ರಾಮಸಮುದ್ರ ಕ್ರಿಸ್ತರಾಜ ಬಾಲರ ಪಟ್ಟಣ ಶಾಲೆಯಲ್ಲಿ ಗುರುವಂದನಾ, ಸ್ನೇಹ ಸಮ್ಮಿಲನ

  • ನಿಮ್ಮ ಮತ್ತು ನಿಮ್ಮ ಕುಟುಂಬದ ಭವಿಷ್ಯ ಉಜ್ವಲವಾಗಲಿ; ಜೋಸೆಫ್ ರಾಜು

ಚಾಮರಾಜನಗರ:  ನಗರದ ರಾಮಸಮುದ್ರ ಕ್ರಿಸ್ತರಾಜ ಬಾಲರಪಟ್ಟಣ ವಿದ್ಯಾಸಂಸ್ಥೆಯ ಹಳೆಯ ವಿದ್ಯಾರ್ಥಿಗಳಿಂದ ಗುರುಗಳಿಗೆ ನಮನ, ಸಿಆರ್ ಬಿಪಿಗೆ  ವಂದನಾ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮ ಭಾನುವಾರ ಅರ್ಥಪೂರ್ಣವಾಗಿ ನಡೆಯಿತು.
   23 ವರ್ಷಗಳ ಬಳಿಕ ವಿದ್ಯಾರ್ಥಿಗಳ ಸಮಾಗಮ, ಹಳೇ ದಿನಗಳ ಮೆಲುಕು, ಶಾಲಾ ಕ್ಷಣಗಳ ಸ್ಮರಣೆಯು ಭಾವ ಸ್ಪರ್ಶಿ ಕ್ಷಣಗಳಿಗೆ ಸಾಕ್ಷಿಯಾಯಿತು.
2003-2004 ನೇ ಸಾಲಿನ  ಹತ್ತನೇ ತರಗತಿಯ ಹಳೆಯ ವಿದ್ಯಾರ್ಥಿಗಳು ಒಂದೆಡೆ ಸೇರಿ ಸಂಭ್ರಮದಲ್ಲಿ ಮಿಂದೆದ್ದರು.
ಶಾಲೆಗಳಲ್ಲಿ ವಿದ್ಯಾಭ್ಯಾಸ ಕಲಿತ ಅಂದಿನ ವಿದ್ಯಾರ್ಥಿಗಳು ಇದೀಗ ವಿವಿಧ ವೃತ್ತಿಯಲ್ಲಿ ಜೀವನವನ್ನು ಕಟ್ಟಿಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ತಮಗೆ ಅಕ್ಷರ ಕಲಿಸಿದ ಗುರುಗಳಿಗೆ ಗೌರವ ಸಲ್ಲಿಸಲು ಇಂದು ಸಮ್ಮಿಲನಗೊಂಡಿದ್ದರು. ವಿವಿಧ ವಿಷಯಗಳ ಶಿಕ್ಷಕರಿಗೆ ಸನ್ಮಾನಿಸಿ ಕಲಿಕಾ ಋಣ ತೀರಿಸುವ ಕೆಲಸ ಮಾಡಿದರು. ಜತೆಗೆ, ಹಳೇ ಸಹಪಾಠಿಗಳೊಂದಿಗೆ ಹರಟೆ ಹೊಡೆದು ಶಾಲಾ ಜೀವನದ ಚಟುವಟಿಕೆಗಳನ್ನು ಸ್ಮರಿಸಿಕೊಂಡರು.
ಗುರುಗಳಿಗೆ ಗೌರವ ಸಮರ್ಪಣೆ:ನಿವೃತ್ತ ಮುಖ್ಯ ಶಿಕ್ಷಕರಾದ ಸುಜಯ್ ಕುಮಾರ್, ಸಹ ಶಿಕ್ಷಕರಾದ ಎನ್.ಎಸ್.ಪುಟ್ಟೀರಪ್ಪ, ಆರ್.ಪಿ.ನಿರಂಜನ್, ನಿರ್ಮಲಮೇರಿ, ಸರ್ವಮಂಗಳ, ಎಲೆಜಬಲ್ ಮರ್ಸಿ, ಸವಿತ, ನಾಗರಾಜು, ಪ್ರಾನ್ಸಿಸ್ ಬಾಬು, ನರಸಿಂಹಯ್ಯ,  ಫಿಲೋಮಿನ, ಚಿನ್ನಯ್ಯ, ಲೂರ್ದ್ ಮೇರಿ, ನಟರಾಜು, ಯೋಸೆಫ್, ಜೋಸೆಫ್, ಸಿಂದಿಯಾ, ಶಿವನಂಜಯ್ಯ, ಮೂರ್ತಿ, ಲಕ್ಷ್ಮಯ್ಯ, ಸೆಲ್ವಮೇರಿ, ತೆರೆಸಾಪುಷ್ಪ, ಶಾಂತಿ, ಮೇರಿ,  ಸಿಬ್ಬಂದಿ ಗಳಾದ. ಡ್ಯಾನಿಯಲ್,  ನಾಗರಾಜು, ದೊರೆ ಅವರಿಗೆ
 ಅವರಿಗೆ ಗುರುವಂದನೆ  ಸಲ್ಲಿಸಲಾಯಿತು.
ಬ್ರದರ್ ಜಾನ್ ಪೀಟರ್, ಬ್ರದರ್ ಚಾಲ್ಸ್  ಅವರು ಕಾರ್ಯಕ್ರಮ ಉದ್ಘಾಟಿಸಿ ಎಲ್ಲಾ ವಿದ್ಯಾರ್ಥಿಗಳು ಶುಭ ಕೋರಿದರು.
ನಿಮ್ಮ, ನಿಮ್ಮ ಕುಟುಂಬದ ಭವಿಷ್ಯ ಉಜ್ವಲವಾಗಲಿ: ನಿವೃತ್ತ ಮುಖ್ಯಶಿಕ್ಷಕ ಜೋಸೆಫ್‌ರಾಜು ಮಾತನಾಡಿ, ನಮ್ಮಗಳನ್ನು ಕರೆದು ಗುರುವಂದನಾ ಕಾರ್ಯಕ್ರಮ ಅಯೋಜನೆ ಮಾಡಿರುವುದು ತುಂಭಾ ಸಂತಸದಾಯಕವಾಗಿದೆ. ಇದು ಗುರುಗಳ ಮೇಲೆ ವಿದ್ಯಾರ್ಥಿಗಳ ಇಟ್ಟಿರುವ ಪ್ರೀತಿ, ವಿಶ್ವಾಸ, ಗೌರವ, ಬಾಂದವ್ಯವಾಗಿದೆ. ಒಂದು ಸಂದರ್ಭದಲ್ಲಿ ನಾವು ನಿಮಗೆ ಗುರುಗಳಾಗಿ ಹಿತವಚನ ಹೇಳುತಿದ್ದೇವು. ಮಾನವೀಯ ಮೌಲ್ಯಗಳನ್ನು ನಿಮಗೆ ಭೋದನೆ ಮಾಡಿದ್ದೇವು. ಅ ಮಾನವೀಯ ಮೌಲ್ಯಗಳ ಜೊತೆಯಲ್ಲಿ ನೀವು ನಿಮ್ಮ ಬದುಕನ್ನು ಸಾಗಿಸುತ್ತಿದ್ದೀರಿ. ನಿಜವಾಗಲೂ ಇದು ಬಹಳ ಸಂತಸದಾಯಕವಾದದ್ದು, ದೇವರು ನಿಮ್ಮನ್ನು ನಿಮ್ಮ ಕುಟುಂಬವನ್ನು ಹೇರಳವಾಗಿ ಆಶೀರ್ವಾದಿಸಿ ಒಳ್ಳೆಯ ಆರೋಗ್ಯಭಾಗ್ಯವನ್ನು ನಿಮಗೂ ನಿಮ್ಮ ಕುಟುಂಬಕ್ಕೂ ದಯಪಾಲಿಸಲಿ ನಿಮ್ಮ ಭವಿಷ್ಯ ಉಜ್ವಲವಾಗಿಸಲಿ ಎಂದು ಆಶಿಸಿದರು
ನಿವೃತ್ತ ಮುಖ್ಯ ಶಿಕ್ಷಕ ಸುಜಯ್ ಕುಮಾರ್‌ ಮಾತನಾಡಿ, ನೀವು ಶಾಲೆಯಲ್ಲಿ ಓದುವ ಸಂದರ್ಭದಲ್ಲಿ ನಿಮ್ಮೊಂದಿಗೆ ನಿಷ್ಠುರವಾಗಿ ನಡೆದುಕೊಂಡಿದ್ದೇನು ಅಫಲವನ್ನ ನಿಮ್ಮಲ್ಲಿ ನಾವಿಂದು ಕಾಣುತ್ತಿದ್ದೇನೆ. ನೀವು ಪರಿಚಯ ಮಾಡಿಕೊಳ್ಳುವಾಗ ನಿಮ್ಮ ಕ್ಷೇತ್ರಗಳಲ್ಲಿ ಛಾಪುಮೂಡಿಸುವ ಮಟ್ಟಕ್ಕೆ ನೀವು ಇದ್ದೀರಿ. ಜವಾಬ್ದಾರಿಯುತ ಕೆಲಸಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದೀರಿ.ನೀವು ನಮ್ಮ ಮಾತಿಗೆ ಬೆಲೆ ಕೊಟ್ಟಿದ್ದೀರಿ. ಅದನ್ನು ನಿಮ್ಮ ಮನಸ್ಸುಗಳಿಗೆ ತೆಗೆದುಕೊಂಡಿದ್ದೀರಿ.ಕಾರ್ಯಪ್ರವೃತ್ತರಾಗಿದ್ದೀರಿ. ಅದರಲ್ಲಿ ಯಶಸ್ಸು ಕಂಡಿದ್ದೀರಿ ಎನ್ನುವುದರಲ್ಲಿ ಯಾವುದೇ ಸಂದೇಶ ಇಲ್ಲ.ನಿಮ್ಮ ನೋಡಿ ತುಂಬಾ ಸಂತಸವಾಗಿದೆ ಎಂದರು.
  ಕಾರ್ಯಕ್ರಮದಲ್ಲಿ ಹಳೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *