ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರಿಂದ ಯುವಕ ಸಂಘಗಳಿಗೆ ಕ್ರೀಡಾ ಸಲಕರಣೆಗಳ ವಿತರಣೆ

ಚಾಮರಾಜನಗರ: ಯುವ ಚೈತನ್ಯ ಯೋಜನೆಯಡಿ ನಗ ತತ್ವರದ ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಜಿಲ್ಲೆಯ 7 ಯುವಕ ಸಂಘಗಳಿಗೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಇಂದು ಕ್ರೀಡಾ ಸಲಕರಣೆಗಳನ್ನು ವಿತರಿಸಿದರು.

ಕ್ರೀಡಾ ಸಲಕರಣೆಗಳನ್ನು ವಿತರಿಸಿ ಬಳಿಕ ಯುವಕ ಸಂಘಗಳನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಗ್ರಾಮೀಣ ಪ್ರದೇಶಗಳಲ್ಲಿ ಯುವಕರನ್ನು ಉತ್ತೇಜಿಸುವ ಸಲುವಾಗಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಯುವಕ ಸಂಘಗಳನ್ನು ಸ್ಥಾಪಿಸಿ ಕ್ರೀಡಾಕಲೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಹೆಚ್ಚಿನ ಪ್ರಗತಿ ಸಾಧಿಸಿದ ಯುವಕ ಸಂಘಗಳನ್ನು ಸರ್ಕಾರದ ವತಿಯಿಂದ ಯುವ ಚೈತನ್ಯ ಯೋಜನೆಯಡಿ ಪ್ರೋತ್ಸಾಹಿಸಲಾಗುತ್ತಿದೆ ಎಂದರು.

ಯುವಕ ಸಂಘಗಳಿಗೆ ಅಗತ್ಯವಾಗಿರುವ ಕ್ರೀಡಾ ಸಲಕರಣೆಗಳನ್ನು ನೀಡುವ ನಿಟ್ಟಿನಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ 2023-24ನೇ ಸಾಲಿಗೆ ರಾಜ್ಯದಲ್ಲಿ ಒಟ್ಟು 200 ಯುವಕ ಸಂಘಗಳನ್ನು ಗುರುತಿಸಲಾಗಿದ್ದು, ಈ ಪೈಕಿ ಜಿಲ್ಲೆಯ 7 ಯುವಕ ಸಂಘಗಳು ಸೇರಿವೆ. ಆಯ್ಕೆಯಾದ ಸಂಘಕ್ಕೆ ವಾಲಿಬಾಲ್, ನೆಟ್, ಥ್ರೋಬಾಲ್, ನೆಟ್, ಫುಟ್ಬಾಲ್, ಷಟಲ್ ಬ್ಯಾಡ್ಮಿಂಟನ್, ರಾಕೆಟ್ ನೆಟ್, ಕಾಕ್, ಕೇರಂ, ಚೆಸ್ ಸೆಟ್, ಸ್ಕಿಪ್ಪಿಂಗ್ ರೋಪ್ ಕಿಟ್ ನೀಡಲಾಗುತ್ತದೆ. ಗ್ರಾಮೀಣ ಯುವಕರು ಕ್ರೀಡಾ ಚಟುವಟಿಕೆಗಳಲ್ಲಿ ಹೆಚ್ಚಾಗಿ ಪಾಲ್ಗೊಳ್ಳಲು ಇದು ಸಹಕಾರಿಯಾಗಲಿದೆ ಎಂದು ತಿಳಿಸಿದರು. 

ವಿತರಿಸಲಾಗಿರುವ ಕ್ರೀಡಾ ಪರಿಕರಗಳನ್ನು ಯುವಕ ಸಂಘಗಳು ಸದ್ಭಳಕೆ ಮಾಡಿಕೊಳ್ಳಬೇಕು. ಯುವಕರು ದೇಹದಾಢ್ಯತೆಯನ್ನು ವೃದ್ಧಿಸಿಕೊಂಡು ಉತ್ತಮ ಕ್ರೀಡಾಪಟುಗಳಾಗಿ ಹೊರಹೊಮ್ಮಬೇಕು. ದೈಹಿಕ ಹಾಗೂ ಮಾನಸಿಕ ಆತ್ಮಸೈರ್ಯ ಹೆಚ್ಚಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಆಶಿಸಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಕೆ. ಸುರೇಶ್, ಫುಟ್ಬಾಲ್ ತರಬೇತುದಾರರಾದ ಗೋಪಾಲ್, ಯುವಕ ಸಂಘದ ಅಧ್ಯಕ್ಷರಾದ ನಾಗೇಂದ್ರ, ಕಾರ್ಯದರ್ಶಿ ಪ್ರಕಾಶ್, ಇತರರು ಇದೇ ವೇಳೆ ಇದ್ದರು. .

Leave a Reply

Your email address will not be published. Required fields are marked *