ಚಾಮರಾಜನಗರದಲ್ಲಿ ಶ್ರದ್ಧಾ ಭಕ್ತಿಯ ರಂಜಾನ್ ಆಚರಣೆ

  • ಸಾಮೂಹಿಕ ಪ್ರಾರ್ಥನೆ ಯಲ್ಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ ಭಾಗಿ,  ಧರ್ಮಗುರುಗಳಿಗೆ ಸನ್ಮಾನ.
  • ಮುಸ್ಲಿಂ ಭಾಂದವರಿಗೆ ರಂಜಾನ್ ಶುಭಾಶಯ ಕೋರಿದ ಶಾಸಕರು.

ಚಾಮರಾಜನಗರ:  ನಗರದಲ್ಲಿ ಮುಸ್ಲಿಂ ಭಾಂದವರು ರಂಜಾನ್ ಹಬ್ಬವನ್ನು ಸಡಗರ, ಸಂಭ್ರಮ ಹಾಗೂ ಶ್ರದ್ಧಾ ಭಕ್ತಿಯಿಂದ  ಶನಿವಾರ ಆಚರಿಸುವ ಮೂಲಕ ಕಳೆದ 30 ದಿನಗಳಿಂದ ನಡೆಸುತ್ತಿದ್ದ ಉಪವಾಸವನ್ನು ಕೊನೆಗೊಳಿಸಿದರು.


ನಗರದದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಬಳಿ‌ ಇರುವ ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರು  ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
30 ದಿನಗಳ ಉಪವಾಸದ ಬಳಿಕ ಚಂದ್ರನ ದರ್ಶನ ಪಡೆದ ಮುಸ್ಲಿಂ ಸಮುದಾಯದವರು, ಇಂದು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಹಬ್ಬದ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದಲೇ ಮಕ್ಕಳು, ಸ್ನೇಹಿತರು ಮತ್ತು ಸಂಬಂಧಿಗಳ ಜೊತೆ ಮಸೀದಿಗಳಿಗೆ ತೆರಳಿದ ಮುಸ್ಲಿಮರು ವಿಶೇಷ ಪ್ರಾರ್ಥನೆ ಸಲ್ಲಿಸಿ ಶ್ರದ್ದಾ, ಭಕ್ತಿಯಿಂದ ಪ್ರವಿತ್ರ ರಂಜಾನ್ ಆಚರಿಸಿದರು.


ಶಾಸಕರು ಭಾಗಿ: ಎಂಎಸ್ಐಎಲ್ ಅಧ್ಯಕ್ಷರು, ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಸಾಮೂಹಿಕ ಪ್ರಾರ್ಥನೆ ಭಾಗವಹಿಸಿ ಮುಸ್ಲಿಂ ಧರ್ಮಗುರುಗಳನ್ನು ಸನ್ಮಾನಿಸಿ ಮುಸ್ಲಿಂ ಭಾಂದವರಿಗೆ ಶುಭಾಶಯಗಳು ಕೋರಿದರು.   ಈದ್ಗಾ ಮೈದಾನದ ಮುಂದುವರಿದ ಕಾಮಗಾರಿಗೆ ಅನುದಾನ ನೀಡುವಂತೆ  ಧರ್ಮಗುರು ಶಾಸಕರಿಗೆ ಮನವಿ ಸಲ್ಲಿಸಿದರು.
ಬಿಗಿಪೊಲೀಸ್ ಬಂದೋಬಸ್ತ್ :   ರಂಜಾನ್ ಹಬ್ಬದ ಅಂಗವಾಗಿ ನಗರದಲ್ಲಿ  ಜಿಲ್ಲಾ ಪೋಲಿಸ್ ವತಿಯಿಂದ
 ಬಿಗಿ ಬಂದೋಬಸ್ತ್ ಅಯೋಜಿಸಲಾಗಿತ್ತು.

Leave a Reply

Your email address will not be published. Required fields are marked *