ಚಾಮರಾಜನಗರ: ಚಾಮರಾಜನಗರ ಜಿಲ್ಲಾ ಉಪ್ಪಾರ ಸಂಘದ ವತಿಯಿಂದ 2023-24ನೇ ಸಾಲಿನಲ್ಲಿ ಶೇ.85ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದು ಉತ್ತೀರ್ಣರಾಗಿರುವ ಪ್ರತಿಭಾನ್ವಿತ ಉಪ್ಪಾರ ಸಮುದಾಯದ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಂದ ಪುರಸ್ಕಾರಕ್ಕೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ವಿದ್ಯಾರ್ಥಿಗಳು ಅರ್ಜಿಯ ಜೊತೆಗೆ ಅಂಕಪಟ್ಟಿ ಜೆರಾಕ್ಸ್, ಜಾತಿ ಪ್ರಮಾಣ ಪತ್ರದ ಜೆರಾಕ್ಸ್, ಒಂದು ಫೋಟೋ ಜೊತೆಗೆ ಮೊಬೈಲ್ ನಂಬರನ್ನು ಖಡ್ಡಾಯವಾಗಿ ನಮೂದಿಸಿ, ಫೆ.28ರೊಳಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಅಂಚೆ ಮೂಲಕ ಕಳುಹಿಸುವ ವಿದ್ಯಾರ್ಥಿಗಳು, ಎಂ.ಚಿಕ್ಕಮಹದೇವ, ಗಿರಿಪ್ರಸಾದ್ ನಿಲಯ, ಭಗೀರಥ ನಗರ, ಚಾಮರಾಜನಗರ ಇಲ್ಲಿಗೆ ಕಳುಹಿಸಬಹುದು. ಆಯಾಯ ತಾಲೂಕಿನ ವಿದ್ಯಾರ್ಥಿಗಳು ಈ ಕೆಳಕಂಡವರಿಗೆ ಸಲ್ಲಿಸಬಹುದಾಗಿದೆ. ಚಾಮರಾಜನಗರ ಎಂ.ಸೋಮಣ್ಣ ಮೊ:9886824852, ಪಿ.ಗೋವಿಂದರಾಜು ಮೊ: 9945898796, ಯಳಂದೂರು ರೇಚಣ್ಣ ಮೊ:9964156517, ಗುಂಡ್ಲುಪೇಟೆ ಮಲ್ಲು ಮೊ:9164898310, ಮಾದೇಶ್ ಹನೂರು ಮತ್ತು ಕೊಳ್ಳೇಗಾಲ ಮೊ:9972835089ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಉಪ್ಪಾರ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಚಿಕ್ಕಮಹದೇವ್ ಮೊ:9902039341 ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.