೆ 10ಲಕ್ಷ “ವೈಬ್ ಪವರ್ ಬ್ಯಾಗ್” ಏರ್ ಫ್ರೆಶ್ ನರ್ ಸ್ಯಾಚೆಟ್ ಗಳನ್ನು ವಿತರಿಸಿದೆ.
ಈ ಯೋಜನೆ ಕುರಿತು ಮಾತನಾಡಿದ ಸೈಕಲ್ ಪ್ಯೂರ್ ಅಗರಬತ್ತಿಯ ವ್ಯವಸ್ಥಾಪಕ ನರ‍್ದೇಶಕ ರ‍್ಜುನ್ ರಂಗಾ, “ಭಾರತ ದೇಶವು ಪ್ರತಿ ದಿನವೂ ಮುಂದಕ್ಕೆ ಸಾಗುವಂತೆ ಮಾಡುವಲ್ಲಿ ಚಾಲಕರ ಪಾತ್ರ ಮಹತ್ವದ್ದಾಗಿದೆ. ಸೈಕಲ್ ಪ್ಯೂರ್ ಅಗರಬತ್ತಿ ಸಂಸ್ಥೆಯು ಸುಗಂಧ ಉತ್ಪನ್ನಗಳ ಮೂಲಕ ಸದಾಕಾಲ ಮನಸ್ಸಿಗೆ ಶಾಂತಿ ಮತ್ತು ಭಾವನಾತ್ಮಕ ನೆಮ್ಮದಿ ನೀಡುವ ಕೆಲಸ ಮಾಡುತ್ತಿದೆ. ಇದೀಗ ರಸ್ತೆಯ ಮೇಲೆ ದರ‍್ಘಕಾಲ ಕಳೆಯುವ ಚಾಲಕರಿಗೆ ಆರಾಮದಾಯಕ, ತಾಜಾ ಅನುಭವ ಒದಗಿಸುವ ಮೂಲಕ ನಾವು ಅವರಿಗೆ ಕೃತಜ್ಞತೆ ಸಲ್ಲಿಸಿದ್ದೇವೆ” ಎಂದರು.