ಧ್ರುವನಾರಾಯಣ್ ಸರಳ, ಸಜ್ಜನಿಕೆಯ ಸಹಕಾರಮೂರ್ತಿ:ನಾಗಸೇನಾ ಬಂತೇಜಿ

  • ಆರ್.ಧ್ರುವನಾರಯಣ್‌ರವರ 3ನೇ ವರ್ಷದ ಪುಣ್ಯಸ್ಮರಣೆ
  • ರೋಟರಿ ಡಯಾಲಿಸಿಸ್ ಸೆಂಟರ್‌ಗೆ, ಅಭಿಮಾನಿ ಬಳಗದಿಂದ ಆರ್ಥಿಕ ಸಹಾಯ

ಚಾಮರಾಜನಗರ : ದಿವಗಂತ ಮಾಜಿ ಸಂಸದ ಆರ್.ಧ್ರುವನಾರಯಣ್ಅವರು ರಾಜಕಾರಣದಲ್ಲಿ ಸರಳ, ಸಜ್ಜನಿಕೆಯ ಸಹಕಾರಮೂರ್ತಿ ಎಂದರೆ ತಪ್ಪಲಾಗರದು ಎಂದು ನಗರದ ನಳಂದ ವಿಶ್ವವಿದ್ಯಾನಿಲಯದ ಸದಸ್ಯ ನಾಗಸೇನಾ ಬಂತೇಜಿ ಹೇಳಿದರು.
ನಗರದ ರೋಟರಿ ಭವನದಲ್ಲಿ ಆ‌ರ್.ಧ್ರುವನಾರಾಯಣ್‌ರವರ ಅಭಿಮಾನಿ ಬಳಗದ ವತಿಯಿಂದ ಮಾಜಿ ಸಂಸದರು, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಆ‌ರ್.ಧ್ರುವನಾರಾಯಣ್‌ರವರ 3ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ… ಪುಷ್ಪಾರ್ಚನೆ ಮಾತನಾಡಿದರು.
ಧ್ರುವನಾರಾಯಣ್ ಅವರು ನಮ್ಮಗಲಿ 3 ವರ್ಷಗಳು ಕಳೆದಿದೆ. ಅವರು ಪಕ್ಷಾತೀತವಾಗಿ ಸರ್ವರಿಗೂ ಸಮಾಜಮುಖಿ ಕೆಲಸ ಮಾಡುತ್ತಿದ್ದರು. ಅವರನ್ನು ವಿರೋಧಪಕ್ಷದವರು ಕೂಡ ಇಷ್ಟಪಡುತ್ತಿದ್ದರು. ಅವರು ಶಾಸಕರಾಗಿ, ಸಂಸದರಾಗಿ ಉತಮ ಸೇವೆ ಮಾಡುವ ಮೂಲಕ ಜನಮಾನಸದಲ್ಲಿ ಉಳಿದಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಕೆಪಿಸಿಸಿ ಅಧ್ಯಕ್ಷರಾಗುವ ಅವಕಾಶ
ದಟ್ಟವಾಗಿತ್ತು. ಅವರು ಇಂದು ಇದ್ದಿದ್ದರೆ ರಾಜ್ಯ ಸಚಿವ ಸಂಪುಟದಲ್ಲಿ ಮಂತ್ರಿಯಾಗುತಿದ್ದರು ಎಂದರು.
ಕ್ರೀಯಾಶೀಲ ವ್ಯಕ್ತಿಯಾಗಿದ್ದ ಧ್ರುವನಾರಾಯಣ್ ಅವರು ಕಳೆದುಕೊಂಡಿರುವುದು ಕಾಂಗ್ರೆಸ್ ಗೆ ತುಂಬಾ ನಷ್ಟ ಉಂಟಾಗಿದೆ. ಪ್ರಕೃತಿ ಮಡಲಿನಲ್ಲಿರುವ ಧ್ರುವನಾರಾಯಣ್ ಆತ್ಮಕ್ಕೆ ಶಾಂತಿ ನೆಲೆಸಲಿಸಿ ಎಂದು ಆಶಿಸಿದರು.
ಧ್ರುವನಾರಾಯಣ್ ಅಪರೂಪದ ರಾಜಕಾರಣಿ : ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ ಮಾತನಾಡಿ, ನಮ್ಮೆಲ್ಲರ ನೆಚ್ಚಿನ ನಾಯಕರಾಗಿದ್ದ ಆರ್.ಧ್ರುವನಾರಾಯಣ್ ಅವರು ನಮ್ಮನ್ನುಗಲಿ ಇಂದಿಗೆ 3 ವರ್ಷಗಳಾಗಿವೆ. ಅವರ ನೆನಪು ಸದಾ ನಮ್ಮ ಜೊತೆಯಲ್ಲಿದೆ. ಅವರು ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರೊಂದಿಗೆ ಇಟ್ಟುಕೊಂಡಿದ ಬಾಂದವ್ಯಯಿಂದ ಹಸನ್ಮುಖಿ ರಾಜಕಾರಣಿಯಾಗಿದ್ದು ಎಲ್ಲರೊಂದಿಗೆ ಪ್ರೀತಿ, ವಿಶ್ವಾಸದಿಂದ ಇದ್ದರು. ಪ್ರತಿಯೊಬ್ಬರ ಕಷ್ಟಕಾರ್ಪಣ್ಯಕ್ಕೆ ಸ್ಪಂದಿಸುತ್ತಿದ್ದ. ಮಹಾನ ವ್ಯಕ್ತಿ ಯಾಗಿದ್ದರು ಎಂದರು.
ಧ್ರುವನಾರಾಯಣ್ ಅವರಿಂದ ಪಕ್ಷ ಸಂಘಟನೆ, ಶಿಸ್ತು ಕಲಿತಿದ್ದೇವು. ಅಂತಹ ರಾಜಕಾರಣಿ ಸಿಗುವುದು ಬಹಳ ಅಪರೂಪ. ಅವರು ಶಾಸಕರಾಗಿ, ಸಂಸದರಾಗಿ ಜಿಲ್ಲೆಯಲ್ಲಿ ಬಹಳಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಅವರು ನಮ್ಮಿಂದ ದೂರವಾಗಿರಬಹುದು ಆದರೆ ಅವರು ಜಿಲ್ಲೆಯಲ್ಲಿ ಮಾಡಿರುವ ಕೆಲಸಗಳು ನಮ್ಮ ಕಣ್ಣುಮುಂದಿವೆ. ಅವರೊಬ್ಬ ಅಪರೂಪದ ರಾಜಕಾರಣಿಯಾಗಿದ್ದರು ಎಂದರು.
ರೋಟರಿ ಡಯಾಲಿಸಿಸ್‌ ಸೆಂಟರ್‌ಗೆ ಅಭಿಮಾನಿ ಬಳಗದಿಂದ ಆರ್ಥಿಕ ಸಹಾಯ : ಆರ್. ಧ್ರುವನಾರಾಯಣ್ ರವರ 3ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಎಲ್ಲಾ ರೋಗಿಗಳಿಗೂ ಧ್ರುವನಾರಾಯಣರವರ ಅಭಿಮಾನಿ ಬಳಗದ ವತಿಯಿಂದ ಉಚಿತವಾಗಿ ಡಯಾಲಿಸಿಸ್ ಮಾಡಿಸಲು ಆರ್ಥಿಕ ಸಹಾಯ ಮಾಡಲಾಯಿತು.
ಚೂಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್, ಜಿ.ಪಂ.ಮಾಜಿ ಸದಸ್ಯ ಕೆ.ಪಿ.ಸದಾಶಿವಮೂರ್ತಿ, ನಗರಸಭಾ ಮಾಜಿ ಅಧ್ಯಕ್ಷ ಚಿನ್ನಮ್ಮ ಮಾತನಾಡಿದರು.
ಕಾರ್ಯಕ್ರಮದಲ್ಲಿ ತಾ.ಪಂ.ಮಾಜಿ ಅಧ್ಯಕ್ಷ  ಬಿ.ಕೆ.ರವಿಕುಮಾರ್, ಕನಿಷ್ಠ ವೇತನಾ ಸಲಹಾ ಸಮಿತಿ ಮಾಜಿ ಅಧ್ಯಕ್ಷ ಉಮೇಶ್ ಎಸ್ ಪಿಕೆ, ಧ್ರುವನಾರಾಯಣ ಅಭಿಮಾನಿಗಳು ಬಳಗದ ಅಧ್ಯಕ್ಷ ಕಾಗಲವಾಡಿ ಚಂದ್ರು, ಉದ್ಯಮಿ ಶ್ರೀನಿಧಿಕುದರ್,
ಚಿಕ್ಕಹೊಳೆ ಕುಮಾರ್, ಜಿ.ರಾಜಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ನಾಗೇಂದ್ರ, ವಿನೋದ, ಚಿಕ್ಕಮಹದೇವ್, ಕಮಲಖಾನ್
ನಾಗಯ್ಯ, ಎಂ.ಶಿವಮೂರ್ತಿ, ನಲ್ಲೂರು ಮಹಾದೇವಸ್ವಾಮಿ, ಚೂಡಾ ಮಾಜಿ ಅಧ್ಯಕ್ಷರಾದ ಸೈಯದ್ ರಫೀ,
ಸುಹೇಲ್ ಅಲಿಖಾನ್, ತಾ.ಪಂ.ಮಾಜಿ ಸದಸ್ಯ ರಾಜು, ಗ್ರಾ.ಪಂ.ಮಾಜಿ ಅಧ್ಯಕ್ಷ ರೂಪೇಶ್, ಎಎಚ್ ಖಾನ್, ರಂಗಸ್ವಾಮಿ, ನಾಗರಾಜು, ಮನೋರಾಜ್ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *