ಮೈಸೂರು: ನಗರದ ಜೆಎಸ್‍ಎಸ್ ಆಸ್ಪತ್ರೆಯಲ್ಲಿ ಪೆಲ್ವಿಕ್ ಹೆಲ್ತ್ ಕ್ಲಿನಿಕ್ ಅನ್ನು ಜೆಎಸ್‍ಎಸ್ ಮಹಾವಿದ್ಯಾಪೀಠದ ಕಾರ್ಯದರ್ಶಿಗಳಾದ ಡಾ.ಸಿ.ಜಿ.ಬೆಟಸೂರಮಠರವರು ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಪುರುಷರು ಹಾಗೂ ಮಹಿಳೆಯರಲ್ಲಿ ಸಾಮಾನ್ಯವಾಗಿ ಕಂಡುಬರುವ ಪೆಲ್ವಿಕ್ ಫ್ಲೋರ್ ಸಮಸ್ಯೆಗಳಾದ ಮಹಿಳೆಯರಲ್ಲಿ ಗರ್ಭಧಾರಣೆ, ಹೆರಿಗೆ ಸಮಯದಲ್ಲಿ ಈ ಸ್ನಾಯುಗಳ ಮೇಲೆ ಹೆಚ್ಚು ಒತ್ತಡ ಬರುತ್ತದೆ ಹಾಗೂ ಪುರುಷರಲ್ಲಿ ವಯಸ್ಸಾದ ಮೇಲೆ ಅಥವಾ ಫ್ರೋಸ್ಟೇಟ್ ಶಸ್ತ್ರಚಿಕಿತ್ಸೆಯ ನಂತರ ಹೊಟ್ಟೆಯ ಕೆಳಭಾಗದಲ್ಲಿರುವ ಸ್ನಾಯುಗಳ ದುರ್ಬಲತೆಯಿಂದ ಕಂಡುಬರುವ ನೋವಿಗೆ ಫಿóಜಿಯೋಥೆರಪಿ ಮೂಲಕ ಚಿಕಿತ್ಸೆ ನೀಡುವ ವಿಧಾನವಾಗಿದೆ. ಜೆಎಸ್‍ಎಸ್ ಆಸ್ಪತ್ರೆಯಲ್ಲಿ ಅತ್ಯುತ್ತಮ ವೈದ್ಯರುಗಳ ತಂಡವಿದ್ದು ಉತ್ತಮ ಚಿಕಿತ್ಸೆಯನ್ನು ಸಾರ್ವಜನಿಕರು ಪಡೆಯಬಹುದು ಎಂದು ತಿಳಿಸಿದರು.
ಕಾರ್ಯಕ್ರಮಕ್ಕೆ ಗೌರವ ಅತಿಥಿಗಳಾಗಿ ಆಗಮಿಸಿದ್ದ ಜೆಎಸ್‍ಎಸ್ ಮಹಾವಿದ್ಯಾಪೀಠದ ವೈದ್ಯಕೀಯ ಶಿಕ್ಷಣ ವಿಭಾಗದ ನಿರ್ದೇಶಕರಾದ ಆರ್.ಮಹೇಶ್ ಅವರು ಮಾತನಾಡಿ, ಈ ದಿನ ವಿಶ್ವಫಿóಜಿಯೋಥೆರಪಿ ದಿನಾಚರಣೆ ಇದೇ ದಿನ ವಿಶೇಷವಾಗಿ ಜೆಎಸ್‍ಎಸ್ ಆಸ್ಪತ್ರೆಯಲ್ಲಿ ಪೆಲ್ವಿಕ್ ಹೆಲ್ತ್‍ಕ್ಲಿನಿಕ್ ಪ್ರಾರಂಭವಾಗಿದ್ದು ಇದು ಫಿóಜಿಯೋಥೆರಪಿ ವಿಭಾಗದ ಜೊತೆಗೆ ಯುರಾಲಜಿ, ಪ್ರಸೂತಿ ಮತ್ತು ಸ್ತ್ರೀರೋಗ ಹಾಗೂ ರೇಡಿಯಾಲಜಿ ವಿಭಾಗದ ಸಹ ಭಾಗಿತ್ವದಲ್ಲಿ ನಡೆಯುವ ವಿಶೇಷ ಕ್ಲಿನಿಕ್ ಆಗಿದೆ ಸ್ನಾಯುಗಳ ದೌರ್ಬಲ್ಯದಿಂದ ಅನಿಯಂತ್ರಿತ ಮಲ ಮತ್ತುಮೂತ್ರ ವಿಸರ್ಜನೆಗೆ ಫಿóಜಿಯೋಥೆರಪಿ ಮೂಲಕ ಚಿಕಿತ್ಸೆಯನ್ನು ನೀಡಲಾಗುತ್ತದೆ ಎಂದರು.
ಗೌರವ ಅತಿಥಿಗಳಾಗಿ ಆಗಮಿಸಿದ್ದ ಜೆಎಸ್‍ಎಸ್ ಆಸ್ಪತ್ರೆಯ ನಿರ್ದೇಶಕರಾದ ಡಾ.ಸಿ.ಪಿ.ಮಧುರವರು ಮಾತನಾಡಿ, ಪೆಲ್ವಿಕ್ ಫೆÇ್ಲೀರ್‍ರಿಹ್ಯಾಬಿಲಿಟೇಷನ್(Pಈಖ) ಎಂಬ ಚಿಕಿತ್ಸೆಯನ್ನು ಪರಿಚಯಿಸಲಾಗಿದೆ. ಇದು ಪುರುಷರು ಮತ್ತು ಮಹಿಳೆಯರಲ್ಲಿ ಕಂಡುಬರುವ ವಿವಿಧ ಮೂತ್ರಜನಕಾಂಗ ಮತ್ತು ಅನಿಯಂತ್ರಿತ ಮೂತ್ರ ಸಂಬಂಧಿ ಸಮಸ್ಯೆಗಳಿಗೆ ಶಸ್ತ್ರಚಿಕಿತ್ಸೆಯಿಲ್ಲದ ಚಿಕಿತ್ಸೆಯನ್ನು ನೀಡುತ್ತದೆ. ಪೆಲ್ವಿಕ್ ಫ್ಲೋರ್ ಡಿಸ್ಫಂಕ್ಷನ್‍ಗೆ ಸಂಬಂಧಿಸಿದ ಸಮಸ್ಯೆಗಳನ್ನು ಆರಂಭದಲ್ಲಿಯೇ ಗುರುತಿಸಿ ಚಿಕಿತ್ಸೆ ನೀಡಿದರೆ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು ಎಂದರು.
ಕಾರ್ಯಕ್ರಮದಲ್ಲಿ ಜೆಎಸ್‍ಎಸ್ ಆಸ್ಪತ್ರೆಯ ಯುರಾಲಜಿ ವಿಭಾಗದ ಮುಖ್ಯಸ್ಥರಾದ ಡಾ.ಅಮೃತ್‍ರಾಜ್‍ಗೌಡ, ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಮುಖ್ಯಸ್ಥರಾದ ಡಾ.ಮಮತಾಎಸ್, ರೇಡಿಯಾಲಜಿ ವಿಭಾಗದ ಮುಖ್ಯಸ್ಥರಾದ ಡಾ. ಸುಧಾಕಿರಣ್‍ದಾಸ್ ಮತ್ತು ಫಿóಜಿಯೋಥೆರಪಿ ವಿಭಾಗದ ಮುಖ್ಯಸ್ಥರಾದ ಡಾ.ವಿಜಯ್ ಸ್ಯಾಮ್ಯುಯೆಲ್ ಹಾಗೂ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವರ್ಗದವರು ಹಾಜರಿದ್ದರು.