ಹರದನಹಳ್ಳಿಯಲ್ಲಿ ಪಿಎಸಿಸಿ ಬ್ಯಾಂಕ್ ನೂತನ ಗೋದಾಮು, ಮಳಿಗೆ ಉದ್ಘಾಟನೆ
ಚಾಮರಾಜನಗರ: ಸಹಕಾರ ಸಂಘಗಳು ಬೆಳೆದಷ್ಟು ಗ್ರಾಮ ಹಾಗೂ ಸಂಘದ ಸದಸ್ಯರಿಗೆ ಹೆಚ್ಚಿನ ಪ್ರಯೋಜನೆವಾಗಲಿದೆ. ಈ ದಿಕ್ಕಿನಲ್ಲಿ ಹರದನಹಳ್ಳಿ ಪ್ರಾಥಮಿಕ ಕೃಷಿ ಪತ್ತಿ ಸಹಕಾರ ಮಾದರಿಯಾಗಿದೆ ಎಂದು ಚಾಮುಲ್ ಹಿರಿಯ ನಿರ್ದೇಶಕ ಎಚ್.ಎಸ್. ಬಸವರಾಜು ತಿಳಿಸಿದರು.
ತಾಲೂಕಿನ ಹರದನಹಳ್ಳಿ ಗ್ರಾಮದಲ್ಲಿ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಗೋದಾಮು ಮತ್ತು ಮಳಿಗೆಗಳ ಉದ್ಗಾಟಿಸಿ ಸಮಾರಂಭವನ್ನು ಜ್ಯೋತಿ ಬೆಳೆಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.

ವೆಂಕಟಯ್ಯನಛತ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರದಿಂದ ಬೇರ್ಪಡೆಯಾಗಿದೆ ಗ್ರಾ.ಪಂ.ಗೊಂದು ಸಹಕಾರ ಸಂಘದ ನಿಯಮದಡಿಯಲ್ಲಿ 9 ವರ್ಷಗಳ ಹಿಂದೆ ರಚನೆಯಾದ ಸಂಘವು ಕೋಟಿ ಕೋಟಿ ವ್ಯವಹಾರ ನಡೆಸುವ ಜೊತೆಗೆ ಸುಮಾರ್ 45 ಲಕ್ಷ ರೂ. ವೆಚ್ಚದಲ್ಲಿ ಸ್ವಂತ ಕಟ್ಟಡವನ್ನು ಹೊಂದಿರುವುದು ಹೆಮ್ಮೆ ಹರದನಹಳ್ಳಿ ವ್ಯಾಪ್ತಿಯಲ್ಲಿ ಬಹಳ ದೊಡ್ಡ ಮಟ್ಟದಲ್ಲಿ ಸಂಘ ಬೆಳೆಯುತ್ತಿರುವುದು ನಮ್ಮೆಲ್ಲರಿಗು ಸಂತಸವಾಗಿದೆ. ಇಲ್ಲಿನ ಅಡಳಿತ ಮಂಡಲಿ ಮತ್ತು ನೌಕರರ ವರ್ಗದವರ ಸೇವೆ ಅನನ್ಯವಾಗಿದೆ. ಎಲ್ಲ ಸದಸ್ಯರಿಗೂ ಸಂಘದ ಸವಲತ್ತುಗಳು ದೊರೆಯುವಂತಾಲಿ ಎಂದು ಶುಭ ಕೋರಿದರು.
ನಬಾರ್ಡ್‍ನ ಡಿಡಿಎಂ ಹಿತಾ ಜಿ. ಸುವರ್ಣ ಮಾತನಾಡಿ, ಹರದನಹಳ್ಳಿ ಸಹಕಾರ ಸಂಘವು ರೈತ ಸದಸ್ಯರಿಗೆ ವಿವಿಧ ಸೇವೆಯನ್ನು ನೀಡುವ ಜೊತೆಗೆ ಮಹಿಳಾ ಸ್ವಸಹಾಯ ಸಂಘಗಳಿಗೆ ಹೆಚ್ಚಿನ ಸಾಲ ಸೌಲಭ್ಯವನ್ನು ನೀಡುವ ಮೂಲಕ ಮಹಿಳೆಯರ ಸಬಲೀಕರಣಕ್ಕೆ ಹೆಚ್ಚಿನ ಒತ್ತು ನೀಡಿದೆ. ಇಂಥ ಸಂಘಗಳು ಗ್ರಾಮಕ್ಕೊಂದು ಸ್ಥಾಪನೆಗೊಂಡು ರೈತರು ಹಾಗೂ ರೈತರ ಮಹಿಳೆಯ ಅಭಿವೃದ್ದಿಯಲ್ಲಿ ತೊಡಗಿಸಿಕೊಂಡರೆ ಭಾರತ ದೇಶದ ಅರ್ಥಿಕತೆಯು ಹೆಚ್ಚಳವಾಗುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳು ಸಹ ಸಮರ್ಪಕವಾಗಿ ಸದಸ್ಯರಿಗೆ ದೊರೆಯಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಂಘದ ಅಧ್ಯಕ್ಷ ಆರ್. ವೆಂಕಟೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, 2014-15ರಲ್ಲಿ 300 ಸದಸ್ಯರಿಂದ ಆರಂಭವಾದ ಹರದನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಈಗ 2060 ಸದಸ್ಯರನ್ನು ಹೊಂದಿ ಬಹುದೊಡ್ಡ ಸಂಘವಾಗಿ ಬೆಳೆಯುತ್ತಿದೆ. 45 ಲಕ್ಷ ರೂ. ವೆಚ್ಚದಲ್ಲಿ ಸ್ವಂತ ಕಟ್ಟಡ ಹೊಂದಲು ಸಂಘದ ಸದಸ್ಯರು ಹಾಗೂ ನಿರ್ದೇಶಕರು ಮತ್ತು ನೌಕರರ ವರ್ಗದವರು ನೀಡಿದ ಸಹಕಾರ ಅತಿ ಮುಖ್ಯವಾಗಿದೆ.
ಈಗಾಗಲೇ ಸಂಘದಿಂದ ರೈತರಿಗೆ 2 ಕೋಟಿ ರೂ.ಗಳ ಸಾಲವನ್ನು ನೀಡಿ, ಅದೇ ರೈತರು ಮರು ಪಾವತಿ ಮಾಡುತ್ತಿದ್ದಾರೆ. ಸಂಘದ ಸದಸ್ಯರಿಗೆ ವಾಹನ ಸಾಲ, ಬೆಳೆ ಸಾಲ, ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲ, ಭಾಗ್ಯ ಲಕ್ಷ್ಮಿ ಠೇವಣಿ,ಗೃಹ ಬಳಕೆ ಸಾಲ ಸೇರಿದಂತೆ ಸಂಘದಿಂದ ಸದಸ್ಯರಿಗೆ ಎಲ್ಲಾ ರೀತಿಯ ಸಾಲ ಸೌಲಭ್ಯವನ್ನು ನೀಡಲಾಗುತ್ತಿದೆ. ಅಫೆಕ್ಸ್ ಬ್ಯಾಂಕ್ ಅಧ್ಯಕ್ಷರಾದ ಜಿ.ಡಿ. ಹರೀಶ್ ಅವರು ಸಂಘದ ಕಟ್ಟಡ ನಿರ್ಮಾಣಕ್ಕೆ 15 ಲಕ್ಷ ರೂ. ನೀಡಿದ್ದು, ನಬಾರ್ಡ್ ನಿಂದ ಸಾಲ ಸೇರಿದಂತೆ ಸಂಘದ ಲಾಭಂಶವನ್ನು ಕ್ರೊಡೀಕರಸಿಕೊಂಡು ಗೋದಾಮು ಮತ್ತು ಮಳಿಗೆಯನ್ನು ನಿರ್ಮಾಣ ಮಾಡಲಾಗಿದೆ. ಹೆಚ್ಚಿನ ಸಹಕಾರ ನೆರವು ನೀಡಿದ, ಹರೀಶ್‍ಗೌಡರನ್ನು ಗ್ರಾಮಸ್ಥರು ಹಾಗು ಸಂಘದ ಪರವಾಗಿ ಅಭಿನಂದನೆಯನ್ನು ಸಲ್ಲಿಸುತ್ತೇವೆ ಎಂದರು.
ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಚ್.ಕೆ. ಸಿದ್ದರಾಜು ಗಣ್ಯರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘ ಬೆಳೆದು ಬಂದ ಹಾದಿ ಹಾಗೂ ಸದಸ್ಯರು ಪಡೆದ ಸಾಲವನ್ನು ಸಕಾಲದಲ್ಲಿ ಮರು ಪಾವತಿಮಾಡಿದ ಪರಿಣಾಮ ಎಂಡಿಸಿಸಿ ಬ್ಯಾಂಕಿನಿಂದ ಹೆಚ್ಚಿನ ಸಾಲವನ್ನು ತರಲು ಸಾಧ್ಯವಾಯಿತು. ಸ್ವಂತ ಕಟ್ಟಡವನ್ನು ಹೊಂದಲು ಸಾಧ್ಯವಾಗಿದೆ. ಪಡಿತರ ವಿತರಣೆ, ಪಿಗ್ನಿ ಸಂಗ್ರಹಣೆ, ರೈತರಿಗೆ ಇತರೇ ಮಾದರಿ ಸಾಲವನ್ನು ನೀಡುವ ಮೂಲಕ ಸಂಘವು ಲಾಭದಲ್ಲಿದ್ದು, ಸ್ವಂತ ಕಟ್ಟಡ ಉದ್ಗಾಟನೆಯಾಗುತ್ತಿರುವುದು ಎಲ್ಲರಿಗು ಸಂತೋಷವನ್ನು ತಂದಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕರಾದ ಎಚ್.ಎನ್. ಸುಂದರರಾಜ್, ಅಮಚವಾಡಿ ನಾಗಸುಂದರ್, ಎಪಿಎಂಸಿ ಅಧ್ಯಕ್ಷ ಸೋಮೇಶ್, ತಾ.ಪಂ. ಮಾಜಿ ಸದಸ್ಯ ಎಚ್.ಎಂ. ಮಹದೇವಶೆಟ್ಟಿ, ಸಂಘದ ಉಪಾಧ್ಯಕ್ಷ ಎಂ. ಬಂಗಾರಶೆಟ್ಟಿ, ಗ್ರಾ.ಪಂ. ಅಧ್ಯಕ್ಷ ಎಂ. ಮಂಜುನಾಥ್, ಮಹಾತ್ಮಗಾಂಧಿ ಸೇವಾ ಟ್ರಸ್ಟ್ ಟಿ.ಜಿ. ಅಧಿಶೇಷನ್‍ಗೌಡ, ಜಿ.ಪಂ.ಮಾಜಿ ಅಧ್ಯಕ್ಷೆ ಕಾವೇರಿ ಶಿವಕುಮಾರ್, ಮಾಜಿ ಸದಸ್ಯ ರಮೇಶ್, ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಸುರೇಶ್ ನಾಗ್, ಸಂಘದ ನಿರ್ದೇಶಕರಾದ ಎಸ್. ಪುಟ್ಟರಾಜಶೆಟ್ಟಿ, ಮಹದೇವಶೆಟ್ಟಿ, ಗಿರಿಜಮ್ಮ, ಪಿ. ರವಿಕುಮಾರ್, ಎಂ. ರವಿಕುಮಾರ್, ಬಂಗಾರನಾಯಕ, ಶಫಿ ಅಹಮದ್, ರಾಜಣ್ಣ, ಸಾವಿತ್ರಿ ರವಿ, ಸುಮ ರಾಮಚಂದ್ರ, ನೌಕರರಾದ ಎಸ್. ಮಂಜು, ನವೀನ್‍ಕುಮಾರ್, ಸಿದ್ದರಾಜು, ಯೋಗನರಸಿಂಹಸ್ವಾಮಿ, ಕೃಷ್ಞರಾಜ್, ಗ್ರಾ.ಪಂ. ಸದಸ್ಯರು, ಸಂಘದ ಮಾಜಿ ಅಧ್ಯಕ್ಷರು, ಸದಸ್ಯರು, ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.