ಎಚ್.ಎಸ್. ಮಹದೇವಪ್ರಸಾದ್ ಅವರು ಅಭಿವೃದ್ದಿ ಹರಿಕಾರರು : ಎಚ್.ಎಂ. ಗಣೇಶ್ ಪ್ರಸಾದ್

ಹರವೆಯಲ್ಲಿ ದಿ. ಎಚ್.ಎಸ್. ಮಹದೇವಪ್ರಸಾದ್ ಅವರ 67ನೇ ಜಯಂತಿ : ಕಣ್ಣಿನ ತಪಾಸಣೆ ಶಿಬಿರ ಯಶಸ್ವಿ
ಚಾಮರಾಜನಗರ: ದಿ. ಎಚ್.ಎಸ್. ಮಹದೇವಪ್ರಸಾದ್ ಅವರು ಜನಸೇವೆ ತಮ್ಮ ಉಸಿರು ಎಂದುಕೊಂಡಿದ್ದವರು. ಕ್ಷೇತ್ರದ ಅಭಿವೃದ್ದಿಯ ಜೊತೆಗೆ ಜಿಲ್ಲೆಯು ಪ್ರಗತಿಯ ಕನಸು ಕಟ್ಟಿಕೊಂಡು ಯೋಜನೆಗಳನ್ನು ರೂಪಿಸಿದ್ದ ಅಭಿವೃದ್ದಿಯ ಹರಿಕಾರರು ಎಂದು ಗುಂಡ್ಲುಪೇಟೆ ಕ್ಷೇತ್ರದ ಶಾಸಕ ಎಚ್.ಎಂ. ಗಣೇಶ್ ಪ್ರಸಾದ್ ತಿಳಿಸಿದರು.

ತಾಲೂಕಿನ ಹರವೆ ಸಮುದಾಯ ಆರೋಗ್ಯ ಕೇಂದ್ರ ಅವರಣದಲ್ಲಿ ಎಚ್.ಎಸ್. ಮಹದೇವಪ್ರಸಾದ್ ಅವರ ಅಭಿಮಾನಿಗಳ ಬಳಗ, ಆರವಿಂದ್ ಕಣ್ಣಾಸ್ಪತ್ರೆಯ ಸಹಯೋಗದಲ್ಲಿ ಅವರ 67ನೇ ವರ್ಷದ ಜನ್ಮ ದಿನದ ಅಂಗವಾಗಿ ನಡೆದ ಕಣ್ಣಿನ ಉಚಿತ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಗುಂಡ್ಲುಪೇಟೆ ಕ್ಷೇತ್ರದಲ್ಲಿ ಸತತವಾಗಿ ಗೆಲುವು ಸಾಧಿಸಿಕೊಂಡು ಬರುತ್ತಿದ್ದ ಮಹದೇವಪ್ರಸಾದ್ ಅವರು ರಾಜಕಾರಣದ ಜೊತೆಗೆ ಕ್ಷೇತ್ರದ ಅಭಿವೃದ್ದಿಯಲ್ಲಿ ಮುಂಚೂಣಿಯಲ್ಲಿದ್ದರು. ಜಿಲ್ಲಾ ಉಸ್ತುವಾರಿ ಸಚಿವರಾಗಿ ಜಿಲ್ಲೆಯ ಸರ್ವಾಗೀಣ ಅಭಿವೃದ್ದಿ ಮಾಡುವ ಜೊತೆಗೆ ಬಡವರು, ರೈತಾಪಿ ವರ್ಗದವರು ಹಾಗೂ ಎಲ್ಲಾ ವರ್ಗದ ಜನರಿಗೆ ನ್ಯಾಯ ಕಲ್ಪಿಸಿಕೊಡಲು ಬದ್ದರಾಗಿದ್ದರು. ಅವರ ಹುಟ್ಟು ಹಬ್ಬದ ದಿನದಂದು ಹರವೆಯಲ್ಲಿ ಕಳೆದ ಹತ್ತಾರು ವರ್ಷಗಳಿಂದ ನಿರಂತರವಾಗಿ ಸಮಾಜ ಸೇವೆ ಕಾರ್ಯಗಳನ್ನು ಮಾಡುವ ಮೂಲಕ ಅವರನ್ನು ನೆನಪು ಮಾಡಿಕೊಳ್ಳುವ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ನನ್ನ ಪುಣ್ಯ ಎಂದರು.

ನಾನು ಸಹ ಅವರ ಪುತ್ರನಾಗಿ ಜನ ಸೇವೆ ಮಾಡಲು ಕ್ಷೇತ್ರದ ಮತದಾರರು ಆರ್ಶೀವಾದ ಮಾಡಿದ್ದಾರೆ. ನಮ್ಮ ಕುಟುಂಬದ ಮೇಲೆ ಕ್ಷೇತ್ರದ ಜನರು ಇಟ್ಟಿರುವ ಪ್ರೀತಿ ವಿಶ್ವಾಸಕ್ಕೆ ಸದಾ ಚಿರಋಣಿ ಅವರ ಹಾದಿಯಲ್ಲಿ ಸಾಗಿ, ಕ್ಷೇತ್ರದ ಜನರ ಸಂಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದೇನೆ. ಹರವೆ ಭಾಗದ ಅಬಿವೃದ್ದಿಗೂ ಸಹ ವಿಶೇಷ ಆಸಕ್ತಿಯನ್ನು ವಹಿಸಿ, ಎಲ್ಲಾ ಸಹಕಾರದಿಂದ ಮಾದರಿ ಕ್ಷೇತ್ರವವನ್ನಾಗಿಸಲು ಶ್ರಮಿಸೋಣ ಎಂದರು.

ಜಿ.ಪಂ. ಮಾಜಿ ಸದಸ್ಯ ಹಾಗೂ ಅಭಿಮಾನಿ ಬಳಗದ ಅಧ್ಯಕ್ಷ ಕೆರೆಹಳ್ಳಿ ನವೀನ್ ಮಾತನಾಡಿ, ಮಹದೇವಪ್ರಸಾದ್ ಅವರು ಇಂದು ನಮ್ಮೋಂದಿಗೆ ಇಲ್ಲ. ಆದರೆ ಅವರು ಮಾಡಿರುವ ಅಭಿವೃದ್ದಿ ಕೆಲಸಗಳು ಮಾತನಾಡುತ್ತಿದ್ದೇವೆ. 2008ರಲ್ಲಿ ಹರವೆ ಭಾಗ ಗುಂಡ್ಲುಪೇಟೆ ಕ್ಷೇತ್ರಕ್ಕೆ ಸೇರ್ಪಡೆಯಾದ ಬಳಿಕ 6 ಪಂಚಾಯಿತಿಗಳ ಅಬಿವೃದ್ದಿಗೆ ಹೆಚ್ಚಿನ ಒತ್ತು ನೀಡಿದ್ದರು. 20 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ರುವಾರಿ. ಹರವೆ ಭಾಗದ ಗ್ರಾಮಗಳಲ್ಲಿ ಕೆರೆಗಳನ್ನು ನಿರ್ಮಿಸಿಕೊಟ್ಟವರÀÀು. ಕುಡಿಯುವ ನೀರಿಗೆ ತೊಂದರೆಯಾಗದಂತೆ ಯೋಜನೆಗಳನ್ನು ರೂಪಿಸಿದ್ದರು. ಮೂಲಭೂತ ಸೌಲಭ್ಯಗಳಿಗೆ ಹೆಚ್ಚಿನ ಒತ್ತು ನೀಡಿ, ಕ್ಷೇತ್ರದ ಅಭಿವೃದ್ದಿಯ ಜೊತೆಗೆ ಜಿಲ್ಲೆಯಲ್ಲಿ ತಮ್ಮದೇ ಅಧ ಛಾಪು ಮೂಡಿಸಿದ್ದ ನಾಯಕರು ಎಂದು ಬಣ್ಣಿಸಿದರು.

86 ಮಂದಿಗೆ ಕಣ್ಣಿನ ಶಸ್ತ್ರಚಿಕಿತ್ಸೆ : ಬಳಿಕ ನಡೆದ ಕಣ್ಣಿನ ಉಚಿತ ತಪಾಸಣೆ ಶಿಬಿರದಲ್ಲಿ ಕೊಯಮತ್ತೂರಿನ ಅರವಿಂದ ಕಣ್ಣಾಸ್ಪತ್ರೆಯ ವೈದ್ಯರ ತಂಡ ವಿವಿಧ ಕಣ್ಣಿನ ತೊಂದರೆಯುಳ್ಳ 218 ಮಂದಿಯನ್ನು ಪರೀಕ್ಷೆ ಮಾಡಿ, ಕಣ್ಣಿನ ಪೊರೆಯುಳ್ಳ 86 ಮಂದಿಗೆ ಶಸ್ತ್ರಚಿಕಿತ್ಸೆಗಾಗಿ ಕೊಯಮತ್ತೂರಿನ ಅರವಿಂದ್ ಕಣ್ಣಾಸ್ಪತ್ರೆಗೆ ಕರೆದೊಯ್ಯದರು.

ಕಾರ್ಯಕ್ರಮದ ಸಾನ್ನಿಧ್ಯವನ್ನು ಹರವೆ ವಿರಕ್ತ ಮಠದ ಶ್ರೀ ಸರ್ಪಭೂಷಣಸ್ವಾಮೀಜಿ ವಹಿಸಿದ್ದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ.ಮರಿಸ್ವಾಮಿ, ಜಿಲ್ಲಾ ಉಪಾಧ್ಯಕ್ಷ ಬಿ.ಕೆ. ರವಿಕುಮಾರ್, ಮುಖಂಡರಾದ ಮುಕ್ಕಡಹಳ್ಳಿ ರವಿಕುಮಾರ್,ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ನಾಗರತ್ನ, ರೇಖಾ, ಕೆ.ಎಲ್. ರವಿಕುಮಾರ್, ಉದಯಕುಮಾರ್, ಗುರುಬಸಪ್ಪ, ಕೆಬ್ಬೇಪುರ ಹರೀಶ್, ಕೆಂಪರಾಜು, ರಾಜಕುಮಾರ್, ಮಧುಸೂಧನ್, ಕೆ.ಎಸ್. ರೇವಣ್ಣ, ರೇವಪ್ಪ, ಮಾಸ್ಟರ್ ಮಾದಪ್ಪ, ಡಿ.ಎನ್. ಶಿವಕುಮಾರ್, ಮಂಜುನಾಥ್, ಮಲ್ಲೇಶ್, ಕುಮಚಹಳ್ಳಿ ಸ್ವಾಮಿ, ಹರವೆ ರವಿ, ಕೆಬ್ಬೇಪುರ ಹರೀಶ್, ಕೇತಹಳ್ಳಿ ಶಿವಪಾದಪ್ಪ, ಮಲೆಯೂರು ನಾಗರಾಜು, ಗ್ರಾ.ಪಂ. ಸದಸ್ಯ ಬಸವಣ್ಣ, ಬಸವಣ್ಣ ಹಳೇಪುರ, ರಂಗಸ್ವಾಮಿ, ಮಹದೇವಯ್ಯ, ಕೆರೆಹಳ್ಳೀ ರಾಜೇಂದ್ರ ಮೊದಲಾಧವರು ಇದ್ದರು.

Leave a Reply

Your email address will not be published. Required fields are marked *