ಚಾಮರಾಜನಗರ: ಮೈಸೂರಿನ ಆಕಾಶವಾಣಿ ನಡೆಸುವ ಫೋನ್ ಇನ್ ಕಾರ್ಯಕ್ರಮದಲ್ಲಿ ಚಾಮರಾಜನಗರ ತಾಲ್ಲೂಕಿನ ಸಂತೆಮರಹಳ್ಳಿ ನಡೆಯುವ ಸಂತೆಯಲ್ಲಿ ಆಹಾರ ಬಣ್ಣ ಮಿಶ್ರಿತ ಸಿಹಿತಿನಿಸುಗಳು ಮಾರಾಟ ಮಾಡುತ್ತಿರುವ ಬಗ್ಗೆ ದೂರಿನ ಮೇರೆಗೆ ದಾಳಿ ನಡೆಸಿ ಎಚ್ಚರಿಕೆ ನೀಡಲಾಗಿದೆ.
ಆಹಾರ ಸುರಕ್ಷತೆ ಮತ್ತು ಔಷಧ ಇಲಾಖೆಯ ಅಂಕಿತಾಧಿಕಾರಿಗಳಾದ ಡಾ. ಎಸ್.ಎಲ್. ರವೀಂದ್ರ ಮತ್ತು ಆಹಾರ ಸುರಕ್ಷತಾಧಿಕಾರಿ ಶ್ರೀನಿವಾಸ ಮತ್ತು ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಗೂ ಆರಕ್ಷಕ ಸಿಬ್ಬಂದಿ ಜೊತೆ ಕಳೆದ ಜುಲೈ ೧೫ರ ಮಂಗಳವಾರದAದು ನಡೆದ ಸಂತೆಗೆ ದಾಳಿ ನಡೆಸಿ ಪರಿಶೀಲಿಸಿದ್ದಾರೆ.
ಸಂತೆಯಲ್ಲಿ ಮಾರಾಟ ಮಾಡುವ ಹಾಗೂ ಸ್ಥಳೀಯ ಸಿಹಿತಿನಿಸು ಮಾರಾಟ ಮಾಡುವ ಅಂಗಡಿಗಳು, ಬೇಕರಿಗಳು ಹಾಗೂ ಇತರೆ ಆಹಾರ ಉದ್ದಿಮೆದಾರರುಗಳ ಅಂಗಡಿಗಳಲ್ಲಿ ಸುಮಾರು ೨೯ ವಿವಿಧ ಸರ್ವೇ ಆಹಾರ ಮಾದರಿಗಳನ್ನು ಸಂಗ್ರಹಿಸಿ, ಮೈಸೂರಿನ ವಿಭಾಗೀಯ ಆಹಾರ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಸಿಹಿತಿನಿಸು ಆಹಾರ ಪದಾರ್ಥಗಳನ್ನು ಮಾರಾಟ ಮಾಡುವವರಿಗೆ ಯಾವುದೇ ರೀತಿಯ ಬಣ್ಣ ಮಿಶ್ರಿತ ಸಿಹಿ ತಿನಿಸುಗಳÀನ್ನು ಮಾರಾಟ ಮಾಡದಂತೆ ಎಚ್ಚರಿಕೆ ನೀಡಲಾಯಿತು.
ಅಶುಚಿತ್ವ ಹೊಂದಿರುವ ಹೋಟೆಲ್ ಹಾಗೂ ಇತರೆ ಸ್ಥಳಗಳಿಗೆ ದಂಡವನ್ನು ವಿಧಿಸಲಾಯಿತು. ಬಣ್ಣದ ತಿಂಡಿಗಳನ್ನು ಸೇವಿಸುವುದರಿಂದ ಆರೋಗ್ಯದ ಮೇಲೆ ಉಂಟಾಗುವ ಅಪಾಯಗಳ ಬಗ್ಗೆ ತಿಳಿವಳಿಕೆ ನೀಡಲಾಯಿತು. ಇಂತಹ ಘಟನೆಗಳು ಮರುಕಳಿಸದಂತೆ ತಿಳುವಳಿಕೆ ನೀಡಿ, ಮುಂದುವರೆದರೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯ ಅನ್ವಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಯಿತು.
Like this:
Like Loading...
Related