ಚಾಮರಾಜನಗರ: ನಗರದ ಬಿ.ರಾಚಯ್ಯ ಜೋಡಿರಸ್ತೆಯಲ್ಲಿರುವ ವಿಶಾಲ್ ಮಾರ್ಟ್ ನ ಮೇಲುಗಡೆ ನೂತನವಾಗಿ ಪ್ರಾರಂಭಿಸಲಾದ ಈಗಲ್ ಫಿಟ್ನೆಸ್ ನ್ನು ಜಿಲ್ಲಾಧಿಕಾರಿ ಶಿಲ್ಪಾನಾಗ್ ಹಾಗೂ ನಗರದ ಸಿದ್ದಮಲ್ಲೇಶ್ವರ ವಿರಕ್ತ ಮಠದ ಶ್ರೀಚೆನ್ನಬಸವಾಸ್ವಾಮೀಜಿ ಉದ್ಘಾಟಿಸಿ ಶುಭ ಕೋರಿದರು.
ಜಿಲ್ಲಾಧಿಕಾರಿ ಶಿಲ್ಪಾನಾಗ್ಜಿ ಮ್ ಉದ್ಘಾಟಿಸಿ ಮಾತನಾಡಿ, ಬಿಪಿ, ಶುಗರ್, ಹೃದಯ ಸಮಸ್ಯೆ ಹೆಚ್ಚಾಗುತ್ತಿರುವ ದಿನಗಳಲ್ಲಿ ಸದೃಢ ದೇಹ, ಉತ್ತಮ ಆರೋಗ್ಯ ವ್ಯಾಯಾಮ ಅವಶ್ಯಕವಾಗಿದ್ದು ಅ ನಿಟ್ಟಿನಲ್ಲಿ ಮಹೇಶ್ ಅವರು ಉತ್ತಮ ವಾತಾವರಣದಲ್ಲಿ ಸುಸಜ್ಜಿತ ಜಿಮ್ ಮಾಡಿರುವುದು ಒಳ್ಳೆಯ ಕೆಲಸವಾಗಿದೆ ಇಂತಹ ಜಿಮ್ ಗಳು ನಗರಕ್ಕೆ ಮತ್ತಷ್ಟು ಅವಶ್ಯಕತೆ ಇದೆ. ಈ ಜಿಮ್ ಯಶಸ್ವಿಯಾಗಲಿ ಎಂದು ಶುಭ ಕೋರಿದರು.
ಸಿದ್ದಮಲ್ಲೇಶ್ವರ ವಿರಕ್ತ ಮಠದ ಶ್ರೀಚೆನ್ನಬಸವಾಸ್ವಾಮೀಜಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ಮಾತನಾಡಿ ಶುಭ ಕೋರಿದರು
ಈ ಸಂದರ್ಭದಲ್ಲಿ ಶ್ರೀಚಾಮರಾಜೇಶ್ವರ ದೇವಸ್ಥಾನ ಆರ್ಚಕ ರಾಮಕೃಷ್ಣ ಭಾರಧ್ವಜ್, ಸರ್ಕಾರಿ ಅಭಿಯೋಜಕ ರಾಜೇಂದ್ರ, ಮಾಲೀಕ ಮಹೇಶ್ ಕುಮಾರ್, ಬಿಲ್ವ ಮಹೇಶ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಕಾರ್ಯಾಧ್ಯಕ್ಷ ಮಹಾದೇವಸ್ವಾಮಿ ಡ್ರಾಮಾ ಮಾಸ್ಟರ್ ಶಿವಣ್ಣ, ಸಾಹಿತಿ ಕೆ.ಶ್ರೀಧರ್, ಸಿರಿ, ರಮೇಶ್ ಬಾಬು, ಆರ್. ನಾಗರಾಜು ಆರ್.ಮಲ್ಲಿಕಾರ್ಜುನ ಇತರರು ಹಾಜರಿದ್ದರು.