ಚಾಮರಾಜನಗರ: ಜಿಲ್ಲೆಯಲ್ಲಿ ಗೃಹಬಳಕೆ ಎಲ್ ಪಿಜಿ ಗ್ಯಾಸ್ ಸಿಲಿಂಡರ್ ಗಳು ಸಮರ್ಪಕವಾಗಿ ಸಂಗ್ರಹದಲ್ಲಿದ್ದು ಸರಬರಾಜು ಮಾಡಲಾಗುತ್ತಿದೆ.ಸಾರ್ವಜನಿಕರು ಯಾವುದೇ ಆತಂಕಕ್ಕೆ ಒಳಗಾಗದೇ ಅಗತ್ಯವಿರುವ ಪ್ರಮಾಣದಲ್ಲಿ ಮಾತ್ರ ಬುಕ್ ಮಾಡಿ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ಶ್ರೀರೂಪ ಅವರು ಮನವಿ ಮಾಡಿದ್ದಾರೆ.
ಅಡುಗೆ ಅನಿಲವನ್ನು ಮಿತಬಳಕೆ ಪೂರೈಕೆಗಾಗಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಎಲ್ ಪಿಜಿ ವಿತರಕರೊಂದಿಗೆ ಸಮಾಲೋಚನೆ ನಡೆಸಲಾಗಿದೆ. ಗೃಹಬಳಕೆ ಗ್ಯಾಸ್ ಸಿಲಿಂಡರ್‌ಗಳ ಸಮರ್ಪಕ ಸಂಗ್ರಹ ಮತ್ತು ಸರಬರಾಜು ಲಭ್ಯವಿರುವುದನ್ನು ದೃಢಪಡಿಸಿ, ಎಂದಿನಂತೆ ಎಲ್ ಪಿಜಿ ವಿತರಕರು ಗ್ರಾಹಕರ ಮನೆಬಾಗಿಲಿಗೆ ಸರಬರಾಜು ಮಾಡಲಿದ್ದಾರೆ. ಈ ಬಗ್ಗೆ ಜಿಲ್ಲೆಯ ಎಲ್ಲಾ ಎಲ್‌ಪಿಜಿ ವಿತರಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಸಾರ್ವಜನಿಕರು ಯಾವುದೇ ರೀತಿಯ ಆತಂಕಕ್ಕೆ ಒಳಗಾಗದೆ ಅಗತ್ಯವಿರುವ ಪ್ರಮಾಣದಲ್ಲಿ ಗ್ಯಾಸ್ ಸಿಲಿಂಡರ್ ಪಡೆಯಬಹುದು. ಎಲ್. ಪಿ.ಜಿ ವಿತರಣೆಯಲ್ಲಿ ಏನಾದರೂ ಕುಂದುಕೊರತೆಗಳು ಕಂಡುಬಂದಲ್ಲಿ, ಈ ಕೆಳಗಿನ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಿ, ಪರಿಹಾರ ಕಂಡುಕೊಳ್ಳಬಹುದಾಗಿದೆ.
ಕಚೇರಿಯ ಹೆಸರು:
ಜಿಲ್ಲಾಧಿಕಾರಿಗಳ ಕಚೇರಿ(ಆಹಾರ) ಚಾಮರಾಜನಗರ ಸೇಲ್ಸ್ ಆಫೀಸರ್ ಹೆಚ್‌ಪಿಸಿ ಆಫೀಸ್ ದೂರವಾಣಿ ಸಂಖ್ಯೆ: 08226-224660,
ಮೊ .9159466455
ಸೇಲ್ಸ್ ಆಫೀಸರ್ ಬಿಪಿಸಿ- ಕಚೇರಿ. ಮೊ 9853735944,
ಸೇಲ್ಸ್ ಆಫೀಸರ್ ಐಓಸಿ- ಕಚೇರಿ. ಮೊ. 9448289912
ಚಾಮರಾಜನಗರ ತಹಶೀಲ್ದಾರ್ ಕಚೇರಿ ಮೊ.9743122301,
ಗುಂಡ್ಲುಪೇಟೆ ತಹಶೀಲ್ದಾರ್ ಕಚೇರಿ ಮೊ.9945415179
ಯಳಂದೂರು ತಹಶೀಲ್ದಾರ್ ಕಚೇರಿ ಮೊ.9902039929
ಕೊಳ್ಳೇಗಾಲ ತಹಶಿಲ್ದಾರ್ ಕಚೇರಿ ಮೊ.8453500797
ಹನೂರು ತಹಶೀಲ್ದಾರ್ ಕಚೇರಿ ಮೊ. 6360025850 ಅನ್ನು ಸಂಪರ್ಕಿಸಬಹುದಾಗಿದೆ.
ಯಾವುದೇ ಅನಧಿಕೃತ ಗ್ಯಾಸ್ ಸಿಲಿಂಡರ್ ಸಂಗ್ರಹಣೆ ಅಥವಾ ಅಕ್ರಮ ಮಾರಾಟ ಕಂಡುಬಂದಲ್ಲಿ ಅಗತ್ಯ ವಸ್ತುಗಳ ಕಾಯ್ದೆ-1955 ಹಾಗೂ ಸಂಬಂಧಿತ ನಿಯಂತ್ರಣ ಆದೇಶಗಳಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಗೃಹಬಳಕೆ ಅಡುಗೆ ಅನಿಲ ಸಿಲಿಂಡರ್ ಗಳ ಸಮರ್ಪಕ ಹಾಗೂ ಸುಗಮ ಸರಬರಾಜು ನಿರ್ವಹಣೆಗೆ ಜಿಲ್ಲೆಯ ಸಾರ್ವಜನಿಕರು ಸಹಕರಿಸುವಂತೆ ಜಿಲ್ಲಾಧಿಕಾರಿ ಶ್ರೀರೂಪ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.