ಡಾ.ಬಿ.ಆರ್.ಅಂಬೇಡ್ಕರ್, ಸಾವಿತ್ರಿಬಾಫುಲೆ ಮಹಿಳಾ ಸಬಲೀಕರಣಕ್ಕೆ  ಭದ್ರ ಬುನಾದಿ: ಸಿ.ಪುಟ್ಟರಂಗಶೆಟ್ಟಿ

ಚಾಮರಾಜನಗರ:  ಡಾ.ಬಿ.ಆರ್.ಅಂಬೇಡ್ಕರ್ ಹಾಗೂ  ಸಾವಿತ್ರಿ ಬಾಫುಲೆ ಅವರು  ಮಹಿಳಾ ಸಬಲೀಕರಣಕ್ಕಾಗಿ ಒತ್ತು ನೀಡಿದರು
ಎಂದು ಎಂಎಸ್ಐಎಲ್ ಅಧ್ಯಕ್ಷರು, ಶಾಸಕರಾದ ಸಿ.ಪುಟ್ಟರಂಗಶೆಟ್ಟಿ ಹೇಳಿದರು.
ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಚಾಮರಾಜನಗರ ತಾಲೂಕು ಹಾಗೂ ಜಿಲ್ಲಾ ಘಟಕದ ವತಿಯಿಂದ ನಡೆದ  ಮಹಿಳಾ ದಿನಾಚರಣೆ ಹಾಗೂ ಸಾವಿತ್ರಿಬಾಯಿ  ಪುಲೆ ಜಯಂತಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಸಾವಿತ್ರಿಬಾಫುಲೆ ಪತಿ ಜ್ಯೋತಿಬಾ ಫುಲೆ ಅವರೊಂದಿಗೆ ಸೇರಿ 1848ರಲ್ಲಿ ಪುಣೆಯಲ್ಲಿ ಬಾಲಕಿಯರಿಗಾಗಿ ಮೊದಲ ಶಾಲೆ ಸ್ಥಾಪಿಸಿದರು. ಜಾತಿ, ಲಿಂಗ ತಾರತಮ್ಯದ ವಿರುದ್ಧ ಹೋರಾಡಿದರು. ಅದೇ ರೀತಿಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಭಾರತೀಯ ಮಹಿಳೆಯರ ಹಕ್ಕುಗಳು, ಶಿಕ್ಷಣ ಮತ್ತು ಸಮಾನತೆಗಾಗಿ ಅವಿರತವಾಗಿ ಶ್ರಮಿಸಿದ ಮಹಾನ್ ಸುಧಾರಕರು. ಹಿಂದೂ ಕೋಡ್ ಬಿಲ್ ಮೂಲಕ ಆಸ್ತಿ ಮತ್ತು ವಿಚ್ಛೇದನದ ಹಕ್ಕು, ಸಂವಿಧಾನದಲ್ಲಿ ಲಿಂಗ ಸಮಾನತೆ, ಹೆರಿಗೆ ಭತ್ಯೆ, ಮತ್ತು ಶಿಕ್ಷಣದ ಮೂಲಕ ಮಹಿಳಾ ಸಬಲೀಕರಣಕ್ಕೆ ಅವರು ಭದ್ರ ಬುನಾದಿ ಹಾಕಿದರು ಎಂದರು.
  ಸಾವಿತ್ರಿಬಾಯಿ ಫುಲೆ,  ಡಾ. ಬಿ.ಆರ್ .ಅಂಬೇಡ್ಕರ್ ಅವರಂಥವರು ಪ್ರೇರಣೆ ಅಂದಿನ ಕಷ್ಟದ ಪರಿಸ್ಥಿತಿಯಲ್ಲೇ ಸಾವಿತ್ರಿಬಾಯಿ ಪುಲೆ ಅವರು ಶಿಕ್ಷಣ ನೀಡಲು ಮುಂದಾಗಿದ್ದರು ಇಂದು ಸಾವಿರಾರು ಶಿಕ್ಷಕಿಯರಿದ್ದು ಗುಣಮಟ್ಟದ ಶಿಕ್ಷಣ ಮಕ್ಕಳಿಗೆ ದೊರೆಯಲು ತಾವು ಬದ್ಧತೆಯಿಂದ ಪರಿಣಾಮಕಾರಿಯಾಗಿ ಬೋಧನೆ ನೀಡಬೇಕು ಎಂದು ತಿಳಿಸಿದರು.
ಈ ನಿಟ್ಟಿನಲ್ಲಿ ಸಂಘ ಶಿಕ್ಷಕಿಯರಿಗೆ ಸಾವಿತ್ರಿಬಾಯಿ ಪುಲೆ ಹೆಸರಿನಲ್ಲಿ ಪ್ರಶಸ್ತಿ ನೀಡುತ್ತಿರುವುದು  ಶ್ಲಾಘನೀಯ ವಿಚಾರವಾಗಿದೆ ಎಂದು ಮೆ
ಚ್ಚುಗೆಯಾಗಿದೆ ವ್ಯಕ್ತಪಡಿಸಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ. ಅಶ್ವಿನಿ ಆರ್. ಎಸ್. ಮುಖ್ಯಭಾಷಣಕಾರರಾಗಿ  ಭಾಗವಹಿಸಿ ಮಾತನಾಡಿ,ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಗೆ ಸಮಾನ ಅವಕಾಶಗಳನ್ನು ನೀಡ ಬೇಕು. ಅಂತರ ರಾಷ್ಟ್ರೀಯ ಮಹಿಳಾ ದಿನ ಕೇವಲ ಸಂಭ್ರಮದ ದಿನವಾಗದೆ ಮಹಿಳೆ ಬೆಳೆದುಬಂದ ಕ್ರಾಂತಿಕಾರಿ ಹೋರಾಟದ ಸ್ಮರಣೆಯಾಗ ಬೇಕು. ಈ ಹಿನ್ನೆಲೆಯಲ್ಲಿ ಪ್ರಸ್ತುತ ಕಾರ್ಯಕ್ರಮ ಮಾತೆ ಸಾವಿತ್ರಿಬಾಫುಲೆ ಉತ್ತಮ ಶಿಕ್ಷಕಿ ಪ್ರಶಸ್ತಿ ಪ್ರಧಾನ ಸಮಾರಂಭ ಅರ್ಥಪೂರ್ಣವಾಗಿ ಮೂಡಿ ಬಂದಿದೆ. ಜೊತೆಗೆ ಸಾವಿತ್ರಿ ಬಾಫುಲೆ ಅವರ ಜನ್ಮದಿನವೂ ಈ ಸಂದರ್ಭದಲ್ಲಿ ಸಾರ್ಥಕ ಆಚರಣೆಯಾಗಿದೆ ಎಂದರು.
    ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹದೇವಸ್ವಾಮಿ ಪ್ರಸ್ತಾವಿಕ ಮಾತನಾಡಿ ಶಿಕ್ಷಕರ ಸಂಘವು ಪ್ರತಿ ವರ್ಷವೂ ಸಾವಿತ್ರಿಬಾಯಿ ಫುಲೆ ಹಾಗೂ ಮಹಿಳಾ ದಿನಾಚರಣೆಯನ್ನು ಸಂಘಟಿಸಿ ಉತ್ತಮ ಮಹಿಳಾ ಶಿಕ್ಷಕಿಯರಿಗೆ ಸಾವಿತ್ರಿಬಾಯಿ ಫುಲೆ ಹೆಸರಿನಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ ಸಂಘವು ಶಿಕ್ಷಕರ ಸಮಸ್ಯೆಗಳಿಗೆ ಸದಾ ಧ್ವನಿಯಾಗಿ ನಿಲ್ಲಲಿದೆ ಎಂದು ತಿಳಿಸಿದರು
   ಪ್ರಶಸ್ತಿ ಪ್ರದಾನ: 30 ಮಂದಿ ಶಿಕ್ಷಕಿಯರಿಗೆ ಮಾತೆ ಸಾವಿತ್ರಿಬಾಯಿ ಪುಲೆ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು
    ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘದ ಜಿಲ್ಲಾಧ್ಯಕ್ಷೆ ಡಾ ರೇಣುಕಾದೇವಿ, ಕಾರ್ಯದರ್ಶಿ ಭರತ್ ಭೂಷಣ್,  ಖಜಾಂಚಿ ಶಿವಕುಮಾರಯ್ಯ,  ಹಿರಿಯ ಉಪಾಧ್ಯಕ್ಷ ಎಂ.ಡಿ.ಮಹದೇವಯ್ಯ, ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಸಿ. ಕೆ .ರಾಮಸ್ವಾಮಿ ಕಾರ್ಯದರ್ಶಿ ಸುಧಾ ಎನ್, ಪದಾಧಿಕಾರಿಗಳಾದ ಬಿ. ಕೃಷ್ಣಮೂರ್ತಿ, ಸವಿತಾ ರಾಣಿ ಎಸ್‌.ಜಿ .ರಾಜು, ಧನಂಜಯ, ಎಂ.  ಶಿವಕುಮಾರ್ ,ಸಮಿವುಲ್ಲಾ, ರಾಜು ಎಸ್ ಬಿ
ಶಬಾನಾ ಅಂಜುಮ್, ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ
ಸಂಘದ ಜಿಲ್ಲಾಧ್ಯಕ್ಷ ಸಿ.ಎನ್. ಭವಾನಿದೇವಿ, ಕಾರ್ಯದರ್ಶಿ ಸುಶೀಲಾ ಸಿಎಂ,
ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಮಹದೇವಮೂರ್ತಿ ಕಾರ್ಯದರ್ಶಿ ಶಿವನಂಜಯ್ಯ, ಸೋಮಶೇಖರ್ ,ಶ್ವೇತ, ಮಮತ, ನಂಜುಂಡಸ್ವಾಮಿ, ಲತಾ ಹಾಗೂ ಬಿ ಆರ್ ಪಿ, ಸಿ.ಆರ್ ಪಿ ಗಳು, ಇತರರು ಹಾಜರಿದ್ದರು.

Leave a Reply

Your email address will not be published. Required fields are marked *