
ಚಾಮರಾಜನಗರ: ಥೈಲ್ಯಾಂಡ್ ನಲ್ಲಿ ಇಂದಿನಿಂದ ಮಾ. 8 ರ ವರಗೆ ನಡೆಯಲಿರುವ 30ನೇ ಅಂತರಾಷ್ಟ್ರೀಯ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಪಿಯನ್ ಶಿಪ್ -2026 ರ ಕ್ರೀಡಾಕೂಟದಲ್ಲಿ 100 ಮೀ ಹಾಗೂ 200, ಮೀಟರ್ ಓಟದ ಸ್ಪರ್ಧೆಗೆ ಭಾರತದಿಂದ ಪ್ರತಿನಿಧಿಸಲು ಆಯ್ಕೆಯಾಗಿರುವ ಚಾಮರಾಜನಗರ ತಾಲೂಕಿನ ಆಲೂರು ಹೊಮ್ಮ ಗ್ರಾಮದ ಹೆಚ್ .ಎಲ್ .ಚಂದ್ರಶೇಖರ್ ಅವರಿಗೆ ರಾಜ್ಯದ ಹಾಗೂ ಜಿಲ್ಲೆಯ ಪರವಾಗಿ ಕ್ರೀಡಾಕೂಟದಲ್ಲಿ ಪದಕವನ್ನು ಗೆದ್ದು ಭಾರತ ದೇಶಕ್ಕೆ ಕೀರ್ತಿ ತರಲೆಂದು ಹೊಮ್ಮ ಗ್ರಾಮಸ್ಥರು, ಸ್ನೇಹಿತರು ಶುಭ ಕೋರಿದ್ದಾರೆ.
ಹೊಮ್ಮ ಗ್ರಾಮದ ಲೇಟ್ ಲಿಂಗನಾಯಕ ಹಾಗೂ ಜಯಲಕ್ಷ್ಮಿ ದಂಪತಿಯ ಪುತ್ರರಾದ ಇವರು ರೇಷ್ಮೆ ಇಲಾಖೆಯ ಸಿಲ್ಕ್ ಫಿಲೇಚರ್, ಸಂತೇಮರಹಳ್ಳಿ ಯಲ್ಲಿ ಅಧೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಪ್ರಸ್ತುತ ಅನ್ಯಕಾರ್ಯ ನಿಮಿತ್ತ ಮೈಸೂರಿನ ರೇಷ್ಮೆ ಉಪ ನಿರ್ದೇಶಕರ ಕಛೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುತ್ತಾರೆ.