ರಾಮಸಮುದ್ರ ಕ್ರಿಸ್ತರಾಜ ಬಾಲರ ಪಟ್ಟಣ ಶಾಲೆಯಲ್ಲಿ ಗುರುವಂದನಾ, ಸ್ನೇಹ ಸಮ್ಮಿಲನ

ಚಾಮರಾಜನಗರ:  ನಗರದ ರಾಮಸಮುದ್ರ ಕ್ರಿಸ್ತರಾಜ ಬಾಲರಪಟ್ಟಣ ವಿದ್ಯಾಸಂಸ್ಥೆಯ ಹಳೆಯ ವಿದ್ಯಾರ್ಥಿಗಳಿಂದ ಗುರುಗಳಿಗೆ ನಮನ, ಸಿಆರ್ ಬಿಪಿಗೆ  ವಂದನಾ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮ ಭಾನುವಾರ ಅರ್ಥಪೂರ್ಣವಾಗಿ ನಡೆಯಿತು.
25 ವರ್ಷಗಳ ಬಳಿಕ ವಿದ್ಯಾರ್ಥಿಗಳ ಸಮಾಗಮ, ಹಳೇ ದಿನಗಳ ಮೆಲುಕು, ಶಾಲಾ ಕ್ಷಣಗಳ ಸ್ಮರಣೆಯು ಭಾವ ಸ್ಪರ್ಶಿ ಕ್ಷಣಗಳಿಗೆ ಸಾಕ್ಷಿಯಾಯಿತು.
1997-1998 ರ ಸಾಲಿನ ಏಳನೇ ತರಗತಿ ಮತ್ತು 2000-2001 ರ ಸಾಲಿನ  ಹತ್ತನೇ ತರಗತಿಯ ಹಳೆಯ ವಿದ್ಯಾರ್ಥಿಗಳು ಒಂದೆಡೆ ಸೇರಿ ಸಂಭ್ರಮದಲ್ಲಿ ಮಿಂದೆದ್ದರು.
ಶಾಲೆಗಳಲ್ಲಿ ವಿದ್ಯಾಭ್ಯಾಸ ಕಲಿತ ಅಂದಿನ ವಿದ್ಯಾರ್ಥಿಗಳು ಇದೀಗ ವಿವಿಧ ವೃತ್ತಿಯಲ್ಲಿ ಜೀವನವನ್ನು ಕಟ್ಟಿಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ತಮಗೆ ಅಕ್ಷರ ಕಲಿಸಿದ ಗುರುಗಳಿಗೆ ಗೌರವ ಸಲ್ಲಿಸಲು ಇಂದು ಸಮ್ಮಿಲನಗೊಂಡಿದ್ದರು. ವಿವಿಧ ವಿಷಯಗಳ ಶಿಕ್ಷಕರಿಗೆ ಸನ್ಮಾನಿಸಿ ಕಲಿಕಾ ಋಣ ತೀರಿಸುವ ಕೆಲಸ ಮಾಡಿದರು. ಜತೆಗೆ, ಹಳೇ ಸಹಪಾಠಿಗಳೊಂದಿಗೆ ಹರಟೆ ಹೊಡೆದು ಶಾಲಾ ಜೀವನದ ಚಟುವಟಿಕೆಗಳನ್ನು ಸ್ಮರಿಸಿಕೊಂಡರು.
ಗುರುಗಳಿಗೆ ಗೌರವ ಸಮರ್ಪಣೆ:ನಿವೃತ್ತ ಶಿಕ್ಷಕರಾದ ಜೋಸೆಫ್ ರಾಜ್, ಸುಜಯ್ ಕುಮಾರ್‌, ಪುಟ್ಟವೀರಪ್ಪ, ನಿರಂಜನ್ ಕುಮಾರ್, ನಿರ್ಮಲಮೇರಿ, ಎಲಿಜಬೆತ್ ಮೇರಿ, ನಾಗರಾಜು, ಸರ್ವಮಂಗಳ, ಸವಿತಾ, ಫ್ರಾಸ್ಸಿಸ್ ಬಾಬು, ನರಸಿಂಹಯ್ಯ, ಫಿಲೋಮಿನ, ನಟರಾಜು, ಯೂಸೆಫ್, ಫಿಲೋಮಿನ ಮೆಂಥೋರ್, ರೂಲ್ದ್ ಮೇರಿ, ಚಿನ್ನಯ್ಯ, ಮೂರ್ತಿ, ಲಕ್ಷ್ಮಣ್, ಪುಷ್ಷಕುಮಾರಿ, ಸ್ಟೆಲಾಮೇರಿ, ಜೋಸೆಫ್, ಸಿಂಥೆ ಅಲುವೇರ, ಶಿವನಂಜಯ್ಯ, ಮಾರ್ಗರೇಟ್, ಜಾನ್ಪೀಟರ್, ಶಾಂತಕುಮಾರಿ, ಮೇರಿ, ಡ್ಯಾನಿ, ನಾಗರಾಜು  ಅವರಿಗೆ ಗುರುವಂದನೆ  ಸಲ್ಲಿಸಲಾಯಿತು.
ಬ್ರದರ್ ಜಾನ್ ಪೀಟರ್, ಬ್ರದರ್ ಚಾಲ್ಸ್  ಅವರು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಎಲ್ಲಾ ವಿದ್ಯಾರ್ಥಿಗಳು ಶುಭ ಕೋರಿದರು.
ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಮುಖ್ಯ ಶಿಕ್ಷಕ ಸುಜಯ್ ಕುಮಾರ್‌ ಮಾತನಾಡಿ, ನೀವು ಶಾಲೆಯಲ್ಲಿ ಓದುವ ಸಂದರ್ಭದಲ್ಲಿ ನಿಮ್ಮೊಂದಿಗೆ ನಿಷ್ಠುರವಾಗಿ ನಡೆದುಕೊಂಡಿದ್ದೇನು ಅಫಲವನ್ನ ನಿಮ್ಮಲ್ಲಿ ಕಾಣುತ್ತಿದ್ದೇನೆ. ನೀವು ಪರಿಚಯ ಮಾಡಿಕೊಳ್ಳುವಾಗ ನಿಮ್ಮ ಕ್ಷೇತ್ರಗಳಲ್ಲಿ ಛಾಪುಮೂಡಿಸುವ ಮಟ್ಟಕ್ಕೆ ನೀವು ಇದ್ದೀರಿ. ಜವಾಬ್ದಾರಿಯುತ ಕೆಲಸಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದೀರಿ.ನೀವು ನಮ್ಮ ಮಾತಿಗೆ ಬೆಲೆ ಕೊಟ್ಟಿದ್ದೀರಿ. ಅದನ್ನು ನಿಮ್ಮ ಮನಸ್ಸುಗಳಿಗೆ ತೆಗೆದುಕೊಂಡಿದ್ದೀರಿ.ಕಾರ್ಯಪ್ರವೃತ್ತರಾಗಿದ್ದೀರಿ. ಅದರಲ್ಲಿ ಯಶಸ್ಸು ಕಂಡಿದ್ದೀರಿ ಎನ್ನುವುದರಲ್ಲಿ ಯಾವುದೇ ಸಂದೇಶ ಇಲ್ಲ.ನಿಮ್ಮ ನೋಡಿ ತುಂಬಾ ಸಂತಸವಾಗಿದೆ. ಇನ್ನೂ ಮುಂದಿನ ಜೀವನದಲ್ಲೂ ಚೆನ್ನಾಗಿರಿ ಎಂದು ಶುಭ ಕೋರಿದರು.
ನಿಮ್ಮಲ್ಲಿರುವ ಸಂಸ್ಕಾರವನ್ನು ಮುಂದಿನ ಪೀಳಿಗೆಗೂ ಕಲಿಸಿ : ನಿವೃತ್ತ ಶಿಕ್ಷಕ ನಿರಂಜನ್‌ ಕುಮಾರ್ ಮಾತನಾಡಿ, ನಮ್ಮ ಉದ್ಯೋಗವನ್ನು ಪ್ರೀತಿಯಿಂದ ಪ್ರಾಮಾಣಿಕವಾಗಿ ಮಾಡಿದ್ದೇವೆ. ಗೌರವ ಕೊಟ್ರೆ ತುಂಬಾ ಸಂತಸ. ನಿಮ್ಮಲ್ಲಿ ಒಂದು ಕೃತಜ್ಞತೆ ಇದೆ ಉಪಕಾರ ಸ್ಮರಣೆ ಇದೆ. ನಿಮ್ಮಲ್ಲಿ ಒಂದು ಸಂಸ್ಕಾರ ಇದೆ. ಅದು ಇತ್ತೀಚಿನ ದಿನಗಳಲ್ಲಿ ಕಾಣೆಯಾಗಿದೆ.  ನೀವು  ಒಬ್ಬ ಶಿಕ್ಷಕರಾಗಿದ್ದಾರೆ. ನಿಮ್ಮ ಸ್ವಂತ ಮಕ್ಕಳ ಜೊತೆ ನಿಮ್ಮ ಶಾಲೆಯ ಮಕ್ಕಳಿಗೂ ವಿದ್ಯೆಯ ಜೊತೆಗೆ ಸಂಸ್ಕಾರ ಕಲಿಸಬೇಕು. ನಿಮ್ಮಲ್ಲಿರುವ ಸಂಸ್ಕಾರ ಮುಂದಿನ ಪೀಳಿಗೆಗೂ ಧಾರೆ ಎರೆಯಬೇಕು. ಅದನ್ನು ಮನೆಯಲ್ಲಿ ಪೋಷಕರು, ಶಾಲೆಯಲ್ಲಿ ಶಿಕ್ಷಕರು ಅದನ್ನು ಕಲಿಸಬೇಕು ಹೊರತು ಬೇರೆ ಯಾರಿಂದಲ್ಲೂ ಕಲಿಸಲು ಸಾಧ್ಯವಿಲ್ಲ ಎಂದರು.
ಗುರು- ಹಿರಿಯರಿಗೆ, ಪೋಷಕರಿಗೆ, ಮಹಿಳೆಯರಿಗೆ ಗೌರವ ಕೊಡುವ ಕೆಲಸವನ್ನು ನೀವು ಮಾಡುತ್ತಿದ್ದೀರಿ. ಅದನ್ನು ನಿಮ್ಮ ಮಕ್ಕಳಿಗೂ ಕಲಿಸಬೇಕು ಎಂದು ಸಲಹೆ ನೀಡಿದರು.
ವಿದ್ಯಾಸಂಸ್ಥೆ ಸಂಸ್ಥಾಪಕರಾದ ರೆ.ಬ್ರದರ್ ರೋಮಲಸ್ ಅವರ ಪುಣ್ಯ ಸ್ಮರಣೆ ಪ್ರಯುಕ್ತ ವಿದ್ಯಾರ್ಥಿಗಳ ಮೊಂಬತ್ತಿಹಚ್ಚಿ ಒಂದು ನಿಮಿಷ ಮೌನಾಚರಣೆ ಮಾಡಿ ಗೌರವ ಸಲ್ಲಿಸಲಾಯಿತು.
ಸಾಗರ್ ಪ್ರಾಸ್ತಾವಿಕ ಭಾಷಣ ಮಾಡಿದರು.  ಪ್ರಕಾಶ್ ನಿರೂಪಿಸಿದರು, ಶಿವಕುಮಾರ್ ಸ್ವಾಗತಿಸಿದರು, ಡಾ.ನಾಗೇಂದ್ರ ಪ್ರಸಾದ್ ವಂದಿಸಿದರು.ಕಾರ್ಯಕ್ರಮದಲ್ಲಿ ಹಳೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *