155 ಮಂದಿ ತಪಾಸಣೆ, 80 ಮಂದಿ ಗೆ ಶಸ್ತ್ರ ಚಿಕಿತ್ಸೆಗೆ ಆಯ್ಕೆ
ಚಾಮರಾಜನಗರ: ರೋಟರಿ ಸಂಸ್ಥೆ ವತಿಯಿಂದ ನಗರದಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ
ನಡೆಯಿತು.
ನಗರದ ಬಿ.ರಾಚಯ್ಯ ಜೋಡಿರಸ್ತೆಯಲ್ಲಿರುವ ರೋಟರಿ ಭವನದಲ್ಲಿ ರೋಟರಿ ಸಂಸ್ಥೆ, ರಾಷ್ಟ್ರೀಯ ಅಂಧತ್ವ ನಿಯಂತ್ರಣ ಕಾರ್ಯಕ್ರಮ, ಅರವಿಂದ ಕಣ್ಣಿನ ಆಸ್ಪತ್ರೆ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಉಚಿತ ಕಣ್ಣಿನ ತಪಾಸಣೆ ಶಿಬಿರದಲ್ಲಿ 155 ಮಂದಿ ತಪಾಸಣೆ ಮಾಡಿಸಿಕೊಂಡರು. 80 ಮಂದಿ ಶಸ್ತ್ರಚಿಕಿತ್ಸೆಗೆ ಆಯ್ಕೆಯಾಗಿದ್ದು, ಅವರನ್ನು ಕೊಯಮತ್ತೂರಿನ ಅರವಿಂದ ಕಣ್ಣಿನ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಶಿಬಿರದಲ್ಲಿ ವ್ಯವಸ್ಥೆ ಮಾಡಲಾಯಿತು.
ರೋಟರಿ ಸಂಸ್ಥೆ ಖಜಾಂಚಿ ಆರ್.ಎಂ.ಸ್ಚಾಮಿ ಮಾತನಾಡಿ, ರೋಟರಿ ಸಂಸ್ಥೆಯು ಪ್ರತಿ ತಿಂಗಳು ಮೊದಲನೆಯ ಭಾನುವಾರ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಅಯೋಜಿಸುತ್ತಿದ್ದು, ಸಾರ್ವಜನಿಕರು ಹೆಚ್ವಿನ ಸಂಖ್ಯೆಯಲ್ಲಿ ಭಾಗವಹಿಸಿ ಶಿಬಿರದ ಪ್ರಯೋಜನ ಪಡೆಯುತ್ತಿರುವುದು ತುಂಬಾ ಸಂತಸವಾಗಿದ್ದು,ಮುಂದಿನ ಶಿಬಿರದ ಸದುಪಯೋಗವನ್ನು ಜನತೆ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಸಾರ್ವಜನಿಕರ ದೃಷ್ಟಿ ದೋಷ ನಿವಾರಣೆ ಮಾಡಿ,ಅವರ ಬಾಳಿಗೆ ಬೆಳಕು ನೀಡುವ ಉತ್ತಮ ಸೇವಾ ಕಾರ್ಯ ಮಾಡುವ ಮೂಲಕ ರೋಟರಿ ಸಂಸ್ಥೆ ಎಲ್ಲರಿಗೂ ಮಾದರಿಯಾಗಿದೆ. ರೋಟರಿ ಸಂಸ್ಥೆ ಈಗಾಗಲೆ ಸಾವಿರಾರು ಜನರ ಕಣ್ಣಿನ ದೃಷ್ಟಿ ಸಮಸ್ಯೆ ನಿವಾರಿಸಿದೆ..ಶಸ್ತ್ರ ಚಿಕಿತ್ಸೆ ಪಡೆದ ಫಲಾನುಭವಿಗಳು ದೃಷ್ಟಿ ಪಡೆದು ಸಂತಸ ವ್ಯಕ್ತ ಪಡಿಸಿದ್ದಾರೆ.ಪ್ರತಿ ತಿಂಗಳು ಮೊದಲ ಭಾನುವಾರ ನಡೆಯುವ ಈ ಸೇವಾ ಕಾರ್ಯಕ್ರಮ ರೋಟರಿಯ ಸಾರ್ಥಕ ಸೇವೆಯಾಗಿದೆ ಎಂದು ಅಭಿಪ್ರಾಯಪಟ್ಟರು.ಪ್ರತಿ ತಿಂಗಳು ನಡೆಯುವ ಈ ಕಾರ್ಯಕ್ರಮಕ್ಕೆ ಅಗತ್ಯ ವಾದ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಉಪಹಾರ ದ ವ್ಯವಸ್ಥೆ ಮಾಡುವ ಉದ್ಯಮಿ ಎಸ್ ಆರ್ ಎಸ್ ಶ್ರೀನಿವಾಸ್ ರವರ ಉಧಾರತೆಯನ್ನು ಶ್ಲಾಘಿಸಿದರು..ಅರವಿಂದ ಆಸ್ಪತ್ರೆ ಯ ವೈದ್ಯರು ಗಳಾದ ಡಾ.ಸಾಯಿತೇಜ,ಡಾ.ಜೈ ಓಸ್ವಾಲ್,ಡಾ.ಚಂದ್ರವದನ್ ತಪಾಸಣೆ ನಡೆಸಿದರು.
ಕಾರ್ಯಕ್ರಮದಲ್ಲಿ ರೋಟರಿಯನ್ಗಳಾದ ಸುಭಾಷ್ ,ಶ್ರೀನಿವಾಸ್,ಸಿದ್ದಮಲ್ಲಪ್ಪ,ನಾರಾಯಣ್,ಸುರಭಿ ನಾಗರಾಜು,ಹೊನ್ನಮೇಟಿ ಸುಂದರ್, ಸವಿತಾ, ಪಿಆರ್ ಓ ವಿಜಯ ಕಾಂತ್ ಹಾಜರಿದ್ದರು.