ಚಾಮರಾಜನಗರ: ಕಳೆದ 10 ವರ್ಷದಲ್ಲಿ ಪ್ರಧಾನಿ ನರೇಂದ್ರಮೋದಿ ನೇತೃತ್ವದ ಬಿಜೆಪಿ ಸರಕಾರ ದೇಶದ ಜನತೆಗೆ ಜಾರಿಮಾಡಿದ ಯೋಜನೆಗಳ ಕರಪತ್ರವನ್ನು ತಾಲೂಕಿನ ಮರಿಯಾಲ ಗ್ರಾಮದ ಬಸ್ ನಿಲ್ದಾಣ ಸೇರಿದಂತೆ ನಾನಾಕಡೆ ಎಸ್ಸಿಮೋರ್ಚಾ ರಾಜ್ಯಕಾರ್ಯಕಾರಣಿ ಸದಸ್ಯ ಕೂಡ್ಲೂರು ಶ್ರೀಧರ್ ಮೂರ್ತಿ ವಿತರಣೆ ಮಾಡಿದರು.
ಇದೇವೇಳೆ ಅವರು ಮಾತನಾಡಿ, ಮೋದಿಯವರು ಪ್ರಧಾನಿಯಾದ ಕಳೆದ 10ವರ್ಷಗಳಲ್ಲಿ ದೇಶದ ರೈತರು, ಮಹಿಳೆಯರು, ಯುವಕರ ಪರ ಹತ್ತಾರು ಕಾರ್ಯಕ್ರಮಗಳನ್ನು ಜಾರಿಮಾಡಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಮೂಲಕ ಮೂರನೇ ಬಾರಿಗೆ ದೇಶದ ಪ್ರಧಾನಿಯಾಗಿ ಮಾಡಬೇಕಿದೆ, ಅವರು ಮತ್ತೊಮ್ಮೆ ಪ್ರಧಾನಿಯಾದರೆ ದೇಶದ ಅಭಿವೃದ್ದಿಗೆ ಮತ್ತಷ್ಟು ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಲಿದ್ದಾರೆ ಎಂದರು.