ಸರ್ಕಾರಿ ‌ಶಾಲಾ ಮಕ್ಕಳಿಗೆ ಆರೋಗ್ಯ ಉಚಿತ ತಪಾಸಣೆ

  • ಬಸವಮಾರ್ಗ ಫೌಂಡೇಶನ್ ಆಯೋಜನೆ
  • ಮಕ್ಕಳ್ಳು, ಪಾಲಕರು, ಶಿಕ್ಷಕರು ಭಾಗಿ
  • ದಿ.ಎಂ.ಸೋ‌ನಿ ಕರೀಗೌಡ ಅವರ 26ನೇ ವರ್ಷದ ಪುಣ್ಯ ಸ್ಮರಣೆ ಹಿನ್ನೆಲೆ

ಮೈಸೂರು : ದಿ.ಎಂ.ಸೋ‌ನಿ ಕರೀಗೌಡ ಅವರ 26ನೇ ವರ್ಷದ ಪುಣ್ಯ ಸ್ಮರಣೆ ಅಂಗವಾಗಿ ಬಸವಮಾರ್ಗ ವ್ಯಸನಮುಕ್ತ ಮತ್ತು ಪುನರ್ವಸತಿ ‌ಕೇಂದ್ರ, ಎ.ಆರ್. ಆಸ್ಪತ್ರೆ ಹಾಗೂ ಕುಕ್ಕರಹಳ್ಳಿ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆ ವತಿಯಿಂದ ಶನಿವಾರ ಶಾಲಾ ಆವರಣದಲ್ಲಿ ಆರೋಗ್ಯ ಉಚಿತ ತಪಾಸಣೆ ಶಿಬಿರ ಆಯೋಜಿಸಲಾಗಿತ್ತು.

ವಿದ್ಯಾರ್ಥಿಗಳು, ಪಾಲಕರು ಹಾಗೂ ಶಿಕ್ಷಕರಿಗೆ ಆಯೋಸಿದ್ದ ಈ ಶಿಬಿರ ದಲ್ಲಿ ನೂರಾರು ಜನರು ಭಾಗಿಯಾಗಿ ತಪಾಸಣೆ ಮಾಡಿಸಿಕೊಂಡರು. ಎ.ಆರ್. ಆಸ್ಪತ್ರೆ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗಳು ಬಿಪಿ, ಶುಗರ್, ರಕ್ತ ಪರೀಕ್ಷೆ ನಡೆಸಿದರು. ಹೆಚ್ಚಿನ ಚಿಕಿತ್ಸೆ ಆಗತ್ಯ ಇದ್ದವರಿಗೆ ಆಸ್ಪತ್ರೆಗೆ ಆಗಮಿಸಿ ಸೂಕ್ತ ತಜ್ಞರಿಂದ ರಿಯಾಯಿತಿ ದರದಲ್ಲಿ ಪರೀಕ್ಷೆ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದರು. ಡಾ.ಅಗರ್ವಾಲ್ ಕಣ್ಣಿನ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿಗಳು ಕಣ್ಣು ಪರೀಕ್ಷೆ ಮಾಡಿದರು. ಕಣ್ಣಿನ ದೋಷ ಇದ್ದ ಮಕ್ಕಳಿಗೆ ಕನ್ನಡಕ ಧರಿಸಲು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಬಸವಮಾರ್ಗ ಫೌಂಡೇಶನ್ ಅಧ್ಯಕ್ಷ ಎಸ್.ಬಸವರಾಜು, ನಿಜವಾದ ಸಂಪತ್ತು ಎಂದರೆ ಅದು ಆರೋಗ್ಯ ಮಾತ್ರ. ಆರೋಗ್ಯ ಸರಿ ಇಲ್ಲದಿದ್ದರೆ ಮನುಷ್ಯ ಏನೂ ಮಾಡಲು ಸಾಧ್ಯವಿಲ್ಲ. ಇತ್ತೀಚಿನ ಆಹಾರ ಕ್ರಮ, ಆಧುನಿಕ ಜೀವನ ಶೈಲಿ ಹಾಗೂ ಒತ್ತಡ ಬದುಕಿನಿಂದ ವಿದ್ಯಾರ್ಥಿಗಳು ಸೇರಿದಂತೆ ಪ್ರತಿಯೊಬ್ಬರಲ್ಲೂ ಅನಾರೋಗ್ಯ ಸಮಸ್ಯೆ ಕಾಡುತ್ತಿದೆ. ಈ ನಿಟ್ಟಿನಲ್ಲಿ ಆರೋಗ್ಯ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಿದೆ. ಕಾಲ ಕಾಲಕ್ಕೆ ತಕ್ಕಂತೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಅಗತ್ಯವಿದೆ. ಇದರಿಂದ ಆರೋಗ್ಯದ ಮುಂಜಾಗ್ರತೆ ವಹಿಸಬಹುದು. ಮುಂದೆ ಆಗಬಹುದಾದ ದೊಡ್ಡ ಸಮಸ್ಯೆಗಳಿಗೆ ಪ್ರಾರಂಭದಲ್ಲೇ ಚಿಕಿತ್ಸೆ ಪಡೆದು ಆರೋಗ್ಯ ಪೂರ್ಣ ಜೀವನ ನಡೆಸಬಹುದು ಎಂದು ನುಡಿದರು.

ವೈದ್ಯ ಡಾ. ಅರುಣ್ ಮಾತನಾಡಿ, ಉಚಿತ ‌ಆರೋಗ್ಯ ತಪಾಸಣೆಯಲ್ಲಿ ವಿದ್ಯಾರ್ಥಿಗಳು, ಪಾಲಕರು, ಶಿಕ್ಷಕರು ಭಾಗಿಯಾಗಿದ್ದರು. ಅವರಿಗೆ ಅಗತ್ಯ ಪರೀಕ್ಷೆ ಮಾಡಲಾಗಿದೆ. ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆ ಸಂಪರ್ಕಿಸಲು ‌ತಿಳಿಸಲಾಗಿದೆ ಎಂದು ಮಾಹಿತಿ ನೀಡಿದರು.

ಶಾಲೆಯ ಮುಖ್ಯಶಿಕ್ಷಕ ಚಂದ್ರು ಮಾತನಾಡಿ, ಹೊಟ್ಟೆನೋವು, ತಲೆನೋವು ಸೇರಿದಂತೆ ‌ನಾನಾ ಕಾರಣಗಳನ್ನ ಹೇಳಿ ಮಕ್ಕಳು ಶಾಲೆಗೆ ಗೈರಾಗುತ್ತಿದ್ದರು. ಅಂತಹ ವಿದ್ಯಾರ್ಥಿಗಳಿಗೆ ಈ ಶಿಬಿರದಲ್ಲಿ ವಿಶೇಷವಾಗಿ ತಪಾಸಣೆ ಮಾಡಿಸಲಾಗಿದೆ. ಶುಚಿತ್ವ ಹಾಗೂ ಆರೋಗ್ಯದ ಬಗ್ಗೆ ಗಮನ ನೀಡುವಂತೆ ವಿದ್ಯಾರ್ಥಿಗಳಿಗೆ ಅಗತ್ಯ ಸಲಹೆ ಸೂಚನೆ ನೀಡಿಲಾಗಿದೆ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ವೈದ್ಯ ಸಿಬ್ಬಂದಿ ನಿಂಗರಾಜು, ದೀಪಿಕಾ, ಪೂಜಾ, ನಿತಿನ್, ಕಿಶನ್,ಇಸ್ಮಿತಾ,ಅಭಿನವ್, ಬಸವಮಾರ್ಗ ಫೌಂಡೇಶನ್ ನ ಯೋಗ ಶಿಕ್ಷಕ ಎಚ್.ಪಿ.ನವೀನ್ ಕುಮಾರ್, ಶಾಲೆಯ ಶಿಕ್ಷಕರು ಸೇರಿದಂತೆ ಇತರರು ಇದ್ದರು‌.

ಚಿತ್ರ :
ದಿ.ಎಂ.ಸೋ‌ನಿ ಕರೀಗೌಡ ಅವರ 26ನೇ ವರ್ಷದ ಪುಣ್ಯ ಸ್ಮರಣೆ ಅಂಗವಾಗಿ ಕುಕ್ಕರಹಳ್ಳಿ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಆವರಣದಲ್ಲಿ ಆರೋಗ್ಯ ಉಚಿತ ತಪಾಸಣೆ ಶಿಬಿರ ಆಯೋಜಿಸಲಾಗಿತ್ತು. ಚಂದ್ರು, ಡಾ.ಅರುಣ್, ನಿಂಗರಾಜು ಇತರರು ಇದ್ದಾರೆ.

Leave a Reply

Your email address will not be published. Required fields are marked *