ಚಾಮರಾಜನಗರ: ರೆಹ್ಬರ್ ಅಸೋಸಿಯೇಶನ್ ಹಾಗೂ ಚಾಲೆಂಜರ್ಸ್ ಸ್ಕೇಟ್ ಅಕಾಡೆಮಿ ವತಿಯಿಂದ ನಗರದಲ್ಲಿ ಫೆ.23ರಂದು ಪ್ರಪ್ರಥಮ ಬಾರಿಗೆ ಚಾಮರಾಜನಗರದಲ್ಲಿ ಸೈಕ್ಲಿಂಗ್ ಮ್ಯಾರಥಾನ್ ಆಯೋಜಿಸಲಾಗಿದೆ.
ನಗರದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಿಂದ ಸೈಕ್ಲಿಂಗ್ ಮ್ಯಾರಥಾನ್‍ಗೆ ಚಾಲನೆ ದೊಯಲಿದ್ದು, ನಗರದ ಜೋಡಿರಸ್ತೆ ಮೂಲಕ ಹಾದು ಹೋಗಿ ಡಿವೈಎಸ್ಪಿ ಕಚೇರಿ ವೃತ್ತ, ಪಚ್ಚಪ್ಪ ವೃತ್ತ, ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಮೂಲಕ, ಡಾ.ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದ ಮೂಲಕ ಸಾಗಿ ಎಲ್‍ಐಸಿ ಕಚೇರಿ ಮುಂಭಾಗದಿಂದ ಡಿವಿಯೇಷನ್ ರಸ್ತೆಯವರೆಗೆ ಸುಮಾರು 5 ಕಿ.ಮೀ. ವರೆಗೆ ಸೈಕಲ್ ತುಳಿಯುವ ಮೂಲಕ ಕೀಡಾಪಟುಗಳು ಸ್ವಸ್ಥಾನಕ್ಕೆ ಹಿಂದಿರುಗಲಿದ್ದಾರೆ.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಹಮ್ಮದ್ ಅಸ್ಗರ್ (ಮುನ್ನ), ಜಿಲ್ಲಾ ನೆಟ್‍ಬಾಲ್ ಅಸೋಸಿಯೇಷನ್‍ನ ಗೌರವಾಧ್ಯಕ್ಷೆ ನರ್ಗೀಸ್ ಬಾನು, ಜಿಲ್ಲಾ ನೆಟ್‍ಬಾಲ್ ಅಸೋಸಿಯೇಷನ್‍ನ ಅಧ್ಯಕ್ಷರಾದ ವಿ.ಶ್ರೀನಿವಾಸ ಪ್ರಸಾದ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಈ ಮ್ಯಾರಥಾನ್‍ಗೆ ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಭಿಮಾನಿಗಳು ಆಗಮಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಅಸೋಸಿಯೇಷನ್‍ನ ಕಾರ್ಯದರ್ಶಿ ಫುರ್ಖಾನ್ ಪಾಷಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊ:7975854988 ನ್ನು ಸಂಪರ್ಕಿಸಿ.