ಚಾಮರಾಜನಗರ: ನಗರದ ಜೆಎಸ್‌ಎಸ್ ಪ್ರೌಢಶಾಲೆಯಲ್ಲಿ ನಡೆದ ಮಕ್ಕಳ ದಿನಾಚರಣೆ ಕರ‍್ಯಕ್ರಮದಲ್ಲಿ ಸಾಲುಮರದ ತಿಮ್ಮಕ್ಕನ ನೆನಪಿಗಾಗಿ ಪರಿಸರ ಪ್ರೇಮಿ ಸುಂದರ್ ಅರಸ್ ಕಾಗಲವಾಡಿಮೋಳೆ ಅವರ ಪೋಷಕರು, ಮಕ್ಕಳಿಗೆ 400 ಸಸಿಗಳನ್ನು ವಿತರಿಸಿದರು.
ಪರಿಸರಪ್ರೇಮಿ ಸುಂದರ್ ಮಾತನಾಡಿ, ಸಾಲುಮರದ ತಿಮ್ಮಕ್ಕ ಒಬ್ಬ ಭಾರತೀಯ ಪರಿಸರವಾದಿಯಾಗಿದ್ದರು. ಅವರಿಗೆ ಮಕ್ಕಳಿಲ್ಲದ ಕಾರಣಕ್ಕೆ ರಸ್ತೆಯ ಬದಿಯಲ್ಲಿ ಆಲದ ಸಸಿಗಳನ್ನು ನೆಟ್ಟು ಅವುಗಳನ್ನೇ ಮಕ್ಕಳಂತೆ ಭಾವಿಸಿ ಬೆಳೆಸಿದರು. ಅವರ ಅಗಲಿಕೆಯಿಂದ ತುಂಬಾ ನೋವು ಉಂಟಾಗಿದೆ. ಅವರ ನೆನಪಿಗಾಗಿ ಮಕ್ಕಳ ದಿನಾಚರಣೆ ಕರ‍್ಯಕ್ರಮದಲ್ಲಿ ಪೋಷಕರು, ಮಕ್ಕಳಿಗೆ 400 ಸಸಿಗಳನ್ನು ವಿತರಿಸಲಾಗಿದೆ ಎಂದರು.
ಮೌನಾಚರಣೆ : ಸಾಲುಮರದ ತಿಮ್ಮಕ್ಕ ನಿಧನಕ್ಕೆ ಒಂದು ನಿಮಿಷಗಳ ಕಾಲಮೌನಾಚರಣೆ ಮಾಡಿ ಸಂತಾಪ ಸೂಚಿಸಲಾಯಿತು.
ಜೆಜೆಬಿ ಸದಸ್ಯ ಗಂಗಾಧರಸ್ವಾಮಿ ಗಿಡ ವಿತರಿಸುವ ಕರ‍್ಯಕ್ರಮಕ್ಕೆ ಚಾಲನೆ ನೀಡಿದರು. ಶಾಲೆಯ ಮುಖ್ಯಶಿಕ್ಷಕ ಸಿದ್ದಪ್ಪ, ಉನ್ನತ ಫೌಂಡೇಶನ್ ಅಧ್ಯಕ್ಷ ಸಿದ್ದರಾಜು, ಖಜಾಂಚಿ ಶಿವಕುಮಾರ್ ಚಂದಕವಾಡಿ, ಅನುಪಮ ಟ್ರಸ್ಟ್ ಅಧ್ಯಕ್ಷ ಡಾ.ಪ್ರೇಮ, ಶಾಲೆ ಶಿಕ್ಷಕರು, ಪೋಷಕರು ಹಾಜರಿದ್ದರು.