ಚಾಮರಾಜನಗರ : ಡಾ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಗಾನ ಗಾಂಧರ್ವ ಸಾಂಸ್ಕೃತಿಕ.. ಕಲಾ ವೇದಿಕೆ, ರೋಟರಿ ಸಂಸ್ಥೆಯಿಂದ ಕನ್ನಡ ರಾಜ್ಯೋತ್ಸವ, ಅಭಿನಂದನಾ ಸಮಾರಂಭ ಬಹಳ ವಿಜೃಂಭಣೆಯಿಂದ ನಡೆಯಿತು.
ನಗರದ ರೋಟರಿ ಭವನದಲ್ಲಿ ನಡೆದ ಕಾರ್ಯಕ್ರಮವನ್ನು ರೋಟರಿ ಸಂಸ್ಥೆ ಅಧ್ಯಕ್ಷ ಕಾಗಲವಾಡಿಚಂದ್ರು ಉದ್ಘಾಟಿಸಿ ಮಾತನಾಡಿ, ಕನ್ನಡ ರಾಜ್ಯೋತ್ಸವ ನಿತ್ಯೋತ್ಸವ ಆಗಬೇಕು, ಗಡಿಜಿಲ್ಲೆಯಲ್ಲಿ ಕನ್ನಡ ಗಟ್ಟಿಯಾಗಿರಲು ಕನ್ನಡ ಚಳವಳಿಗಾರ ವಾಟಾಳ್ ನಾಗರಾಜ್, ಕನ್ನಡಪರ ಹೋರಾಟಗಾರರು ಕಾರಣ ಎಂದರು.
ಅಂತರಾಷ್ಟ್ರೀಯ ಜಾನಪದ ಗಾಯಕ ಸಿ.ಎಂ.ನರಸಿಂಹಮೂರ್ತಿ ಮಾತನಾಡಿ, ನ.1 ರಂದು ರಾಜ್ಯಾದ್ಯಂತ ಸಂಭ್ರಮ, ಸಡಗರದಿಂದ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುತ್ತಿದ್ದು. ಗಡಿಜಿಲ್ಲೆಯಲ್ಲೂ ಅತ್ಯಂತ ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದೆ. ನವೆಂಬರ್ ಮಾಸದಲ್ಲಿ ನಿರಂತರವಾಗಿ ಕನ್ನಡ ರಾಜ್ಯೋತ್ಸವ ಹಬ್ಬ ಮಾದರಿ ಆಚರಣೆ ಮಾಡಲಾಗುತ್ತಿದೆ ಎಂದರು.
ಕರ್ನಾಟಕ ಸೇನಾಪಡೆ ಅಧ್ಯಕ್ಷ ಚಾ.ರಂ.ಶ್ರೀವಿವಾಸಗೌಡ ಮಾತನಾಡಿ, ರಾಜ್ಯದಲ್ಲಿ 19 ಗಡಿಜಿಲ್ಲೆಗಳಿದ್ದು, ಅದರಲ್ಲಿ ಕನ್ನಡ ಒಳ್ಳೆಯ ಸ್ಥಿತಿಯಲ್ಲಿರುವುದು ಚಾಮರಾಜನಗರ ಜಿಲ್ಲೆಯಲ್ಲಿ ಮಾತ್ರ. ಅದಕ್ಕೆ ಪ್ರಮುಖ ಕಾರಣ ಇಲ್ಲಿಯ ಕನ್ನಡ ಚಳವಳಿ ಹೋರಾಟಗಾರರು, ತಾಳವಾಡಿ ಮಹಾಜನ ವರದಿ ಪ್ರಕಾರ ಕರ್ನಾಟಕಕ್ಕೆ ಸೇರಬೇಕಿತ್ತು. ಅದಕ್ಕಾಗಿ ವಾಟಾಳ್ ನಾಗರಾಜ್ ಅವರು ಹೋರಾಟ ಮಾಡಿದ್ದರು. ಅದರ ಹೋರಾಟ ಫಲವಾಗಿ ಈ ಭಾಗದಲ್ಲಿ ಕನ್ನಡ ಗಟ್ಟಿಯಾಗಿದೆ’ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಮಾಜ ಸೇವಕ ಶ್ರೀನಿಧಿಕುದರ್ ಮಾತನಾಡಿ, ಕನ್ನಡ ರಾಜ್ಯೋತ್ಸವ ಕನ್ನಡಿಗರ ಆಸ್ಮಿತೆಯ ಹಬ್ಬವಾಗಿದ್ದು, ಕನ್ನಡಿಗರ ಅಸ್ಮಿತೆಯ ಸಂಕೇತವಾಗಿದೆ.ಕನ್ನಡ ರಾಜ್ಯೋತ್ಸವ ಕರ್ನಾಟಕದ ಏಕೀಕರಣವನ್ನು ಸಂಭ್ರಮಿಸುವ ಮತ್ತು ಕನ್ನಡಿಗರ ಭಾಷೆ, ಸಂಸ್ಕೃತಿ, ಪರಂಪರೆಯನ್ನು ಗೌರವಿಸುವ ಒಂದು ಪ್ರಮುಖ ಹಬ್ಬವಾಗಿದೆ’ ಎಂದರು.
ಡಾ. ಎಸ್ ಪಿ ಬಾಲಸುಬ್ರಮಣ್ಯ ಗಾನಗಂಧರ್ವ ಸಾಂಸ್ಕೃತಿಕ ಕಲಾ ವೇದಿಕೆ ಅಧ್ಯಕ್ಷ ಹೊಸೂರು ಶಿವಣ್ಣ ಮಾತನಾಡಿ, ವಿಶ್ವದ ಅತ್ಯಂತ ಗಾಯಕ ಎಸ್ ಪಿ ಬಾಲಸುಬ್ರಮಣ್ಯ ಅವರ ಹೆಸರಿನಲ್ಲಿ ಹಲವಾರು ವರ್ಷಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆ. ಹಲವಾರು ಜನಪರ ಸಮಾಜ ಸೇವೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದ್ದೇವೆ ಎಂದು ತಿಳಿಸಿದರು.
ಭುವನೇಶ್ವರಿ ಭಾವಚಿತ್ರಕ್ಕೆ ರಾಮಸಮುದ್ರ ಕೆಇಬಿ ಶಾಖೆ ಕಿರಿಯ ಇಂಜಿನಿಯರ್ ಎಸ್ ಮಂಜುನಾಥ್ ಪುಷ್ಪಾರ್ಚನೆ ಮಾಡಿದರು. ಎಸ್ ಪಿ ಬಾಲಸುಬ್ರಮಣ್ಯ ಭಾವಚಿತ್ರಕ್ಕೆ. ಚಾಮರಾಜನಗರ ಕೆಇಬಿ ಲೆಕ್ಕಪರಿಶೋಧಕ ಎನ್ ಮಹೇಶ್ ಪುಷ್ಷಾರ್ಚನೆ ಮಾಡಿದರು.
ಸನ್ಮಾನ: ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಸಾಧಕನ್ನು ಸನ್ಮಾನಿಸಲಾಯಿತು
ಕಾರ್ಯಕ್ರಮದಲ್ಲಿ ಚಾಮರಾಜನಗರ ಕೆಇಬಿ ಸಹಾಯಕ ಇಂಜಿನಿಯರ್ ಸಿದ್ದರಾಜು, ಕಲಾವೇದಿಕೆಯ ಗೌರವಾಧ್ಯಕ್ಷ ಸುರೇಶ್ ಗೌಡ, ಅಧ್ಯಕ್ಷ ಶಿವು, ಪ್ರಧಾನ ಕಾರ್ಯದರ್ಶಿ ಎನ್ ಜೋಸೆಫ್
ಸಂಘಟನಾ ಕಾರ್ಯದರ್ಶಿ ಬಂಗಾರು, ಉಪಾಧ್ಯಕ್ಷೆ ವಸಂತಮ್ಮ, , ಪಣ್ಯದಹುಂಡಿ ರಾಜು, ಜಿ.ಪಂ.ಮಾಜಿ ಅಧ್ಯಕ್ಷೆ ಕಾವೇರಿ ಶಿವಕುಮಾರ್, ಜಿ.ಬಂಗಾರು, ಕಲೆ ನಟರಾಜು, ಭಾಗ್ಯಮ್ಮ ಡಾ.ನಂಜರಾಜ್, ರಾಜೇಶ್ವರಿ, ಪ್ರಕೃತಿ,ಶಂಕರ್ ಇತರರ ಹಾಜರಿದ್ದರು.