ಚಾಮರಾಜನಗರ: ರೈತಾಪಿ ವರ್ಗದವರ ಅನುಕೂಲಕ್ಕಾಗಿ ಸರ್ಕಾರದಿಂದ ಸರಳೀಕೃತ ಇ-ಪೌತಿ ಪ್ರಕ್ರಿಯೆ ಪ್ರಾರಂಭಿಸಲಾಗಿದೆ.
ಮೃತ ಖಾತೆದಾರನ ಮರಣ ಪ್ರಮಾಣ ಪತ್ರ ಹಾಗೂ ಅಟಲ್ ಜೀ ಜನಸ್ನೇಹಿ ಕೇಂದ್ರದಿಂದ ಪಡೆದ ವಂಶವೃಕ್ಷವಿದ್ದರೆ ನೇರವಾಗಿ ಗ್ರಾಮ ಆಡಳಿತಾಧಿಕಾರಿಗಳ ಮೂಲಕ ಇ-ಪೌತಿ ತಂತ್ರಾಂಶದಲ್ಲಿ ದಾಖಲಿಸಬಹುದು. ದಾಖಲೆಗಳಿಲ್ಲದಿದ್ದರೂ ಚಿಂತೆ ಬೇಡ. ವಂಶವೃಕ್ಷಕ್ಕೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಮರಣ ಪ್ರಮಾಣ ಪತ್ರ ಲಭ್ಯವಿಲ್ಲದಿದ್ದಲ್ಲಿ ನೋಟರಿ ಪ್ರಮಾಣ ಪತ್ರದಲ್ಲಿ ಮೃತ ವ್ಯಕ್ತಿಯು ಮೃತ ಹೊಂದಿರುವುದನ್ನು ಪ್ರಮಾಣಿಕರಿಸಿ ಅಟಲ್ ಜಿ ಜನಸ್ನೇಹಿ ಕೇಂದ್ರಕ್ಕೆ ಸಲ್ಲಿಸಿ ವಂಶವೃಕ್ಷ ಪಡೆಯಬಹುದು.
ಮರಣ ಪ್ರಮಾಣ ಪತ್ರ, ಆಧಾರ್, ಪಡಿತರ ಚೀಟಿ ಇಲ್ಲದಿದ್ದರೂ ಗ್ರಾಮಸ್ಥರ ಮಹಜರ್, ನೋಟರಿ ಪ್ರಮಾಣ ಪತ್ರ ಹಾಗೂ ಕುಟುಂಬದವರ ಆಧಾರ್ ಒದಗಿಸಿ ಪೌತಿ ಖಾತೆ ಮಾಡಿಕೊಳ್ಳಲು ಅವಕಾಶವಿದೆ. ಇ-ಪೌತಿ ಖಾತೆ ಆಂದೋಲನದಲ್ಲಿ ಯಾವುದೇ ಶುಲ್ಕವನ್ನು ವಿಧಿಸಿರುವುದಿಲ್ಲ.
ವಾರಸುದಾರರು ತಮ್ಮ ಆಧಾರ್ ಇ-ಕೆವೈಸಿ ನೀಡಿ ಸ್ವಯಂಪ್ರೇರಿತರಾಗಿ ಈ ಸೌಲಭ್ಯ ಪಡೆಯಬಹುದು. ಮೃತ ಭೂಮಾಲೀಕನ ವಂಶವೃಕ್ಷದಲ್ಲಿರುವ ಎಲ್ಲಾ ವಾರಸುದಾರರಿಗೆ ಜಂಟಿಯಾಗಿ ಖಾತೆ ಮಾಡುವುದರಿಂದ ಪೌತಿ ಖಾತೆಗೆ 'ಮ್ಯುಟೇಶನ್ ಪೂರ್ವ ನಕ್ಷೆಯ ಅಗತ್ಯವಿರುವುದಿಲ್ಲ.
ಗ್ರಾಮ ಆಡಳಿತ ಅಧಿಕಾರಿಗಳು (ವಿಎಒ) ಸಂಪರ್ಕಿಸಿದಾಗ ಅಗತ್ಯ ದಾಖಲಾತಿಗಳನ್ನು ಒದಗಿಸಿ ಸಹಕರಿಸಬೇಕು. ದಾಖಲೆಗಳಿಲ್ಲದಿದ್ದಾಗ ನಡೆಯುವ ಸ್ಥಳೀಯ 'ಮಹಜರ್' ಪ್ರಕ್ರಿಯೆಗೆ ಸಂಪೂರ್ಣವಾಗಿ ಬೆಂಬಲ ನೀಡಬೇಕು. ಇ-ಕೆವೈಸಿ ಪೂರ್ಣಗೊಳಿಸಲು ಓಟಿಪಿ ನೀಡುವ ಮೂಲಕ ಅಧಿಕಾರಿಗಳೊಂದಿಗೆ ಸಹಕರಿಸಬೇಕು.
ಪ್ರಕೃತಿ ವಿಕೋಪ ಅಥವಾ ಬೆಳೆ ನಷ್ಟವಾದಾಗ ಸರ್ಕಾರದಿಂದ ವಿಮೆ ಮತ್ತು ಪರಿಹಾರದ ಹಣ ಪಡೆಯಲು, ಕೃಷಿ ಮತ್ತು ಜಮೀನು ಅಭಿವೃದ್ಧಿಗಾಗಿ ಬ್ಯಾಂಕ್ ಸಾಲ ಸೌಲಭ್ಯಗಳನ್ನು ಸುಲಭವಾಗಿ ಪಡೆಯಲು ಹಾಗೂ ಪಿ.ಎಂ. ಕಿಸಾನ್ ನಂತಹ ಸರ್ಕಾರದ ವಿವಿಧ ಸೌಲಭ್ಯಗಳನ್ನು ತೊಂದರೆಯಿಲ್ಲದೆ ಪಡೆಯಲು ಪೌತಿ ಖಾತೆ ಅಗತ್ಯವಾಗಲಿದೆ.
ಇ-ಪೌತಿ ಖಾತೆ ವಾರಸಾ ಖಾತೆ ಆಂದೋಲನದ ಸದುಪಯೋಗ ಪಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಶ್ರೀರೂಪ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Like this:
Like Loading...
Related