






ಚಾಮರಾಜನಗರ: ಚಾಮರಾಜನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆಯಲ್ಲಿ ಆರ್.ಎನ್. ಸಿದ್ದಲಿಂಗಸ್ವಾಮಿ, ಪ್ರಸಾದ್ ಎಸ್. ಲಕ್ಕೂರು ಬಣ ಭರ್ಜರಿ ಗೆಲುವು ಸಾಧಿಸಿದೆ.
ಕಳೆದ 25 ವರ್ಷದಿಂದ ಚುನಾವಣೆ ನಡೆದಿರಲಿಲ್ಲ ಇದೇ ಮೊದಲ ಬಾರಿಗೆ ನಡೆದ ಚುನಾವಣೆಯಲ್ಲಿ ಚುನಾವಣೆಯಲ್ಲಿ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ಉಪಾಧ್ಯಕ್ಷ, ಕಾರ್ಯದರ್ಶಿ, ರಾಜ್ಯ ಸಮಿತಿ ಸದಸ್ಯ ಸೇರಿದಂತೆ ಒಟ್ಟು 25 ಸ್ಥಾನಗಳಿಗೂ ಚುನಾವಣೆ ನಡೆಯಿತು.
ಬೆಳಗ್ಗೆ 9 ಗಂಟೆಯಿAದ ಮಧ್ಯಾಹ್ನ 3 ಗಂಟೆಯವರೆಗೂ ಚಾಮರಾಜನಗರ ಜಿಲ್ಲೆಯ ಎಲ್ಲಾ ಅರ್ಹ ಪತ್ರಕರ್ತರು ಮತ ಚಲಾವಣೆ ಮಾಡಿದರು. ನಂತರ ಮತ ಎಣಿಕೆ ಕಾರ್ಯ ನಡೆಯಿತು.
ಸಂಘದ ನೂತನ ಅಧ್ಯಕ್ಷರಾಗಿ ಮೈಸೂರು ಮಿತ್ರ ವರದಿಗಾರ ಆರ್.ಎನ್. ಸಿದ್ದಲಿಂಗಸ್ವಾಮಿ 85 ಮತಗಳು, ಪ್ರಧಾನ ಕಾರ್ಯದರ್ಶಿಯಾಗಿ ಆದೋಂಲನಾ ಪತ್ರಿಕೆಯ ವರದಿಗಾರರಾದ ಪ್ರಸಾದ್ ಎಸ್.ಲಕ್ಕೂರು 86, ಖಂಜಾAಚಿಯಾಗಿ ಸುವರ್ಣ ನ್ಯೂಸ್ ಚಾನಲ್ನ ಆರ್.ಸಿ. ಪುಟ್ಟರಾಜು 77, ರಾಜ್ಯ ಸಮಿತಿ ಸದಸ್ಯರಾಗಿ ಗೊರುಕನ ಪತ್ರಿಕೆ ಸಂಪಾದಕರಾದ ಸಿ. ಮಹೇಂದ್ರ 83 ಮತಗಳನ್ನು ಪಡೆದು ಜಯ ಗಳಿಸಿದರು.
ಉಪಾಧ್ಯಕ್ಷರಾಗಿ ಎಚ್.ಎಸ್. ಚಂದ್ರಶೇಖರ್ 75, ಬಿ.ವಿ. ಪ್ರಸಾದ್ 81, ಡಿ. ನಟರಾಜು 77 ಮತಗಳು ಹಾಗೂ ಕಾರ್ಯದರ್ಶಿಗಳಾಗಿ ಎನ್. ನಾಗೇಂದ್ರ 76, ಕೆ.ಎಸ್. ಫಾಲಲೋಚನ ಆರಾಧ್ಯ 85, ಅಮಚವಾಡಿ ಆರ್. ರಾಜೇಂದ್ರ 73 ಮತಗಳನ್ನು ಪಡೆದು ಗೆಲುವಿನ ನಗೆ ಬೀರಿದರು.
ಉಳಿದಂತೆ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಎಸ್.ಎನ್. ವಿಜಯಕುಮಾರ್ 86, ಎಸ್.ಎಂ. ನಂದೀಶ್ 85, ಎಸ್.ವಿ. ಪ್ರಕಾಶ್ ಬೆಲ್ಲದ್ 82, ಎಂ. ಬಸವರಾಜು 82, ಅಬ್ರಹಾಂ ಡಿ.ಸಿಲ್ವ 81, ಮಲ್ಲಪ್ಪ 81, ಕೆ.ಎ. ಬಿಳಿಗಿರಿ ಶ್ರೀನಿವಾಸ 81, ಎಂ.ಎಸ್. ಮಹೇಶ್ 80, ಎಸ್. ರಾಜಶೇಖರ್ 80, ಸಿ. ನಂಜುAಡನಾಯ್ಕ 78, ವೈ.ಎಂ. ಭಾನುಪ್ರಕಾಶ್ 78, ಎಂ.ಎಸ್. ಮಲ್ಲಣ್ಣ 78, ಎಂ. ಮಲ್ಲೇಶ್ 76, ಎಂ. ಮರಿಸ್ವಾಮಿ 74 ಹಾಗೂ ಸಿ. ಪುರುಷೋತ್ತಮ್ 72 ಮತಗಳನ್ನು ಪಡೆದು ಜಯಗಳಿಸಿದ್ದಾರೆ.