ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಒತ್ತು : ಸಿ.ಪುಟ್ಟರಂಗಶೆಟ್ಟಿ

  • ಕೋಡಿಮೋಳೆ ಬಸವನಪುರದಲ್ಲಿ ಅಂಗನವಾಡಿ ಕೇಂದ್ರ ನಿರ್ಮಾಣಕ್ಕೆ ಗುದ್ದಲಿಪೂಜೆ

ಚಾಮರಾಜನಗರ : ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಎಂಎಸ್‌ಐಎಲ್ ಅಧ್ಯಕ್ಷರು, ಶಾಸಕ ಸಿ.ಪುಟ್ಟರಂಗಶೆಟ್ಟಿ ಹೇಳಿದರು.
  ತಾಲೂಕಿನ ಕೋಡಿಮೋಳೆ ಬಸವನಪುರ ಗ್ರಾಮದಲ್ಲಿ ನೂತನ ಅಂಗನವಾಡಿ ಕೇಂದ್ರ ನಿರ್ಮಾಣಕ್ಕೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿ, ಗ್ರಾಮದಲ್ಲಿ ನೂತನ ಅಂಗನವಾಡಿ ಕೇಂದ್ರ ನಿರ್ಮಾಣಕ್ಕೆ
20 ಲಕ್ಷರೂ. ಮಂಜೂರಾಗಿದ್ದು, ಸುಸಜ್ಜಿತವಾದ
ಅಂಗನವಾಡಿ ಕೇಂದ್ರ ನಿರ್ಮಾಣವಾಗಲಿದೆ. ಮುಂದಿನ ದಿನಗಳಲ್ಲಿ ಗ್ರಾಮದ ಅಭಿವೃದ್ಧಿಗೆ ಅನುದಾನ ನೀಡುವುದಾಗಿ ಭರವಸೆ ನೀಡಿದರು.
   ಈ ಸಂದರ್ಭದಲ್ಲಿ ಮುಖಂಡರಾದ ಬಸವನಪುರ ರಾಜಶೇಖರ್, ಕೋಡಿಮೋಳೆ ಗೋವಿಂದಶೆಟ್ಟಿ, ಗ್ರಾ.ಪಂ.ಮಾಜಿ ಸದಸ್ಯರಾದ ಚಿನ್ನಸ್ವಾಮಿ, ಮಂಜು, ಪುಟ್ಟಮಾದಯ್ಯ, ಮುಖಂಡರಾದ ಲಿಂಗರಾಜು, ಜೆಇ ಕವಿತ, ಗುತ್ತಿಗೆದಾರ ಅಭಿಷೇಕ್, ಪಣ್ಯದಹುಂಡಿ ದೇವರಾಜು, ನಟರಾಜು, ಯಜಮಾನರಾದ ಪುಟ್ಟಮಾದಯ್ಯ,ಸಣ್ಣಯ್ಯ, ಮಹದೇವಸ್ವಾಮಿ, ರಾಜು, ದೇವರಗುಡ್ಡಸಿದ್ದಯ್ಯ, ಇತರರು ಹಾಜರಿದ್ದರು.

Leave a Reply

Your email address will not be published. Required fields are marked *