ಗಣೇಶ ಪ್ರತಿಷ್ಠಾಪನೆ : ಏಕಗವಾಕ್ಷಿ ಸಮಿತಿಯ ಅನುಮತಿ ಕಡ್ಡಾಯ-ಜಿಲ್ಲಾಧಿಕಾರಿ ಶಿಲ್ಪಾ ನಾಗ್

ಚಾಮರಾಜನಗರ: ಗೌರಿ ಗಣೇಶ ಹಬ್ಬದ ಸಂದರ್ಭದಲ್ಲಿ ಗಣೇಶ ಪ್ರತಿಷ್ಠಾಪನೆ, ಕಾರ್ಯಕ್ರಮಗಳ ಆಯೋಜನೆಗೆ ಪರವಾನಗಿ ನೀಡಲು ತಾಲ್ಲೂಕು ಮಟ್ಟದಲ್ಲಿ ಏಕಗವಾಕ್ಷಿ ಸಮಿತಿಯನ್ನು ರಚಿಸಲಾಗಿದ್ದು ಈ ಸಮಿತಿಯಿಂದ ಅನುಮತಿ ಪಡೆಯುವಂತೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ತಿಳಿಸಿದ್ದಾರೆ. 

ಗೌರಿ ಗಣೇಶ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಗಣೇಶ ಮೂರ್ತಿಯನ್ನು ಪ್ರತಿμÁ್ಠಪನೆ, ಉತ್ಸವ ಆಯೋಜಿಸುವ ಆಯೋಜಕರಿಗೆ ಪರವಾನಿಗೆ ನೀಡುವುದು ವಿವಿಧ ಇಲಾಖೆಗಳ ಮುಖ್ಯ ಜವಾಬ್ದಾರಿಯಾಗಿದೆ. ಈ ಕಾರ್ಯವನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ತಾಲ್ಲೂಕು ಹಾಗೂ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕ್ರಮ ವಹಿಸಿ ಗಣೇಶ ಪ್ರತಿμÁ್ಠಪನೆ ಮಾಡುವ ಸ್ಥಳ, ಪೆಂಡಾಲ್, ವಿದ್ಯುತ್ ಸಂಪರ್ಕ ಇನ್ನು ಮುಂತಾದ ಕಾರ್ಯಕ್ರಮಗಳನ್ನು ನಡೆಸುವ ಪರವಾನಗಿಗಳನ್ನು ನೀಡಲು ಕಂದಾಯ, ಲೋಕೋಪಯೋಗಿ, ಇಂಧನ, ಅಗ್ನಿಶಾಮಕ ಮತ್ತು ಪೆÇೀಲಿಸ್ ಇಲಾಖೆಗಳು ಹಾಗೂ ನಗರ ಸ್ಥಳೀಯ ಸಂಸ್ಥೆಗಳು ಸಂಯೋಜಿತವಾಗಿ ಕಾರ್ಯನಿರ್ವಹಿಸಿ ಗಣೇಶ ವಿಗ್ರಹ ಸ್ಥಾಪನೆಗೆ ಅಗತ್ಯವಿರುವ ಪರವಾನಗಿಯನ್ನು ಏಕಗವಾಕ್ಷಿ ಅಡಿಯಲ್ಲಿ ನೀಡಲು ತಾಲ್ಲೂಕು ಮಟ್ಟದಲ್ಲಿ ವಿವಿಧ ಅಧಿಕಾರಿಗಳನ್ನೊಳಗೊಂಡ ಏಕಗವಾಕ್ಷಿ ಸಮಿತಿಯನ್ನು ರಚಿಸಲಾಗಿದೆ.

ತಹಶೀಲ್ದಾರ್ ಅವರು ಸಮಿತಿಯ ಅಧ್ಯಕ್ಷರಾಗಿದ್ದು, ಸಂಬಂಧಪಟ್ಟ ನಗರಸಭೆ ಪೌರಾಯುಕ್ತರು, ಪುರಸಭೆ, ಪಟ್ಟಣ ಪಂಚಾಯಿತಿ, ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಸದಸ್ಯ ಕಾರ್ಯದರ್ಶಿ ಗಳಾಗಿರುತ್ತಾರೆ. ತಾಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿಗಳು, ಪೆÇಲೀಸ್ ವೃತ್ತ ನಿರೀಕ್ಷಕರು, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರು, ಚೆಸ್ಕಾಂನ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ತಾಲ್ಲೂಕು ಅಗ್ನಿಶಾಮಕ ಠಾಣಾಧಿಕಾರಿಗಳು ಸಮಿತಿಯ ಸದಸ್ಯರಾಗಿದ್ದಾರೆ. 

ಗಣಪತಿ ಪ್ರತಿμÁ್ಠಪನೆ, ಕಾರ್ಯಕ್ರಮಗಳ ಆಯೋಜನೆ ಮಾಡುವ ಆಯೋಜಕರು ಆಯಾ ತಾಲ್ಲೂಕು ವ್ಯಾಪ್ತಿಯ ತಾಲ್ಲೂಕು ಕಚೇರಿ ಅಥವಾ ಪೆÇಲೀಸ್ ಠಾಣೆಯಲ್ಲಿ ನಿಗದಿತ ನಮೂನೆಯನ್ನು ಪಡೆದು ಸದರಿ ಸಮಿತಿಯಿಂದ ಅನುಮತಿ ಪಡೆಯಬೇಕು. 

ಹೆಚ್ಚಿನ ಮಾಹಿತಿಗಾಗಿ ಚಾಮರಾಜನಗರ ತಾಲೂಕು ದೂ.ಸಂ 08226-200254 ಇಮೇಲ್ ವಿಳಾಸ   ಣಚಿhಛಿಡಿಟಿ@gmಚಿiಟ.ಛಿom, ಗುಂಡ್ಲುಪೇಟೆ ತಾಲೂಕು ದೂ.ಸಂ 08229-222225 ಇಮೇಲ್ ವಿಳಾಸ ಜssಠಿgಜಟಠಿeಣಣಚಿಟಟuಞ@gmಚಿiಟ.ಛಿom, ಯಳಂದೂರು ತಾಲೂಕು ದೂ.ಸಂ 08226-240029, ಇಮೇಲ್ ವಿಳಾಸ ಜssಠಿಥಿಚಿಟಚಿಟಿಜuಡಿಣಚಿಟಟuಞ@gmಚಿiಟ.ಛಿom, ಕೊಳ್ಳೇಗಾಲ ತಾಲೂಕು ದೂ.ಸಂ 08224-252329, ಇಮೇಲ್ ವಿಳಾಸ 

ಜssಠಿಞoಟಟegಚಿಟಣಚಿಟಟuಞ@gmಚಿiಟ.ಛಿom ಹನೂರು ತಾಲೂಕು ದೂ.ಸಂ 08224-268032, ಇಮೇಲ್ ವಿಳಾಸ ಜssಠಿhಚಿಟಿuಡಿಣಚಿಟಟuಞ@gmಚಿiಟ.ಛಿom ಸಂಪರ್ಕಿಸುವಂತೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಪ್ರಕಟಣೆಯಲ್ಲಿ
[6:06 Pಒ, 8/16/2025] ಖಚಿmesh ಗಿಚಿಡಿಣhಚಿ ಇಟಚಿಞhe ಔಜಿಜಿiಛಿeಡಿ: ತಿಳಿಸಿದ್ದಾರೆ

Leave a Reply

Your email address will not be published. Required fields are marked *