ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಹೊಸ ಕಟ್ಟಡ ನಿರ್ಮಿಸಲು 15ದಿನದೊಳಗೆ ಗುದ್ದಲಿಪೂಜೆ ಶಾಸಕ ಸಿ.ಪುಟ್ಟರಂಗಶೆಟ್ಟಿ

ದೊಡ್ಡರಾಯಪೇಟೆ ಪ್ರಾಥಮಿಕ ಕೃಷಿಪತ್ತಿನ ಸಹಕಾರಸಂಘದಕಚೇರಿಯಲ್ಲಿಎಂಸಿಡಿಸಿಸಿ ನೂತನ ನಿರ್ದೇಶPರಿಗೆ ಸನ್ಮಾನ.
ಚಾಮರಾಜನಗರ: ಮೈಸೂರು-ಚಾಮರಾಜನಗರಜಿಲ್ಲಾಸಹಕಾರ ಬ್ಯಾಂಕ್ ನ ನೂತನ ನಿರ್ದೇಶಕರನ್ನುದೊಡ್ಡರಾಯಪೇಟೆ ಪ್ರಾಥಮಿಕ ಕೃಷಿಪತ್ತಿನ ಸಹಕಾರಸಂಘದ ವತಿಯಿಂದಸಂಘದಕಚೇರಿಯಲ್ಲಿಅಭಿನಂದಿಸಿ ಸನ್ಮಾನಿಸಲಾಯಿತು.

ಸನ್ಮಾನಸ್ವೀಕರಿಸಿದ ಕ್ಷೇತ್ರದ ಶಾಸಕ, ಮೈಸೂರು-ಚಾಮರಾಜನಗರಜಿಲ್ಲಾಸಹಕಾರ ಬ್ಯಾಂಕ್ ನ ನೂತನ ನಿರ್ದೇಶಕ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ಒಂದು ಸಹಕಾರಿಸಂಘದ ಬೆಳವಣಿಗೆಯಲ್ಲಿ ಸಂಘಕ್ಕೆ ಆಯ್ಕೆಯಾಗುವ ನಿರ್ದೇಶಕರಜವಾಬ್ದಾರಿ ಹೆಚ್ಚಾಗಿರುತ್ತದೆ. ಅವರು ಪಾರದರ್ಶಕವಾಗಿ ಕೆಲಸಮಾಡುವ ಇಚ್ಛಾಶಕ್ತಿ ಪ್ರದರ್ಶಿಸಬೇಕು.ಗ್ರಾಮದ ಪ್ರಾಥಮಿಕ ಕೃಷಿಪತ್ತಿನ ಸಹಕಾರಸಂಘದಕಟ್ಟಡ ಹಲವಾರುವರ್ಷಗಳ ಹಿಂದಿನಹಳೇ ಕಟ್ಟಡವಾಗಿದೆ.ಕೂಡಲೇಅದನ್ನುಕೆಡವಿ, ಹೊಸಕಟ್ಟಡನಿರ್ಮಿಸಲು 15ದಿನದೊಳಗೆ ಗುದ್ದಲಿಪೂಜೆ ನೆರವೇರಿಸಲಾಗುವುದುಎಂದರು.

ಗ್ರಾಮದಜನತೆಯಆಶಯಕ್ಕೆ ಬದ್ದರಾಗಿ ಗ್ರಾಮಗಳಲ್ಲಿ ರಸ್ತೆಚರಂಡಿ, ಸಮುದಾಯ ಭವನ ಸೇರಿದಂತೆ ಸರಕಾರ ಮಂಜೂರುಮಾಡುವಅನುದಾನ ಹಾಗೂ ಸೌಲಭ್ಯಗಳನ್ನು ಜನರಿಗೆ ಪ್ರಾಮಾಣಿಕವಾಗಿತಲುಪಿಸುವ ಕೆಲಸ ಮಾಡಲಾಗುವದು,ಎಂದರು ತಿಳಿಸಿದರು.

ಈ ಸಂದರ್ಭದಲ್ಲಿದೊಡ್ಡರಾಯಪೇಟೆ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷಡಿ.ಸೋಮಣ್ಣ, ಹೆಚ್‍ಎಸ್‍ಮಹದೇವಯ್ಯ, ನಿರ್ದೇಶಕರಾದಆರ್,ಮಹದೇವಸ್ವಾಮಿ, ಪಾಪಣ್ಣ. ಜಿ.ಸೋಮಣ್ಣ, ನಾಗರಾಜು, ಪುಟ್ಟಮ್ಮ, ದ್ರಾಕ್ಷೇಣಿ, ಹೆಚ್,ಎಸ್ ಮಹದೇವಪ್ಪ, ಮಾಜಿನಿರ್ದೇಶಕ ಮಹದೇವಯ್ಯ, ಶಿವಣ್ಣ, ಗ್ರಾಪಂಸದಸ್ಯರಾದ ಸಿದ್ದರಾಜು, ಮಹದೇವಸ್ವಾಮಿ, ನಾಗೇಂದ್ರ, ಕೃಷಿಪತ್ತಿನ ಸಹಕಾರಸಂಘದಮಾಜಿಅಧ್ಯಕ್ಷಡಿ.ಎಸ್.ಗಿರೀಶ್, ಎಂ.ಪಿ.ಶಂಕರ್, ಮುಖಂಡರಾದಬಸವರಾಜು, ರವಿಗೌಡ, ರಾಜು, ಎಂಸಿಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಟಿ.ಮಂಜು, ದೊಡ್ಡರಾಯಪೇಟೆ ಪ್ರಾಥಮಿಕ ಕೃಷಿಪತ್ತಿನ ಸಹಕಾರಸಂಘದ ಸಿಇಒ ಮಹದೇವಯ್ಯ, ಸೇರಿದಂತೆಗ್ರಾಮದ ಮುಖಂಡರುಗ್ರಾಮಸ್ಥರು ಹಾಜರಿದ್ದರು.

Leave a Reply

Your email address will not be published. Required fields are marked *