ಧನ್ವೀರ್ ನಟನೆಯ ಹಯಗ್ರೀವ ಚಿತ್ರದ ಹಾಡು  ಬಿಡುಗಡೆ

  • ಭ್ರಮರಾಂಬ ಚಿತ್ರಮಂದಿರದ 75ನೇ ವಾರ್ಷಿಕೋತ್ಸವ ಸಮಾರಂಭ
  • ಹೂಮಳೆ ಸುರಿಸುವ ಮೂಲಕ ಧನ್ವೀರ್ ಗೆ ಅದ್ದೂರಿ ಸ್ವಾಗತ. ಸಂಭ್ರಮಿಸಿದ ಅಭಿಮಾನಿಗಳು.

ಚಾಮರಾಜನಗರ: ಧನ್ವೀರ್ ಗೌಡ ಹಾಗೂ ಸಂಜನಾ ಆನಂದ್ ನಟನೆಯ ‘ಹಯಗ್ರೀವ’ ಚಿತ್ರದ ‘ಮೊದಲನೆಯ ಮಾತು’  ಹಾಡಿನ ಬಿಡುಗಡೆ ಹಾಗೂ ಭ್ರಮರಾಂಬ ಚಿತ್ರಮಂದಿರದ 75ನೇ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಿತು.

ನಗರದ ಭ್ರಮರಾಂಬ ಚಿತ್ರಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಧನ್ವೀರ್ ಗೌಡ ಹಾಗೂ ಸಂಜನಾ ಆನಂದ್ ನಟನೆಯ ‘ಹಯಗ್ರೀವ’ ಚಿತ್ರದ ‘ಮೊದಲನೆಯ ಮಾತು’  ಹಾಡಿನ ಬಿಡುಗೆಡೆ ಬಿಡುಗಡೆಯಾಯಿತು.

ಸಮೃದ್ಧಿ ಮಂಜುನಾಥ್ ಅವರ ಕೆ.ವೆ.ಸಿ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಾಣವಾದ ಈ ಚಿತ್ರವನ್ನು ರಘುಕುಮಾರ್ ಅವರು ನಿರ್ದೇಶಿಸಿದ್ದಾರೆ. ‘ಹಯಗ್ರೀವ’  ಚಿತ್ರದ ಟೀಸರ್ ಬಿಡುಗಡೆಯಾಗಿ ಪ್ರೇಕ್ಷಕರ ಗಮನ ಸೆಳೆದಿದೆ. ಚಿತ್ರದಲ್ಲಿ  ಧನ್ವೀರ್ ಗೌಡ  ಅವರು ಮಾಸ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. 

ಚಿತ್ರಮಂದಿರಕ್ಕೆ ಧನ್ವೀರ್ ಆಗಮಿಸುತ್ತಿದ್ದಂತೆ ಅಭಿಮಾನಿಗಳು ಪಟಾಕಿ ಸಿಡಿಸಿ, ಪುಪ್ಷವೃಷ್ಠಿ ಮೂಲಕ ಅದ್ದೂರಿ ಸ್ವಾಗತ ಕೋರಿ ಬರ ಮಾಡಿಕೊಂಡರು.  ಅಭಿಮಾನಿಗಳು ಡಿ ಬಾಸ್, ಡಿಬಾಸ್ ಘೋಷಣೆ ಕೂಗಿ ಸಂಭ್ರಮಿಸಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಚಿತ್ರದ ನಾಯಕ ನಟ ಧನ್ವೀರ್ ಗೌಡ, ನಾಯಕ ನಟಿ ಸಂಜನಾ ಆನಂದ್, ನಿರ್ದೇಶಕ ರಘುಕುಮಾರ್ ಮಾತನಾಡಿ, ಹಯಗ್ರೀವ್ ಚಿತ್ರ ಚೆನ್ನಾಗಿ ಮೂಡಿ ಬಂದಿದ್ದು ಒಂದು ಉತ್ತಮ ಚಿತ್ರವಾಗಿದೆ ಸುಮಧುರ ಹಾಡುಗಳು, ಫೈಟ್, ಡೈಲಾಗ್ ,ಕಾಮಿಡಿ ಒಳಗೊಂಡಿದೆ ಫೆ.27 ರಂದು ಸಿನಿಮಾ ಬಿಡುಗಡೆಯಾಗಲಿದ್ದು,  ಚಿತ್ರಮಂದಿರಕ್ಕೆ ಬಂದು ನೋಡುವ ಮೂಲಕ ಚಾಮರಾಜನಗರ ಜಿಲ್ಲೆಯ ಜನತೆ ಪೋತ್ಸಾಹಿಸಬೇಕು ಎಂದು ‌ಮನವಿ ಮಾಡಿದರು.

ಚಿತ್ರಮಂದಿರದ ಮಾಲೀಕರಾದ  ರೇವಂತ್ ದೇವರು ಮಾತನಾಡಿ,  ಧನ್ವೀರ್ ಗೌಡ ಹಾಗೂ ಸಂಜನಾ ಆನಂದ್ ನಟನೆಯ ‘ಹಯಗ್ರೀವ’ ಚಿತ್ರದ ‘ಮೊದಲನೆಯ ಮಾತು’  ಹಾಡಿನ ಬಿಡುಗೆಡೆ ಬಿಡುಗಡೆ ಕಾರ್ಯಕ್ರಮ ನಮ್ಮ ಚಿತ್ರಮಂದಿರದಲ್ಲಿ ಮಾಡಿರುವುದು ತುಂಬಾ ಖುಷಿಯಾಗಿದೆ. ಚಿತ್ರವು ಶತಮಾನೋತ್ಸವ ಆಚರಿಸಲಿ ಎಂದು ಶುಭ ಕೋರಿದರು.

ಅಲ್ಲದೆ ನಮ್ಮ ಚಿತ್ರಮಂದಿರವು ಇಂದು 75 ನೇ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿರುವುದು ತುಂಭಾ ಖುಷಿಯಾಗಿದೆ. ನಮ್ಮ ತಾತನವರಾದ ಮಾಂಬಳ್ಳಿ ಸಾಹುಕಾರ್ ಎಂ.ಎಸ್ .ರೇವಣ್ಣ ದೇವರು ಅವರು 1950 ರಲ್ಲಿ ಚಿತ್ರ ಮಂದಿರ ನಿರ್ಮಾಣ ಮಾಡಿದರು.  ಚಿತ್ರಮಂದಿರ ನವೀಕರಣ, ಅಭಿವೃದ್ಧಿ ಗೆ ಮತ್ತೊರ್ವ ತಾತ ವಕೀಲರಾದ ಕೊಳ್ಳೇಗಾಲ ಎಸ್ ಪಿ ಪಶುಪತಿ ಅವರ ಕೊಡುಗೆ ಅಪಾರವಾಗಿದೆ. ಹಲವಾರು ಚಿತ್ರಗಳು ಯಶಸ್ವಿ ಪ್ರದರ್ಶನ ಕಂಡಿದೆ. ಅದಕ್ಕಾಗಿ ನಮ್ಮ ಕುಟುಂಬದ ವತಿಯಿಂದ ಜಿಲ್ಲೆಯ ಜನತೆಯ, ಸಿನಿ ಪೇಕ್ಷಕರಿಗೆ ಈ ಮೂಲಕ ಅಭಿನಂದಿಸಿದರು.
ಸನ್ಮಾನ: ಚಿತ್ರನಟ ಧನ್ವೀರ್ ಅವರಿಗೆ ಚಿತ್ರಮಂದಿರ ಮಾಲೀಕರು  ಶಾಲುಹೊದಿಸಿ, ಹಾರಹಾಕಿ ಅಮೃತ ಮಹೋತ್ಸವದ ನೆನಪಿಗೆ ಕಾಣಿಕೆ ನೀಡಿ ಸನ್ಮಾನಿಸಿದರು  ಕಾರ್ಯಕ್ರಮದಲ್ಲಿ ಚಿತ್ರಮಂದಿರದ ಮಾಲೀಕರಾದ  ಸುಂದರೇಶ್ ಮೂರ್ತಿ, ಶಿವಬಸವಸ್ವಾಮಿ, ರೇವಂತ್ ದೇವರು, ರಕ್ಷಿತ್ ಮಾಂಬಳ್ಳಿ ಇತರರು

Leave a Reply

Your email address will not be published. Required fields are marked *