ಚಾಮರಾಜನಗರ: ಎಫ್ಎಲ್ಎನ್ ಆಧಾರಿತ ಕಲಿಕಾ ಹಬ್ಬವು ಬಾಷಾ ಕೌಶಲ್ಯಗಳಿಗೆ ಸಂಬಂಧಪಟ್ಟಿದೆ ಎಂದು ಬಿಆರ್ ಪಿ ರಮೇಶ್ ತಿಳಿಸಿದರು.
ತಾಲೂಕಿನ ಹೊಂಗನೂರು ಗ್ರಾಮದ ಅಂಬೇಡ್ಕರ್ ಬಡಾವಣೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಮೂಹ ಸಂಪನ್ಮೂಲ ಕೇಂದ್ರದಲ್ಲಿ ಜಿಲ್ಲಾ ಪಂಚಾಯತ್, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿಗಳ ಕಚೇರಿ, ಶಾಲಾ ಶಿಕ್ಷಣ ಇಲಾಖೆ ವತಿಯಿಂದ ನಡೆದ ಕ್ಲಸ್ಟರ್ ಹಂತದ ಎಫ್ಎಲ್ಎನ್ ಆಧಾರಿತ ಕಲಿಕಾ ಹಬ್ಬವನ್ನು ಉದ್ಘಾಟಿಸಿ ಮಾತನಾಡಿದ ಅವರು
ಎಫ್ ಎಲ್ ಎನ್ ಕಲಿಕಾ ಹಬ್ಬವು ಹಬ್ಬದ ರೀತಿ ನಡೆಯುತ್ತಿದೆ.
ಈ ಕಲಿಕಾ ಹಬ್ಬದ ಉದ್ದೇಶವೇನೆಂದರೆ ಮಕ್ಕಳು ಕಲಿಕೆಯ ಜೊತೆಗೆ ಸಂತೋಷದಾಯಕ ಕಲಿಕೆಯನ್ನುಂಟು ಮಾಡುವುದರ ಜೊತೆಗೆ ಮಕ್ಕಳಲ್ಲಿ ಬಾಷಾ ಕೌಶಲ್ಯ ಹಾಗೂ ಗಣಿತದ ಮೂಲ ಕ್ರಿಯೆಗಳನ್ನು ವೃದ್ಧಿಸುವಂತಹ ಕೆಲಸ ನಿರಂತರವಾಗಿ ಸರ್ಕಾರಿ ಶಾಲೆಗಳಲ್ಲಿ ನಡೆಯುವುದಾಗಿದೆ.
1ರಿಂದ 5ನೇ ತರಗತಿಯವರೆಗೆ ಇರುವಂತಹ ಕಲಿಕಾ ಪರಿಕರಗಳನ್ನು ಕಲಿಕಾ ಫಲ ಆಧಾರಿತವಾಗಿ ಚಟುವಟಿಕೆ ನಿರಂತರವಾಗಿ ನಡೆಯುತ್ತದೆ. ಈ ಚಟುವಟಿಕೆಯನ್ನು ಕ್ಲಸ್ಟರ್ ಹಂತಗಳಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳು ತಮ್ಮ ಉತ್ತಮ ಪ್ರದರ್ಶನವನ್ನು ನೀಡಿದರೆ ಆ ಮಕ್ಕಳಿಗೆ ಒಂದು ವೇದಿಕೆ ಕಲ್ಪಿಸಿ ಕೊಡುವುದಾಗಿದೆ. ಈ ಕಲಿಕಾ ಹಬ್ಬವು 7 ವಿವಿಧ ಹಂತಗಳಲ್ಲಿ ನಡೆಯುತ್ತದೆ. ಈ ಕಲಿಕಾ ಹಬ್ಬದಲ್ಲಿ 1ರಿಂದ 100 ಮಕ್ಕಳು ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿದ ಮಕ್ಕಳಿಗೆ ಬಹುಮಾನ ನೀಡಲಾಗುತ್ತದೆ ಎಂದು ತಿಳಿಸಿದರು.
ಇದೆ ವೇಳೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರವಿರಾಮ್, ಸದಸ್ಯ ಚಾಮದಾಸಯ್ಯ, ಎಸ್ ಡಿ ಎಂಸಿ ಅಧ್ಯಕ್ಷ ಜಯರಾಜು ಹಾಗೂ ಸಾವಿತ್ರಿಬಾಯಿ ಪುಲೆ ಸಂಘದ ಜಿಲ್ಲಾ ಅಧ್ಯಕ್ಷೆ ಭವಾನಿದೇವಿ ಮಾತನಾಡಿದರು.
ಇದಕ್ಕೂ ಮುಂಚೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮಕ್ಕಳಿಂಧ ಹಾಲರಿವೆ ಉತ್ಸವ ಮೆರವಣಿಗೆ ನಡೆಯಿತು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ರವಿರಾಮ್, ಸದಸ್ಯ ಚರ್ಮದಾಸಯ್ಯ, ಎಸ್ ಡಿ ಎಂ ಸಿ ಅಧ್ಯಕ್ಷರಾದ ಜಯರಾಜು, ಭಾಗ್ಯಮ್ಮ, ಸಾವಿತ್ರಿಬಾಯಿ ಪುಲೆ ಸಂಘದ ಜಿಲ್ಲಾಧ್ಯಕ್ಷೆ ಭವಾನಿದೇವಿ, ಹೊಂಗನೂರು ಕ್ಲಸ್ಟರ್ ನ ಸಿ ಆರ್ ಪಿ ಶಾಂತಮೂರ್ತಿ, ಮುಖ್ಯ ಶಿಕ್ಷಕರಾದ ಗೀತಾ.ಎಸ್, ಶ್ಯಾಂ ಸುಂದರ್, ನಿಂಗರಾಜು, ರಂಗಸ್ವಾಮಿ, ಮಹದೇವಸ್ವಾಮಿ, ಶಿಕ್ಷಕರಾದ ಶೀಲಾದೇವಿ, ನಂದಿನಿ. ಎ.ಎನ್, ಅನಿತಾ. ವೈ.ಬಿ, ಮಂಜುನಾಥ್ ಸ್ವಾಮಿ, ರವಿಕುಮಾರ್, ಜಯಲಕ್ಷ್ಮಿ, ಮಾದೇಶ್, ಜಯಪ್ರಕಾಶ್, ಗ್ರಾಮದ ಮುಖಂಡರು ಪೋಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.