ಚಾಮರಾಜನಗರ: ಕಳೆದ ಒಂದುತಿAಗಳಿAದ ನಗರಸಭೆ ವ್ಯಾಪ್ತಿಯ ಸೋಮವಾರಪೇಟೆ ವಿವಿಧ ಬಡಾವಣೆಯಲ್ಲಿ ಕುಡಿಯುವ ನೀರಿನ ಹಾಹಾಕಾರ ಇದ್ದು, ನಿವಾಸಿಗಳಿಂದ ದೂರುಬಂದ ಹಿನ್ನೆಲೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ಜವರೇಗೌಡ ಜತೆ ಭೇಟಿನೀಡಿ, ಕುಡಿಯುವ ನೀರಿನ ಸಮಸ್ಯೆ ಎದುರಾಗಿರುವ ಅಂಬೇಡ್ಕರ್ , ಲಿಂಗಾಯತರು, ಬಳೆಗಾರರ ಬಡಾವಣೆಗೆ ಭೇಟಿ ನೀಡಿ, ನಿವಾಸಿಗಳಿಂದ ಅಹವಾಲು ಆಲಿಸಿದರು.
ಇದೇ ವೇಳೆ ನೀರು ಸಿಗುವ ಪಾಯಿಂಟ್‌ಗಳನ್ನು ಗುರುತು ಮಾಡುವ ಮೂಲಕ ಕೊಳವೆಬಾವಿ ಕೊರೆಸಲು ಕ್ರಮವಹಿಸುವಂತೆ ಸೂಚಿಸಿದರು. ದುರಸ್ತೀಗೀಡಾಗಿರುವ ಮೋಟಾರ್ ದುರಸ್ತಿಗೆ ಕ್ರಮ ವಹಿಸಬೇಕು, ಕುರುಬರ ಬೀದಿಯಲ್ಲಿ ಕೆಟ್ಟಿರುವ ಮೋಟಾರ್ ದುರಸ್ತಿ ಮಾಡಿ, ಸಾರ್ವಜನಿಕರಿಗೆ ನೀರೊದಗಿಸಬೇಕು ಎಂದು ಅಧಿಕಾರಿಗಳಿಗೆ ಆದೇಶಿಸಿದರು.