ಚಾಮರಾಜನಗರ: ತಾಲೂಕಿನ ಬಿಸಲವಾಡಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.
ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಮೈಸೂರಿನ ಓಡಿಪಿ ಸಂಸ್ಥೆ, ಸಂಘಮಿತ್ರ ಹಾಗೂ ಕ್ಲಿಯರ್ ಮೆಡಿರೆಡಿಯೆಂಟ್ ಆಸ್ಪತ್ರೆ, ಎಜಿಎಸ್ ಕಣ್ಣಿನ ಆಸ್ಪತ್ರೆ, ವಿಸರ್ಗ ರೈತ ಉತ್ಪಾದಕರ ಸಮಿತಿ, ಗ್ರಾಮ ಪಂಚಾಯಿತಿ ಇವರ ವತಿಯಿಂದ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಗ್ರಾ.ಪಂ.ಅಧ್ಯಕ್ಷ ಬಾಲರಾಜು ಚಾಲನೆ ನೀಡಿ ಮಾತನಾಡಿ, ಇಂತಹ ಉಚಿತ ಆರೋಗ್ಯ ತಪಾಸಣಾ ಶಿಬಿರಗಳಿಂದ ಕಾಯಿಲೆ ಗುರುತಿಸಿ ಚಿಕಿತ್ಸೆ ಪಡೆದು ಗುಣಮುಖರಾಗಲು ಸಾಧ್ಯವಾಗಿದೆ. ಆದ್ದರಿಂದ ಇಂತಹ ಆರೋಗ್ಯ ಶಿಬಿರಗಳನ್ನು ಜನತೆ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಓಡಿಪಿ ಸಂಸ್ಥೆಯ ಸಂಯೋಜಕಿ ರತ್ನಮ್ಮ ಮಾತನಾಡಿ ಕ್ಯಾನ್ಸರ್ ಕುರಿತು ಅರಿವು ಮೂಡಿಸಿದರು. ಸಂಸ್ಥೆಯಿಂದ ದೊರೆಯುವ ಸೌಲಭ್ಯಗಳು ಕುರಿತು ಮಾಹಿತಿ ನೀಡಿದರು. ಶಿಬಿರದಲ್ಲಿ ಕ್ಯಾನ್ಸರ್ ತಪಾಸಣೆ, ಬಿಪಿ, ಸಕ್ಕರೆಕಾಯಿಲೆ, ಇಸಿಜಿ, ಹೃದಯಕ್ಕೆ ಸಂಬಂಧಪಟ್ಟ ತಪಾಸಣೆ, ಕಣ್ಣಿನ ತಪಸಣೆ, ಇತರ ಸಾಮಾನ್ಯ ರೋಗಗಳು ತಪಾಸಣೆ ಒಟ್ಟು 120 ಮಂದಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರು.
ಕಾರ್ಯಕ್ರಮದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಉಮೇಶ್, ಕಾರ್ಯದರ್ಶಿ ಗೋವಿಂದರಾಜ, ಕ್ಲಿಯರ್ ಮೆಡಿರೆಡಿಯೆಂಟ್ ಆಸ್ಪತ್ರೆಯ ಪಿಆರ್‌ಓ ರವಿಕುಮಾರ್, ಡಾ.ವಿದ್ಯಾಸಾಗರ್, ಸಿಸ್ಟರ್ ರೋಹಿಣಿ, ಮೇರಿ,, ಎಜಿಎಸ್ ಕಣ್ಣಿನ ಆಸ್ಪತ್ರೆಯ ಡಾ.ಪಾಷಾ, ಬಸವರಾಜು, ನಿಸರ್ಗ ರೈತ ಉತ್ಪಾದಕರ ಸಮಿತಿ ಅಧ್ಯಕ್ಷ ನಾಗರಾಜು, ವಲಯಾಧಿ ಕಾರಿ ಸಿದ್ದರಾಜು, ಕಾರ್ಯಕರ್ತ ಸರೋಜ, ಮರಿಜೋಸೆಫ್ ಹಾಜರಿದ್ದರು.