- ಇದು ಹೆತ್ತ ಕರುಳು ಪಡುತ್ತಿದ್ದ ಮೌನ ಆಕ್ರಂಧನ
ಮೈಸೂರು : ” ವಂಶೋದ್ಧಾರಕನಕುಡಿತದದಾಸ್ಯದಚಿಂತೆಯಿಂದಲೇ ನಿನ್ನಪ್ಪ ಸಾವನ್ನಪ್ಪಿದರು. ಬೇಡ ಮಗ…, ನಾನು ಜೀವಂತವಾಗಿ ಇರುವಾಗಲೇ ಈ ಕುಡಿತವನ್ನು ಬಿಟ್ಟು ಒಳ್ಳೆಯ ಮನುಷ್ಯನಾಗಿ ಬದಲಾಗು. ಕೊನೆಗೆ ನಾನೂ ಇಲ್ಲದಿದ್ದರೆ ಈ ಜಗತ್ತಿನಲ್ಲಿ ನಿನ್ನವರುಎಂದು ಯಾರೂ ಇಲ್ಲ..! ಬೇಡ ಮಗ ಕೈ ಮುಗಿದು ಕೇಳಿಕೊಳ್ಳುತ್ತೇನೆ ಈ ಹಾಳಾದ ಕುಡತ ಬಿಟ್ಟುಒಳ್ಳೆಯ ವ್ಯಕ್ತಿಯಾಗಿಬದಲಾಗು….! ಇದು ಹೆತ್ತ ಕರುಳು ಪಡುತ್ತಿದ್ದ ಮೌನ ಆಕ್ರಂಧನ.
ಹೌದು.., ಪ್ರತಿಷ್ಠಿತ ಮನೆಯಯುವಕನೊಬ್ಬಕುಡಿತಕ್ಕೆದಾಸನಾಗಿ, ಆ ಚಟ ನಶೆ ನೀಡುತ್ತಿಲ್ಲಎಂದುಗಾಂಜಾದ ಮತ್ತೇರಿಸಿಕೊಂಡು ಜೀವನವನ್ನೆ ಸರ್ವನಾಶ ಮಾಡಿಕೊಂಡಿದ್ದವನ ನೋವಿನ ಕಣ್ಣೀರಿನಕಥೆ. ಈ ಕಥೆಯನ್ನು ನೀವು ಒಮ್ಮೆ ಕೇಳಬೇಕು. ನಿಜಕ್ಕೂ ಮಮ್ಮಲು ಮರುಗುತ್ತೀರಿ.! ಅಯ್ಯೋ ಪಾಪಾ ಎಂದು ನೊಂದುಕೊಳ್ಳುತ್ತೀರಿ. ಎಲ್ಲವೂ ಕೈ ಮೀರಿದಾಗಕೊನೆಗೆ ಅವನಿಗೆ ಆಸರೆಯಾಗಿ ಸಿಕ್ಕಿದ್ದು, ಬದುಕಿಗೆ ಹೊಸ ದಾರಿ ನಿರ್ಮಾಣ ಮಾಡಿಕೊಟ್ಟಿದ್ದು, ಮೈಸೂರಿನ ಬಸವಮಾರ್ಗ ವ್ಯಸನಮುಕ್ತ ಮತ್ತು ಪುನರ್ವಸತಿಕೇಂದ್ರ. ಈಗ ಆ ಯುವಕಎಲ್ಲಿದ್ದಾನೆ ? ಹೇಗಿದ್ದಾನೆ ? ಏನು ಮಾಡುತ್ತಿದ್ದಾನೆ ?ಎಂದು ತಿಳಿದುಕೊಳ್ಳುವ ಕುತೂಹಲ ನಿಮಗೆ ಇದಿಯೇ ? ಹಾಗಾದರೆ ಈ ನೈಜ್ಯಕಥೆಯನ್ನೊಮ್ಮೆ ನೋಡಿಕೊಂಡು ಬನ್ನಿ !
ಈ ಕಥೆಯ ನಾಯಕನ ಹೆಸರು ವಿಜಯ್. ಚಿನ್ನದ ಸ್ಪೂನ್‌ಅನ್ನು ಬಾಯಲ್ಲಿಇಟ್ಟುಕೊಂಡು, ಸುಖದ ಸುಪ್ಪತ್ತಿಗೆಯಲ್ಲಿ ಬೆಳೆದ ಹುಡುಗ. ಆದರೆತಾನು ೧೬ನೇ ವಯಸ್ಸಿಗೆ ಬರುವಷ್ಟರ ವೇಳೆಗೆ ಕೆಟ್ಟ ಸ್ನೇಹಿತರ ಸಹವಾಸದಿಂದ ವಿಜಯ್ ಹಾದಿತಪ್ಪಿದ್ದ. ಆಗ ಹತ್ತಿಸಿಕೊಂಡ ಕುಡಿತ, ತನಗೆ ತಿಳಿಯದಂತೆ ವ್ಯಸನವಾಗಿ ಬದಲಾಯಿತು. ವ್ಯಸನ ಆತ ಮತ್ತುಆತನಕುಟುಂಬವನ್ನುಕಣ್ಣೀರಿನಕೋಡಿಯಲ್ಲಿ ಮುಳುಗಿಸಿತ್ತು. ವಿಜಯ್‌ತಂದೆ, ತಾಯಿ, ತಮ್ಮಿಬ್ಬರ ಮಕ್ಕಳಿಗೆ ಒಂದು ಒಳ್ಳೆಯ ಭವಿಷ್ಯ ಕಲ್ಪಿಸಿಕೊಡಬೇಕೆಂದು ದಾವಣಗೆರೆಯಿಂದ ಬೆಂಗಳೂರಿಗೆ ಬಂದವರು. ಬೆಂಗಳೂರಿನಲ್ಲಿ ಸ್ವಂತಕಂಪನಿಯೊಂದನ್ನುಕಟ್ಟಿ, ಬೆಳಸಿದರು. ನೂರಾರುಜನರಿಗೆಉದ್ಯೋಗ ನೀಡಿದ್ದರು. ನಾಲ್ಕೈದುತಲೆಮಾರಿಗಾಗುವಷ್ಟು ಆಸ್ತಿ-ಪಾಸ್ತಿಯನ್ನೂ ಕೂಡಮಾಡಿಟ್ಟಿದ್ದರು.
ವಿಜಯ್ ಮನೆಯವರನ್ನು ಸಹಜವಾಗಿಯೇಎಲ್ಲರುಗೌರವದಿಂದಕಾಣುತ್ತಿದ್ದರು. ವಿಜಯ್‌ತಂದೆ, ತಾಯಿಗೆಅವರ ಸಂಬಂಧಿಕರು, ಸ್ನೇಹಿತರು ವಿಶೇಷವಾದಗೌರವ,ಮರ್ಯಾದೆಗಳನ್ನು ನೀಡುತ್ತಿದ್ದರು. ಇತ್ತತಮ್ಮಿಬ್ಬರ ಮಕ್ಕಳನ್ನು ಪ್ರೀತಿಯಿಂದಲೇ ಸಾಕಿ, ಸಲಹಿದ್ದರು. ಮಕ್ಕಳ ಬಗ್ಗೆ ಬೆಟ್ಟದಷ್ಟು ಕನಸು ಕಟ್ಟಿಕೊಂಡಿದ್ದರು. ಮನೆಯಲ್ಲೂ ನೆಮ್ಮದಿಗೆಯಾವುದೆಕೊರತೆಇರಲಿಲ್ಲ. ಇವರ ಈ ಸುಖ ಸಂಸಾರಕ್ಕೆ ಪಾರವೇಇರಲಿಲ್ಲ. ಆದರೆ ಈ ಕುಟುಂಬಕ್ಕೆಯಾರಕಣ್ಣು ಬಿತ್ತೊಗೊತ್ತಿಲ್ಲ. ವಿಜಯ್ ಅತ್ತಿಸಿಕೊಂಡ ವ್ಯಸನಕ್ಕೆಇಡೀಕುಟುಂಬದ ಸಂತೋಷ, ನೆಮ್ಮದಿಯೇ ನುಚ್ಚು ನೂರಾಯಿತು. ವಿಜಯ್ ಮೇಲೆ ಪಾಲಕರುಕಟ್ಟಿಕೊಂಡಿದ್ದ ಆಶಾ ಗೋಪುರ ಕುಸಿದಿತ್ತು.
ಮಗ ದೊಡ್ಡವನಾದ ಮೇಲೆ ತಮ್ಮದೆಕಂಪನಿಯಉಸ್ತುವಾರಿ ವಹಿಸಿಕೊಳ್ಳುತ್ತಾನೆ. ಕಂಪನಿಯನ್ನುಇನ್ನಷ್ಟುದೊಡ್ಡದಾಗಿ ಬೆಳೆಸುತ್ತಾನೆ. ಕೊನೆಗಾಲದಲ್ಲಿ ನಮಗೂ ಆಸರೆಯಾಗಿ ನಿಲ್ಲುತ್ತಾನೆಎಂದು ನೂರಾರು ಕನಸುಗಳನ್ನು ಕಟ್ಟಿಕೊಂಡಿದ್ದರು. ಆದರೆ ವಿಜಯ್‌ಓದುವ ಸಮಯದಲ್ಲಿ ಮೋಜು, ಮಸ್ತಿ ಕಡೆಗೆ ಗಮನ ಹರಿಸಿದ್ದ. ತನ್ನ ೧೬ನೇ ವಯಸ್ಸಿಗೆ ಬರುವ ವೇಳೆಗಾಗಲೇ ಹಾದಿ ತಪ್ಪಿದ್ದ.
ಮನೆಯವರಿಗೆಗೊತ್ತಿಲ್ಲದರೀತಿಯಲ್ಲಿಕೆಟ್ಟ ಸ್ನೇಹಿತರ ಸಹವಾಸದಿಂದಕುಡಿತದಚಟಕ್ಕೆ ಬಲಿಯಾಗಿ ಹೋಗಿದ್ದ. ಒಂದು ದಿನ ಈ ವಿಷಯ ವಿಜಯ್‌ತಂದೆ, ತಾಯಿಗೆತಿಳಿದು ಬರ ಸಿಡಿಲು ಎರಗಿ ಬಂದಂತೆಆಯಿತು. ತಾವುಕಟ್ಟಿಕೊಂಡಿದ್ದ ಕನಸು ನುಚ್ಚು ನೂರಾಯಿತು. ಮಗ ಎಲ್ಲಿ ಕೈ ಬಿಟ್ಟು ಹೋಗುತ್ತಾನೋ. ಕುಟುಂಬದಘನತೆ, ಗೌರವಈತನಕಾರಣದಿಂದಎಲ್ಲಿ ಮಣ್ಣು ಪಾಲಾಗುತ್ತದೆಯೋ ಎಂದು ಆತಂಕಗೊಂಡು ಅತಾಶೆಯಿಂದಲೇ ಕುಸಿದು ಹೋದರು. ಇದುವರೆಗೂ ತಮ್ಮ ಮುದ್ದು ಮಗನ ಮೇಲೆ ಕೈ ಮಾಡದ, ಕಿಂಚಿತ್ತು ಕೋಪಿಸಿಕೊಳ್ಳದ ತಂದೆಗೆ ಈ ಉದ್ವೇಗ, ಆವೇಶಗಳನ್ನುತಡೆದುಕೊಳ್ಳಲು ಆಗಲಿಲ್ಲ. ಪರಿಣಾಮ ವಯಸ್ಸಿಗೆ ಬಂದ ಮಗನ ಮೇಲೆ ಮನಸ್ಸೋ ಇಚ್ಛೆ ಥಳಿಸಿ ಬಿಟ್ಟರು.ಅತ್ತುಕರೆದರು.
ಕೊನೆಗೆ ಬುದ್ದಿ ಮಾತು ಹೇಳಿ ಸರಿದಾರಿಗೆತರಲುತಂದೆ, ತಾಯಿ ತೀರ್ಮಾನಿಸಿದರು. ಆದರೆ ಬುದ್ದಿವಾದದ ಮಾತುಆತನ ಕಿವಿಗಳನ್ನು ತಾಗಲಿಲ್ಲ. ತಂದೆ, ತಾಯಿಯಕಣ್ಣಿರಿಗೆ ವಿಜಯ್ ಮನಸ್ಸುಕಿಂಚಿತ್ತುಕರಗಲಿಲ್ಲ. ಆ ಕ್ಷಣಕ್ಕೆತಂದೆ, ತಾಯಿಯ ಮಾತಿಗೆ ತಲೆಯಾಡಿದಸಿದ ವಿಜಯ್, ಮರುಕ್ಷಣವೆಕುಡಿದು ಬೀದಿಯಲ್ಲಿ ಬಿದ್ದಿದ್ದ. ಮಗನ ಈ ಸ್ಥಿತಿಯ ಸುದ್ದಿ ಸಮಾಚಾರ ಬಂಧು, ಬಳಗ, ವಿಜಯ್‌ತಂದೆಯಸ್ನೇಹಿತರನ್ನು ಬಹುಬೇಗ ಮುಟ್ಟಿತು. ಈ ಸಂಗತಿ ವಿಜಯ್‌ತಂದೆಯನ್ನು ಮತ್ತಷ್ಟು ಕುಗ್ಗಿಸಿ ಕಂಗೆಡಿಸಿತು. ಅವಮಾನ ತಾಳಲಾರದೆ ವಿಜಯ್‌ತಂದೆ ನೊಂದು, ಬೆಂದು ಹೋದರು.
ಎತ್ತಾಡಿಸಿದ ಮುದ್ದುಮಗನಿಂದ ಈ ರೀತಿಯ ಅವಮಾನಗಳನ್ನು ನಿರೀಕ್ಷೆ ಮಾಡದ ವಿಜಯ್‌ತಂದೆ, ಇದಕ್ಕೆ ಈಗಲೇ ಕಡಿವಾಣ ಹಾಕಬೇಕು. ಈಗ ಎಚ್ಚೆತ್ತುಕೊಳ್ಳದಿದ್ದರೆ ಮಗ ಕೈ ಬಿಟ್ಟು ಹೋಗುವುದು ಶತ ಸಿದ್ಧ ಎಂದು ಮನಗಂಡು,ವಿಜಯ್‌ನನ್ನು ಬೆಂಗಳೂರಿನಲ್ಲಿ ತಮಗೆಗೊತ್ತಿದ್ದಒಂದು ಪುನರ್ವಸತಿಕೇಂದ್ರಕ್ಕೆದಾಖಲು ಮಾಡಿಚಿಕಿತ್ಸೆಕೊಡಿಸಲು ಮುಂದಾದರು. ಆದರೆ ಮಗನ ಚಿಂತೆಯಿಂದಲೇ ದಿನದಿಂದ ದಿನಕ್ಕೆ ಕುಗ್ಗುತ್ತ ಹೋದರು. ಪರಿಣಾಮತಮ್ಮ ಕೆಲಸದಕಡೆಗೆ ಗಮನ ಕೊಡಲುಅವರಿಗೆಸಾಧ್ಯವಾಗಲಿಲ್ಲ. ಇದರಿಂದಉದ್ಯಮದಲ್ಲೂಕೂಡ ನಷ್ಟವಾಯಿತು. ಕಂಪನಿಯ ಶೇರುಗಳು ಕುಸಿಯುವ ಹಂತಕ್ಕೆ ಬಂತು. ಇದೆಲ್ಲವನ್ನು ಮನಸ್ಸಿಗೆ ಹಚ್ಚಿಕೊಂಡ ವಿಜಯ್‌ತಂದೆನಾನಾ ಆರೋಗ್ಯ ಕಾರಣಗಳಿಂದಕೊನೆಗೆ ಹಾಸಿಗೆ ಹಿಡಿದು ಬಿಟ್ಟರು.
ಅವರನ್ನುಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಕೊಡಿಸಲಾಯಿತು.ಆಸ್ಪತ್ರೆಗೆ ಸೇರಿದ ದಿನದಿಂದಲೂತಂದೆಗೆ ಮಗನನ್ನು ನೋಡಬೇಕುಎನ್ನುವುದು ಬಿಟ್ಟರೆ ಮತ್ತ್ಯಾವುದೇ ಬಯಕೆಗಳು ಇರಲಿಲ್ಲ.ಪಕ್ಕದಲ್ಲೇಇದ್ದತನ್ನ ಮಡದಿಗೆ ಮಗನನ್ನು ನೋಡುವ ಬಯಕೆಯನ್ನು ವ್ಯಕ್ತಪಡಿಸಿದರು. ಆದರೆ ಆಕೆ “ನೀವು ಏನೂ ಯೋಚನೆ ಮಾಡಬೇಡಿ !ಆರೋಗ್ಯದಲ್ಲಿ ಚೇತರಿಸಿಕೊಳ್ಳಿ, ಹುಷಾರಾದ ಬಳಿಕ ನಾವೇ ಆ ಪುನರ್ವಸತಿಕೇಂದ್ರಕ್ಕೆ ಹೋಗಿ ನೋಡಿಕೊಂಡು ಬರೋಣಾಎಂದು ಸಮಾಧಾನದ ಮಾತುಗಳನ್ನು ಹೇಳಿ ಸುಮ್ಮನಿರಿಸಿದರು. ಆದರೆ ವಿಜಯ್‌ತಂದೆಗೆ ಮಗನನ್ನು ನೋಡಬೇಕುಎನ್ನುವ ಇಚ್ಛೆ ಯಾವ ಮುನ್ಸೂಚನೆಯೋ ನಿಜಕ್ಕೂಗೊತ್ತಿಲ್ಲ.ಮಗನನ್ನು ನೋಡಬೇಕುಎಂದು ಕನವರಿಸಿಕೊಂಡೆ ಚಿಕಿತ್ಸೆಗೆ ಸ್ಪಂದಿಸದೆ ಕೋಮಕ್ಕೆ ಹೋಗಿಬಿಟ್ಟರು.
ಕೊನೆಗೆಮಗ ಬಂದುಕರೆದರೆಅವನ ಕೂಗಿಗೆಎಚ್ಚರಗೊಳ್ಳಬಹುದೇನೋ !ಮಗ ಕುಡಿಯುವುದನ್ನು ಬಿಟ್ಟು ಬದಲಾಗುತ್ತೇನೆಎಂದುಒಂದು ಮಾತು ಹೇಳಿದರೆ. ಆರೋಗ್ಯದಲ್ಲಿ ಚೇತರಿಸಿಕೊಂಡು ಹುಷಾರಾಗಬಹುದೆನೋಎನ್ನುವ ಆಶಾ ಭಾವನೆಯಿಂದಪುನರ್ವಸತಿಕೇಂದ್ರದಲ್ಲಿದ್ದ ವಿಜಯ್‌ನನ್ನುಅಲ್ಲಿಂದಸೀದಾ ಆಸ್ಪತ್ರೆಗೆಕರೆದುಕೊಂಡು ಬಂದರುತಾಯಿಯಕಡೆಯವರು.ತನ್ನತಂದೆಯ ಸ್ಥಿತಿಯ ಬಗ್ಗೆ ಕಿಂಚಿತ್ತೂ ಮಾಹಿತಿಇಲ್ಲದೆಇದ್ದಿದ್ದ ವಿಜಯ್, ಆಸ್ಪತ್ರೆಯ ಐಸಿಯುನಲ್ಲಿ ಮಲಗಿದ್ದತಂದೆಯನ್ನು ನೋಡಿ ಕಂಗಾಲಾಗಿ ಹೋದನು.ಅಪ್ಪನ ಈ ದುಸ್ಥಿತಿಯನ್ನು ಕಂಡುಅವರನ್ನು ಬಿಗಿದಪ್ಪಿ ಬಿಕ್ಕಿ, ಬಿಕ್ಕಿ ಅತ್ತನು, ಗೋಳಾಡಿದನು. ಆಕ್ರಂಧಿಸಿದನು. “ಅಪ್ಪಒಂದು ಬಾರಿ ಎದ್ದಳಪ್ಪ ಇನ್ನೆಂದುಕುಡಿಯುವುದಿಲ್ಲ. ನೀನು ಹೇಳಿದಂತೆ ಕೇಳಿಕೊಂಡು ಹೋಗುತ್ತೇನೆಎಂದುಅಂಗಲಾಚಿದನು. ಆದರೆಮಗನ ವ್ಯಾಕುಲತೆತಂದೆಸ್ಪಂದಿಸಲಿಲ್ಲ.ಜೀವಇದ್ದರೂ ಎದ್ದೇಳಲಿಲ್ಲ. ದುರ್ವಿಧಿ, ಕೋಮದಲ್ಲಿದ್ದತನ್ನತಂದೆವಾರತುಂಬುವ ವೇಳೆಗೆ ಆ ಸ್ಥಿತಿಯಲ್ಲೇ ಅದೃಶರಾಗಿ ಹೋಗಿದ್ದರು.
ಯಾವಾಗ ವಿಜಯ್‌ತಂದೆತೀರಿಕೊಂಡರೋ ಆ ದಿನವೇ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿಯೂಕೂಡ ಸತ್ತು ಹೋಗಿತ್ತು. ಮನೆಯ ಸದಸ್ಯರುಜೀವಂತ ಶವವಾಗಿಬಿಟ್ಟರು. ವಿಜಯ್‌ಅಂತೂಅತಾಶೆ, ಪಶ್ಯಾತಾಪಗಳಿಂದ ಬೆಂದುಹೋದ. ನಾನು ಸರಿಯಾಗಿದ್ದರೆ ನನ್ನ ತಂದೆಇಂದುಜೀವಂತವಾಗಿಇರುತ್ತಿದ್ದರುಎಂದುಒಬ್ಬನೆ ಬಿಕ್ಕಿ, ಬಿಕ್ಕಿ ಅಳುತ್ತಿದ್ದ. ತಂದೆಯನ್ನು ಕಳೆದುಕೊಂಡ ಮೇಲಾದರೂ ವಿಜಯ್‌ಕುಡಿತದಚಟವನ್ನು ಬಿಡುತ್ತಾನೆ. ಹೊಸ ಮನುಷ್ಯನಾಗಿ ಬದಲಾಗುತ್ತಾನೆಎಂದು ಎಷ್ಟೋ ನಿರೀಕ್ಷೆಇಟ್ಟುಕೊಂಡಿದ್ದರು. ಆದರೆ ವಿಜಯ್ ಈ ಹಂತದಲ್ಲಿ ಮತ್ತೊಂದು ಅವಾಂತರ ಮಾಡಿಕೊಂಡಿದ್ದ.
ಕುಡಿತದಚಟದಿಂದ ಈಗಾಗಲೇ ತನ್ನದೈಹಿಕ, ಮಾನಸಿಕ, ಭಾವನಾತ್ಮಕಆರೋಗ್ಯವನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದ ವಿಜಯ್, ತನ್ನತಂದೆಯ ಸಾವಿನಿಂದಜೀವನದಲ್ಲಿಜಿಗುಪ್ಸೆಗೊಂಡುಮತ್ತೊಂದು ನಶೆಗೆ ಕೈಚಾಚಿದ್ದ. ತಂದೆಯ ಅಗಲಿಕೆ ನೋವನ್ನು ತಾಳಲಾರದೆ, ಆ ನೋವನ್ನು ಮರೆಯಲುಗಾಂಜಾದ ವ್ಯಸನಕ್ಕೆದಾಸನಾಗಿಬಿಟ್ಟಿದ್ದ. ವಿಜಯ್‌ಒಂದು ಸಾರಿ ಮನೆಯಿಂದ ಹೊರಗೆ ಹೋದರೆ ಮತ್ತೆ ಬರುತ್ತಿದ್ದದ್ದು ವಾರಗಟ್ಟಲೆಆಗುತ್ತಿತ್ತು. ಮಲಗಲು ಸೂರಿಲ್ಲ. ತಿನ್ನಲುಅನ್ನವಿಲ್ಲ. ಹಾಕಲು ಬಟ್ಟೆಇಲ್ಲ. ಹುಚ್ಚನಂತೆ ಬೀದಿ, ಬೀದಿ ಅಲೆದ. ಈ ವೇಳೆಗಾಗಲೇ ಬೆಂಗಳೂರಿನ ಕರಾಳ ರಾತ್ರಿಯ ದಿನಗಳು ವಿಜಯ್‌ನನ್ನು ಆಕರ್ಷಿಸಿ ಮತ್ತಷ್ಟು ಹಾಳು ಮಾಡಿತು. ಗಾಂಜಾ ಸೇದಲು ಹಣವಿಲ್ಲದೆ ವಿಜಯ್,ಅಡ್ಡದಾರಿಹಿಡಿದುಬಿಟ್ಟ. ಗಾಂಜಾ ಸೇವನೆ ಕಾರಣದಿಂದಎರಡು ಬಾರಿಜೈಲುವಾಸವನ್ನೂ ಅನುಭವಿಸಿದ. ಸುಖದ ಸುಪ್ಪತ್ತಿಗೆಯಲ್ಲಿ ಬೆಳೆದ ವಿಜಯ್, ತನ್ನ ಸ್ಥಿತಿಯನ್ನು ತಾನೇಕಂಡುರೋಧಿಸುತ್ತಿದ್ದ.
ವ್ಯಸನಕ್ಕೆದಾಸರಾದವರಿಗೆ ಹುಚ್ಚು, ಜೈಲು, ಸಾವು ಖಚಿತಎನ್ನುವುದು ಈ ಕ್ಷೇತ್ರದಲ್ಲಿಜನಜನಿತ. ಈ ಮೂರರಲ್ಲಿ ವಿಜಯ್‌ಎರಡನ್ನು ಹೀಗಾಗಲೇ ಅನುಭವಿಸಿದ್ದ. ತನ್ನ ಸ್ಥಿತಿಯನ್ನು ಕಂಡುತಾನೇ ಬೇಸತ್ತು ಹೋಗಿದ್ದ. ವಿಜಯ್‌ಜೀವನದಲ್ಲಿಕೊನೆಗೂಬದಲಾವಣೆಯಾಗಬೇಕೆಂದು ಬಯಸಿದ. ‘ತನ್ನನ್ನುಕಾಪಾಡು ಭಗವಂತಎಂದುದೇವರಲ್ಲಿಕಣ್ಣೀರಿನಕೋಡಿ ಹರಿಸಿದ. ಬದಲಾಗಲುಒಮ್ಮೆ ನನಗೆ ಅವಕಾಶ ಮಾಡಿಕೊಡುಎಂದು ಪರಿಪರಿಯಾಗಿ ಬೇಡಿಕೊಂಡ. ಕೊನೆಗೂ ಭಗವಂತ ಅವನ ಕಣ್ಣೀರು, ಪಶ್ಚಾತಾಪಗಳಿಗೆಕಣ್ಣು ಬಿಟ್ಟ. ವಿಜಯ್ ತೊಳಲಾಟ, ಅವಸ್ಥೆಯನ್ನು ನೋಡಲಾದ ಹೆತ್ತ ಕರುಳು,ವಿಜಯ್‌ನನ್ನು ಬಸವಮಾರ್ಗ ವ್ಯಸನಮುಕ್ತ ಮತ್ತು ಪುನರ್ವಸತಿಕೇಂದ್ರಕ್ಕೆಚಿಕಿತ್ಸೆಗೆಂದುದಾಖಲು ಮಾಡಿದರು. ಈ ಪುನರ್ವಸತಿಕೇಂದ್ರದಲ್ಲಿ ಸುಧೀರ್ಘವಾಗಿಚಿಕಿತ್ಸೆ ಪಡೆದ ವಿಜಯ್. ದೈಹಿಕ, ಮಾನಸಿಕ ಮತ್ತು ಭಾವನಾತ್ಮಕವಾಗಿ ಹಂತ, ಹಂತವಾಗಿ ಹೊಸ ಮನುಷ್ಯನಾಗಿ ಬದಲಾವಣೆಯಾದ. ತನ್ನಚಿಕಿತ್ಸೆಯ ಸಮಯದಲ್ಲಿ ಸರಿಯಾದ ಮನಃಪರಿವರ್ತನೆ ಮಾಡಿಕೊಂಡ. ಬಸವಮಾರ್ಗದಲ್ಲಿ ಸಿಗುತ್ತಿದ್ದ ಚಿಕಿತ್ಸೆಯನ್ನು ಸದ್ಬಳಕೆ ಮಾಡಿಕೊಂಡ.ದೈಹಿಕ ಹಾಗೂ ಮಾನಸೀಕವಾಗಿಯೂ ವಿಜಯ್ ಸದೃಢಗೊಂಡುಇಲ್ಲಿಂದ ಹೊಸ ಕನಸು, ನಂಬಿಕೆಗಳೊಂದಿಗೆ ಸಮಾಜಕ್ಕೆಕಾಲಿಟ್ಟ.
ಅದರಂತೆ ಈಗ ನಮ್ಮ ವಿಜಯ್‌ಕೆಲವೇ ವರ್ಷದಲ್ಲಿಒಬ್ಬ ಯಶಸ್ವಿ ಉದ್ಯಮಿಯಾಗಿ ನಮ್ಮಕಣ್ಣ ಮುಂದೆಉದಾಹರಣೆಯಾಗಿ ನಿಂತಿದ್ದಾನೆ. ತನ್ನಕಾರಣದಿಂದ ಪಾತಾಳ ಬಿದ್ದಿದ್ದಕಂಪನಿಯಉಸ್ತುವಾರಿಯನ್ನು ವಹಿಸಿಕೊಂಡು, ಹಗಲು, ಇರುಳು ಎನ್ನದೆ ಶ್ರಮಿಸಿ ಕಂಪನಿಯನ್ನು ಮೇಲಕ್ಕೆ ಎತ್ತಿದ್ದಾನೆ. ತನ್ನತಂದೆಯ ಆಸೆಯಂತೆ ಕಂಪನಿಯನ್ನು ೧೦೦ ಪಟ್ಟು ವಿಸ್ತಾರ ಮಾಡಿದ್ದಾನೆ ವಿಜಯ್. ಅಕ್ಕನಿಗೆ ಈತನೆ ಮುಂದೆ ನಿಂತು ಮದುವೆ ಮಾಡಿದ್ದಾನೆ. ತಾಯಿಯನ್ನುಚೆನ್ನಾಗಿ ನೋಡಿಕೊಳ್ಳುತ್ತಿದ್ದಾನೆ. ಹೆಂಡತಿ, ಮಕ್ಕಳೊಂದಿಗೆ ವಿಜಯ್‌ಜೀವನದಲ್ಲಿತುಂಬಾಚೆನ್ನಾಗಿಇದ್ದಾನೆ. ವಿಜಯ್ ವ್ಯಸನ ತ್ಯೆಜಿಸಿದ ಮೇಲೆ ಆತನ ಬಾಳಲ್ಲಿ ಈಗ ಸುಖ, ಶಾಂತಿ, ನೆಮ್ಮದಿ ನೆಲೆಸಿದೆ. ಆದರೆ ನನ್ನನ್ನು ಸ್ಥಾನದಲ್ಲಿ ನೋಡಬೇಕೆಂದುಕೊಂಡಿದ್ದಅಪ್ಪ ಮಾತ್ರಇಲ್ಲಎಂದುಯಾವಾಗಾಲುಪಶ್ಚಾತಾಪ ಪಡುತ್ತಲೆಇರುತ್ತಾನೆ. ವಿಜಯ್ ಮಾಡಿದ ತಪ್ಪುಗಳನ್ನು ನೀವು ಮಾಡಬೇಡಿ !

ಎಸ್.ಬಸವರಾಜು
ಸಂಸ್ಥಾಪಕರು
ಬಸವಮಾರ್ಗ ವ್ಯಸನಮುಕ್ತ ಮತ್ತು ಪುನರ್ವಸತಿ ಕೇಂದ್ರ
ಮೈಸೂರು