- ಜಿಲ್ಲಾ ಕುಂಬಾರರ ಸಂಘದ ಪದಾಧಿಕಾರಿಗಳ ಆಯ್ಕೆ
ಚಾಮರಾಜನಗರ: ರದ್ದು ಮಾಡಿರುವ ಕುಂಬಾರ ಅಭಿವೃದ್ಧಿ ನಿಗಮ ಸ್ಥಾಪಿಸಬೇಕೆಂದು ಅಖಿಲ ಭಾರತ ಕುಂಬಾರ ಮಹಾಸಭಾ ರಾಷ್ಟಿçÃಯ ಅಧ್ಯಕ್ಷ ಡಾ.ಶಿವಕುಮಾರ್ ಚೌಡಶೆಟ್ಟಿ, ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸರ್ಕಾರದಲ್ಲಿ ಕುಂಬಾರ ಅಭಿವೃದ್ಧಿ ನಿಗಮ ಸ್ಥಾಪಿಸಿದರು. ಇಂದಿನ ಸರ್ಕಾರದ ಅನುದಾನ ಇಲ್ಲ ಎಂದು ರದ್ದುಪಡಿಸಿರುವುದು ವಿಷಾದಕರ ಸಂಗತಿ. ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕುಂಬಾರ ಅಭಿವೃದ್ಧಿ ಸ್ಥಾಪಿಸಿ ವಿಶೇಷ ಪ್ಯಾಕೇಜ್ ನೀಡಬೇಕು ಒತ್ತಾಯಿಸಿದರು.
ರಾಜ್ಯದಲ್ಲಿ 15 ರಿಂದ 18 ಲಕ್ಷದಷ್ಟಿರುವ ಕುಂಬಾರ ಜನಾಂಗವನ್ನು ಗಣತಿಯಲ್ಲಿ 5 ರಿಂದ 6 ಲಕ್ಷ ಎಂದು ತೋರಿಸಿರುವುದು ವಿಷಾಧನೀಯ, ರಾಜ್ಯದ ವಿವಿದಡೆಯಲ್ಲಿ ವಿವಿಧ ಹೆಸರುಗಳಿಂದ ಕರೆಯಲ್ಪಡುವ ಕುಂಬಾರರನ್ನು ಒಂದೂಗೂಡಿಸಿ ಸಂಘಟನೆ ಮಾಡಿ, ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಪ್ರತಿಯೊಂದು ಕುಂಬಾರ ಕುಟುಂಬಕ್ಕೆ ಒದಗಿಸುವುದೇ ಸಂಘದ ಉದ್ದೇಶವಾಗಿದೆ, ಇಡೀ ದೇಶದಲ್ಲಿ 9 ಕೋಟಿಗೂ ಹೆಚ್ಚು ಜನಸಂಖ್ಯೆ ಇದ್ದೇವೆ ಎಂದರು.
ಇಲ್ಲಿಯವರೆಗೆ ಲಕ್ಷಿö್ಮಸಾಗರ್ ಒಬ್ಬರನ್ನು ಬಿಟ್ಟರೆ ಬೇರೆ ಯಾರಿಗೂ ರಾಜಕೀಯ ಸ್ಥಾನಮಾನ ಸಿಕ್ಕಿಲ್ಲ, ಸ್ಥಾನಮಾನ ಇರಲಿ ಇದ್ದ ಅಭಿವೃದ್ದಿ ನಿಗಮವನ್ನೇ ಅನುದಾನ ನೆಪದಲ್ಲಿ ರದ್ದು ಮಾಡಿರುವುದು ಎಷ್ಷು ಸರಿ, ಇದನ್ನು ಸಂಘ ಖಂಡಿಸುತ್ತದೆ ಎಂದರು.
ದೇವರಾಜ ಅರಸು ನಿಗಮದಲ್ಲಿ 103 ಜಾತಿಗಳನ್ನು ಸೇರಿಸಿ 600 ರಿಂದ 700 ಕೋಟಿ ಅನುದಾನ ಕೊಡುತ್ತೀರಿ, ಇಲ್ಲಿಯ ವರೆಗೆ ಕುಂಬಾರರಿಗೆ ಸಿಕ್ಕಿರುವ ಸವಲತ್ತು ನೋಡಿದರೆ ಏನೇನೂ ಇಲ್ಲ. ಆದ್ದರಿಂದ ಈ ನಿಗಮನ್ನ ನಾಲ್ಕು ಭಾಗ ಮಾಡಿ ಜಾತಿಗಳನ್ನು ವಿಂಗಡಿಸಬೇಕು, ಒಂದೊAದು ನಿಗಮಕ್ಕೆ ಅಹಿಂದ ಮುಖ್ಯಮಂತ್ರಿಗಳ ಹೆಸರಿಡಬೇಕು ಎಂದು ಆಗ್ರಹಿಸಿದರು.
ಯಡಿಯೂರಪ್ಪ ಅವರಿ ಕುಂಬಾ ಕಲಾ ನಿಗಮ ಸ್ಥಾಪಿಸಿ ಹಲವಾರು ಅನುಕೂಲ ಮಾಡಿಕೊಟ್ಟಿದ್ದರು, ಈಗ ಆ ಮಂಡಳಿಯನ್ನು ವಿಸರ್ಜಿಸಲಾಗಿದೆ, ಈ ದೃಷ್ಟಿಯಿಂದ ರಾಜ್ಯದಲ್ಲಿ ಸಂಘಟನೆಯನ್ನು ಬಲಗೊಳಿಸಬೇಕೆಂದು ಉದ್ದೇಶದಿಂದ ಎಲ್ಲಾ ಜಿಲ್ಲೆಯಲ್ಲೊ ಪ್ರವಾಸ ಮಾಡಿ ಪದಾಧಿಕಾರಿಗಳನ್ನು ಆಯ್ಕೆ ಮಾಡುತ್ತಿದ್ದು, ಮುಂದೆ ಸರ್ವಜ್ಞ ಜಯಂತಿನ್ನು ಅದ್ದೂರಿಯಾಗಿ ಮಾಡಿ ಸಮ್ಮೇಳನ ಮಾಡಲಾಗುವುದು ಎಂದರು.
ಪದಾಧಿಕಾರಿಗಳ ಆಯ್ಕೆ
ಈ ಸಂದರ್ಭದಲ್ಲಿ ಜಿಲ್ಲಾ ಪದಾಧಿಕಾರಿಗಳನ್ನು ನೇಮಿಸಲಾಯಿತು, ಜಿಲ್ಲಾಧ್ಯಕ್ಷರಾಗಿ ಮಹದೇವಸ್ವಾಮಿ, ಮಹಿಳಾ ಜಿಲ್ಲಾಧ್ಯಕ್ಷರಾಗಿ ಸುಧಾ ಅವರಿಗೆ ನೇಮಕಾತಿ ಆದೇಶ ವಿತರಿಸಿದರು.
ನೂತನ ಜಿಲ್ಲಾಧ್ಯಕ್ಷ ಮಹದೇವಸ್ವಾಮಿ ಮಾತನಾಡಿ ಜಿಲ್ಲೆಯಲ್ಲಿ ಎಲ್ಲರ ಸಹಕಾರ ಪಡೆದು ಸಂಘವನ್ನು ಸಂಘಟಿಸಿ, ರಾಜ್ಯ ಸಂಘದ ಆಶಯದಂತೆ ಸಂಘಟನೆ ಮಾಡಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ರಾಷ್ಟಿçÃಯ ಖಜಾಂಚಿ ವೆಂಕಟರಾಜು, ಯುವ ರಾಜ್ಯಾಧ್ಯಕ್ಷ ನಿತ್ಯಾಭರಣ ಚೌಡಶೆಟ್ಟಿ, , ರಾಜ್ಯ ಕಾರ್ಯಾಧ್ಯಕ್ಷ ರಾಮಶೆಟ್ಟಿ, ಯಳಂದೂರು ತಾಲ್ಲೂಕು ಅಧ್ಯಕ್ಷ ಉಮೇಶ್, ಕೊಳ್ಳೇಗಾಲ ತಾಲ್ಲೂಕು ಅಧ್ಯಕ್ಷ ಬಸವಣ್ಣ, ಚಾಮರಾಜನಗರ ತಾಲೂಕು ಅಧ್ಯಕ್ಷ ಕೇಶವಮೂರ್ತಿ ಇದ್ದರು.